ಕೋಚಿಮುಲ್‌ ಸಾಧನೆಗೆ ಸಿದ್ದರಾಮಯ್ಯನವರ ಸರ್ಕಾರದ ನೆರವು ಕಾರಣ : ಅಧ್ಯಕ್ಷ ಕೆ.ವೈ.ನಂಜೇಗೌಡ

| Published : Oct 26 2024, 12:49 AM IST / Updated: Oct 26 2024, 05:32 AM IST

ಸಾರಾಂಶ

ಸಿದ್ದರಾಮಯ್ಯನವರ ಸರ್ಕಾರ ಆಡಳಿತಕ್ಕೆ ಬಂದ ಒಂದೂವರೆ ವರ್ಷದಲ್ಲಿ ನೀಡಿದ ಹೆಚ್ಚಿನ ಸಹಕಾರದಿಂದ ಹಾಗೂ ಆಡಳಿತ ಮಂಡಳಿಯು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

 ಕೋಲಾರ :  ಕೋಚಿಮುಲ್ ಆಡಳಿತ ಮಂಡಳಿಯ 5 ವರ್ಷದಲ್ಲಿ ನೂತನ ಎಂ.ವಿ.ಕೆ ಗೋಲ್ಟನ್ ಡೇರಿ, ನೂತನ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಯೋಜನೆ, ಐಸ್ ಕ್ರೀಂ ಉತ್ಪಾದನಾ ಘಟಕ ಯೋಜನೆ, ನೂತನ ವಿದ್ಯಾರ್ಥಿನಿಯರ ವಸತಿ ಗೃಹ ಪ್ರಾರಂಭ ಹಾಗೂ ವಿಭಜಿತ ಚಿಕ್ಕಬಳ್ಳಾಪುರದಲ್ಲಿ ಸ್ಯಾಚಿಟ್ ಹಾಲಿನ ಉತ್ಪಾದನಾ ಘಟಕ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ.

ವಿಶೇಷವಾಗಿ ಸಿದ್ದರಾಮಯ್ಯನವರ ಸರ್ಕಾರ ಆಡಳಿತಕ್ಕೆ ಬಂದ ಒಂದೂವರೆ ವರ್ಷದಲ್ಲಿ ನೀಡಿದ ಹೆಚ್ಚಿನ ಸಹಕಾರದಿಂದ ಹಾಗೂ ಆಡಳಿತ ಮಂಡಳಿಯು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ತಾಲೂಕಿನ ಬೆಳಗಾನಹಳ್ಳಿ ಕೋಚಿಮುಲ್ ಸಭಾಂಗಣದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ನೂತನ ಎಂ.ವಿ.ಕೆ ಗೋಲ್ಡನ್ ಡೇರಿ ಯೋಜನೆಯನ್ನು 185 ಕೋಟಿ ವೆಚ್ಚದಲ್ಲಿ 7.5 ಲಕ್ಷ ಲೀಟರ್‌ನಿಂದ 10 ಲಕ್ಷ ಲೀಟರ್‌ವರೆಗೆ ವಿಸ್ತರಿಸಬಹುದಾದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಸೋಲಾರ್ ಘಟಕಕ್ಕೆ 60 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕಿನ ಹೊಳಲಿ ಬಳಿ 50 ಎಕರೆ ಭೂಮಿಯಲ್ಲಿ ಸ್ಥಾಪನೆ ಮಾಡುತ್ತಿದ್ದು, 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ ಇದರಿಂದ ಒಕ್ಕೂಟಕ್ಕೆ ಪ್ರತಿ ಮಾಹೆ 2 ಕೋಟಿ ರೂ ಉಳಿತಾಯವಾದಂತಾಗಿ ಇದನ್ನು ರೈತರಿಗೆ ವಿನಿಯೋಗಿಸಲು ಬಳಸಬಹುದಾಗಿದೆ ಎಂದು ಹೇಳಿದರು. 

