ಜೆಡಿಎಸ್‌ನಲ್ಲಿ ಅಭ್ಯರ್ಥಿ ಘೋಷಣೆಗೆ ಒದ್ದಾಟ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Mar 25 2024, 12:46 AM IST / Updated: Mar 25 2024, 03:38 PM IST

ಜೆಡಿಎಸ್‌ನಲ್ಲಿ ಅಭ್ಯರ್ಥಿ ಘೋಷಣೆಗೆ ಒದ್ದಾಟ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬೆಂಗಳೂರು ಜೆ.ಪಿ.ನಗರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬೆಂಗಳೂರು ಜೆ.ಪಿ.ನಗರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖ ನಾಯಕರು, ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕರು, ಜಿಲ್ಲಾ ಮಹಿಳಾ ಘಟಕ, ಹಿಂದುಳಿದ ವರ್ಗ, ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಮುಂಚೂಣಿ ನಾಯಕರ ಸಭೆಯಲ್ಲಿ ಮಾತನಾಡಿದರು.

ನಮ್ಮಲ್ಲಿ ಗೊಂದಲ, ಭಿನ್ನಾಭಿಪ್ರಾಯ, ವೈಮನಸ್ಸು ಯಾವುದೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಬಗ್ಗೆ ಎಲ್ಲೂ ಅಪಸ್ವರ ಇಲ್ಲ, ಇದು ಕಾಂಗ್ರೆಸ್ ನ ಒಗ್ಗಟ್ಟು ತೋರಿಸುತ್ತದೆ ಎಂದರು.

ಜಿಲ್ಲೆಯಲ್ಲಿ ದಿನೇಶ್ ಗೂಳಿಗೌಡರಿಂದ ಆರಂಭವಾದ ಕಾಂಗ್ರೆಸ್ ಗೆಲುವಿನ ಓಟ ಈ ಚುನಾವಣೆಯಲ್ಲಿ ಕೂಡ ಮುಂದುವರೆಯಲಿದೆ. ಈ ಬಾರಿ ಕೂಡ ಗೆಲ್ಲುವ ಅವಕಾಶ ನಮಗಿದೆ. ಶೇ.75ರಷ್ಟು ಮಹಿಳೆಯರು ಕಾಂಗ್ರೆಸ್ ಪರ ಇದ್ದಾರೆ. 

ಎಲ್ಲಾ ವರ್ಗದ ಜನರು ಪಕ್ಷವನ್ನು ಬೆಂಬಲಿಸುತ್ತಿರುವುದಲ್ಲದೆ, ಶೇ.40ರಷ್ಟು ಒಕ್ಕಲಿಗರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ ಎಂಬುದು ಸರ್ವೆ ವರದಿಯಿಂದ ಗೊತ್ತಾಗಿದೆ. 

ಸುಳ್ಳು ಹೇಳುವ ನರೇಂದ್ರ ಮೋದಿ ಅವರ ಪಕ್ಷಕ್ಕೆ ಜೆಡಿಎಸ್ ಶರಣಾಗತಿಯಾಗಿದೆ. ಇದರಿಂದ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆಗೆ ವಾಲಿವೆ ಎಂದರು.

ನಾವು ಯಾರನ್ನೂ ಟೀಕೆ ಮಾಡಬಾರದು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗೆಲುವು ನಮ್ಮದಾಗಲಿದೆ. ಇನ್ನು 30 ದಿನ ‘ನಮ್ಮ ಜಿಲ್ಲೆ, ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕರ್ತರು ಕೆಲಸ ಮಾಡಬೇಕು. 

ನಾಮಪತ್ರ ಸಲ್ಲಿಕೆ ದಿನವೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಲಕ್ಷಣಗಳು ಕಾಣಬೇಕು. ಆ ರೀತಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಹಿಂದಿನ ಅಂಕಿಅಂಶಗಳನ್ನು ನೋಡಿದರೆ ಮಂಡ್ಯದಲ್ಲಿ ಕಾಂಗ್ರೆಸ್ ಗೆ ಮೂಲ ಮತಗಳಿವೆ ಎಂಬುದನ್ನು ಮನಗಾಣಬೇಕು. ಕಾರ್ಯಕರ್ತರು ಸ್ವಲ್ಪ ಶ್ರಮಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. 

ನಾವು ಗೆಲುವು ಸೋಲಿನ ಅವಲೋಕನ ಮಾಡಬೇಕು. ಜೆಡಿಎಸ್ ಈಗ ರಾಷ್ಟ್ರೀಯ ಪಕ್ಷದ ಮೊರೆ ಹೋಗಿದ್ದು, ಅಂಕಿಸಂಖ್ಯೆ ಜೊತೆ ಜಾತಿ ಆಧಾರಿತ ಚುನಾವಣೆ ಮಾಡಲು ಹೊರಟಿದೆ. ಹೀಗಾಗಿ ನಾವು ಐದು ವರ್ಷದ ಹಿಂದಿನ ಲೋಕಸಭಾ ಚುನಾವಣೆ ಫಲಿತಾಂಶವನ್ನು ಅವಲೋಕನ ಮಾಡಿಕೊಳ್ಳಬೇಕು ಎಂದರು.

ವ್ಹೀಲ್ ಚೇರಲ್ಲಿ ಬರ್ತಾರೋ...:

ಎದುರಾಳಿ ಅಭ್ಯರ್ಥಿ ವ್ಹೀಲ್ ಚೇರ್ ನಲ್ಲಿ ಬರ್ತಾರೋ, ಕಣ್ಣೀರಾಕಿಕೊಂಡು ಬರ್ತಾರೋ ಗೊತ್ತಿಲ್ಲ. ನಾವು ಭಾವನಾತ್ಮಕ ವಿಚಾರ ಮೆಟ್ಟಿ ನಿಲ್ಲಬೇಕು. ಮಾತುಗಳಿಗೆ ಕಡಿವಾಣ ಹಾಕಬೇಕು, ಆಂತರಿಕ ಭಿನ್ನಮತ ತೊರೆಯಬೇಕು. ನಮ್ಮ ಮನಸ್ಥಿತಿ ಒಗ್ಗೂಡಿದರೆ ಗೆಲವು ಗ್ಯಾರಂಟಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನಲ್ಲ, ನೀವೇ ಅಭ್ಯರ್ಥಿ. ಕಾರ್ಯಕರ್ತರ ಪರಿಶ್ರಮದಿಂದ ಗೆಲವು ಸಾಧ್ಯ. ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ಮಾತು ಕಡಿಮೆ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ. ರವಿಕುಮಾರ್, ಕದಲೂರು ಉದಯ್‌, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಮಾಜಿ ಶಾಸಕರಾದ ಪ್ರಕಾಶ್, ರಾಮಕೃಷ್ಣ, ಅಪ್ಪಾಜಿಗೌಡ, ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಕಾಂಗ್ರೆಸ್‌ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮುಖಂಡರಾದ ದೇವರಾಜ್, ಯೋಗೇಶ್, ಸುರೇಶ್, ವಿಜಯಕುಮಾರ್ ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.