ಸಂತರು ಬಿಜೆಪಿ ಪರ ಎಂದ ದೀದಿಗೆ ನೋಟಿಸ್‌

| Published : May 21 2024, 12:31 AM IST / Updated: May 21 2024, 04:33 AM IST

ಸಾರಾಂಶ

‘ರಾಮಕೃಷ್ಣ ಮಿಷನ್‌ ಹಾಗೂ ಭಾರತ ಸೇವಾಶ್ರಮ ಸಂಘದಲ್ಲಿರುವ ಕೆಲ ಸಂತರು ಬಿಜೆಪಿ ಪರ, ನವದೆಹಲಿಯಿಂದ ಬರುವ ಆದೇಶಗಳಿಗೆ ಅವರು ಬದ್ಧರಾಗಿರುತ್ತಾರೆ’ ಎಂದಿರುವ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರತ ಸೇವಾಶ್ರಮ ಸಂಘದ ಕಾರ್ತಿಕ್  ಲೀಗಲ್ ನೋಟಿಸ್‌ ನೀಡಿದ್ದಾರೆ.

ಕೋಲ್ಕತಾ: ‘ರಾಮಕೃಷ್ಣ ಮಿಷನ್‌ ಹಾಗೂ ಭಾರತ ಸೇವಾಶ್ರಮ ಸಂಘದಲ್ಲಿರುವ ಕೆಲ ಸಂತರು ಬಿಜೆಪಿ ಪರ, ನವದೆಹಲಿಯಿಂದ ಬರುವ ಆದೇಶಗಳಿಗೆ ಅವರು ಬದ್ಧರಾಗಿರುತ್ತಾರೆ’ ಎಂದಿರುವ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರತ ಸೇವಾಶ್ರಮ ಸಂಘದ ಕಾರ್ತಿಕ್ ಮಹಾರಾಜ್ (ಸ್ವಾಮಿ ಪ್ರದೀಪ್ತಾನಂದ) ಮಮತಾಗೆ ಲೀಗಲ್ ನೋಟಿಸ್‌ ನೀಡಿದ್ದಾರೆ.

ಮಮತಾ ತಮಗೆ ಮಾನಹಾನಿ ಮಾಡಿದ್ದಾರೆಂದು ಕಾರ್ತಿಕ್‌ ಮಹಾರಾಜ್‌ ಕಿಡಿಕಾರಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.‘ಸನ್ಯಾಸಿಗಳು ಸಂಪ್ರದಾಯಗಳ ಮೌಲ್ಯಗಳಿಗೆ ಧಕ್ಕೆಯಾಗದಂತೆ ತಮ್ಮ ಜೀವನ ನಡೆಸುತ್ತಾರೆ. ರಾಜಕೀಯದ ಜೊತೆಗೆ ಕಾರ್ತಿಕ್ ಮಹಾರಾಜ್‌ಗೆ ಯಾವುದೇ ನಂಟಿಲ್ಲ. ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತಪ್ಪು ಹಾದಿಗೆಳೆಯಲಾಗುತ್ತಿದೆ. ಸಂತರ ವಿರುದ್ಧ ಉದ್ದೇಶಪೂರ್ವಕ ಆರೋಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ 48 ಗಂಟೆಯೊಳಗೆ ಸುದ್ದಿಗೋಷ್ಠಿ ಕರೆದು ಬೇಷರತ್‌ ಕ್ಷಮೆಯಾಚಿಸಬೇಕು’ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ. .

ಒಂದು ವೇಳೆ ಟಿಎಂಸಿ ನಾಲ್ಕು ದಿನದೊಳಗೆ ನೋಟಿಸ್‌ಗೆ ಉತ್ತರಿಸಲು ವಿಫಲವಾದರೆ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.