ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ತಮಿಳುನಾಡಿನ ಡಿಎಂಕೆ ಪಕ್ಷ 21 ಅಭ್ಯರ್ಥಿಗಳ ಪಟ್ಟಿ ಬುಧವಾರ ಬಿಡುಗಡೆ ಮಾಡಿದೆ.

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ತಮಿಳುನಾಡಿನ ಡಿಎಂಕೆ ಪಕ್ಷ 21 ಅಭ್ಯರ್ಥಿಗಳ ಪಟ್ಟಿ ಬುಧವಾರ ಬಿಡುಗಡೆ ಮಾಡಿದೆ.

 21 ಅಭ್ಯರ್ಥಿಗಳಲ್ಲಿ ಹಾಲಿ ಸಂಸದರಾದ ದಯಾನಿಧಿ ಮಾರನ್‌, ಎಸ್. ಜಗದ್ರಕ್ಷನ್‌, ಕನಿಮೋಳಿ, ಟಿ. ಆರ್. ಬಾಲು, ಎ. ರಾಜಾ ಸೇರಿದ್ದಾರೆ. 

21 ಜನರಲ್ಲಿ 11 ಹೊಸಬರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಏ.19ರಂದು ನಡೆಯುವ ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ಕ್ಷೇತ್ರಗಳಿಗೆ ಈ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.