ನವೀನ್ ಅನಾರೋಗ್ಯದ ಹಿಂದೆ ಪಿತೂರಿ?: ಮೋದಿ

| Published : May 30 2024, 01:00 AM IST / Updated: May 30 2024, 04:17 AM IST

ಸಾರಾಂಶ

ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಆರೋಗ್ಯ ದಿಢೀರ್‌ ಹದಗೆಟ್ಟಿರುವ ಹಿಂದೆ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬೆಳವಣಿಗೆ ಕುರಿತು ತನಿಖೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ಬಾರಿಪದ/ಬಾಲಾಸೋರ್‌: ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಆರೋಗ್ಯ ದಿಢೀರ್‌ ಹದಗೆಟ್ಟಿರುವ ಹಿಂದೆ ಷಡ್ಯಂತ್ರದ ಶಂಕೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬೆಳವಣಿಗೆ ಕುರಿತು ತನಿಖೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ವೇದಿಕೆಯೊಂದಲ್ಲಿ ನವೀನ್‌ ಭಾಷಣ ಮಾಡುವಾಗ ಅವರ ಕೈ ನಡುಗುತ್ತಿದ್ದ ಮತ್ತು ಮಾತು ತೊದಲುತ್ತಿದ್ದ ಹಾಗೂ ಈ ವೇಳೆ ಅವರ ಆಪ್ತ ಪಾಂಡಿಯನ್‌ ನವೀನ್‌ರ ಕೈ ಹಿಡಿದಿಡುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮೋದಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ.ಒಡಿಶಾದ ಮಯೂರ್‌ಭಂಜ್ ಮತ್ತು ಬಾಲಾಸೋರ್‌ನಲ್ಲಿ ಬುಧವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ,‘ ನವೀನ್ ಬಾಬು ಅವರ ಹಿತೈಷಿಗಳು ಅವರ ಅನಾರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರ ಆರೋಗ್ಯ ಹದೆಗೆಡುತ್ತಿದೆ. ಇದರ ಹಿಂದೆ ಷಡ್ಯಂತ್ರವಿದೆಯೇ? ಅವರ ಪರವಾಗಿ ಪ್ರಸ್ತುತ ಪಟ್ನಾಯಕ್ ಸರ್ಕಾರ ನಡೆಸುತ್ತಿರುವ ಲಾಭಿ ಇದಕ್ಕೆ ಕಾರಣನಾ?’ ಎಂದು ಪ್ರಶ್ನಿಸಿದರು.

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಸರ್ಕಾರವನ್ನು ರಚಿಸಿದರೆ, ಪಟ್ನಾಯಕ್ ಆರೋಗ್ಯದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುತ್ತೇವೆ. ಅವರ ಅನಾರೋಗ್ಯದ ಹಿಂದಿರುವ ರಹಸ್ಯದ ಬಗ್ಗೆ ಒಡಿಶಾ ರಾಜ್ಯದ ಜನರು ತಿಳಿಯಬೇಕು’ ಎಂದು ಹೇಳಿದರು.