ಚಿಂತಾಮಣಿಯ ಶೀಥಲ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ 55ಕೋಟಿ ರೂ. ವೆಚ್ಚದಲ್ಲಿ 10 ಸಾವಿರದಿಂದ 15 ಸಾವಿರ ಲೀಟರ್ ಸಾಮಾರ್ಥ್ಯದ ಐಸ್‌ಕ್ರೀಂ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ಕರ್ನಾಟಕ ಹಾಲು ಮಹಾಮಂಡಳಿಯಿಂದ ರಾಜ್ಯದ 15 ಹಾಲು ಒಕ್ಕೂಟದ ವ್ಯಾಪ್ತಿಗೆ ಹೈನುಗಾರಿಕೆ ರೈತರ ಕುಟುಂಬದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಇದ್ದ ಒಂದೇ ಹಾಸ್ಟೆಲ್‌ನಿಂದ ಕೋಚಿಮುಲ್ ಒಕ್ಕೂಟದ ಹೈನುಗಾರರ ಕುಟುಂಬದ ಹೆಣ್ಣು ಮಕ್ಕಳಿಗೆ ಅವಕಾಶದ ಕೊರತೆಯಿಂದಾಗಿ ಉಭಯ ಜಿಲ್ಲೆಯ ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ಹೆಬ್ಬಾಳದ ಬಳಿ 12 ಸಾವಿರ ಚದರಡಿ ಜಾಗದಲ್ಲಿ ಸಸಜ್ಜಿತವಾದ ಹಾಸ್ಟೆಲ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ವಿವರಿಸಿದರು

.ಚಿಕ್ಕಬಳ್ಳಾಪುರದಲ್ಲಿ 7.5 ಲಕ್ಷ ಲೀಟರ್ ಸಾಮರ್ಥ್ಯದ ಸ್ಯಾಚೆಟ್ ಹಾಲಿನ ಉತ್ಪಾದನ ಘಟಕವನ್ನು 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮೋಧನೆ ಪಡೆದು ಮುಂದಿನ ಕ್ರಮ ಕೈಗೊಂಡಿದೆ, ಇದು ಕಳೆದ 5 ವರ್ಷದಲ್ಲಿ ಮಾಡಿರುವ ಸಾಧನೆ ಒಕ್ಕೂಟದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಿಸಬಹುದಾಗಿದೆ. ಬೆಂಗಳೂರು ಹಾಲು ಒಕ್ಕೂಟದಿಂದ ವಿಭಜನೆಯಾದ ನಂತರದಲ್ಲಿ ಕೋಚಿಮುಲ್ ಸರ್ವತೋಮುಖ ಅಭಿವೃದ್ದಿಗೆ ನಿರ್ದೇಶಕರು ಹಾಗೂ ಜನಪ್ರತಿಗಳು ಸಹಕಾರದಿಂದ ಅಭಿವೃದ್ದಿ ಪಥದತ್ತ ಸಾಗಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿತ್ತು, ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ1987 ರಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟು ನೂತನ ಕೋಚಿಮುಲ್ ಘಟಕವನ್ನು ಪ್ರಾರಂಭಿಸಿ 37 ವರ್ಷದಿಂದ ಜೊತೆಯಾಗಿ ನಡೆಸಿಕೊಂಡು ಬಂದಿದೆ. ಕೇವಲ 460 ಸಂಘಗಳಿಂದ ಪ್ರಾರಂಭಿಸಿದಾಗ 1.57 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದಿದ್ದು ಇಂದು1937 ಸಂಘಗಳಿಗೆ ವಿಸ್ತರಿಸಿ ದಿನವಹಿ 11.37 ಲಕ್ಷ ಕೆ.ಜಿ. ಹಾಲು ಶೇಖರಣೆ ಮಾಡಲಾಗುತ್ತಿದೆ. 

ವಿಶೇಷವಾಗಿ236 ಮಹಿಳಾ ಸಂಘಗಳು ಕಾರ್ಯಚರಣೆಯಲ್ಲಿದೆ ಎಂದು ತಿಳಿಸಿದರು. ಒಕ್ಕೂಟದ ಆರಂಭದಲ್ಲಿ 8.56 ಲಕ್ಷ ಶೇರು ಬಂಡವಾಳ ಪ್ರಸಕ್ತ ಸಾಲಿನ ಅಂತ್ಯಕ್ಕೆ 76.08 ಕೋಟಿಗೆ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಹಾಲು 5,85,810 ಮೊಸರು 1 89896   ಲೀಟರ್, ಯು.ಹೆಚ್.ಟಿ 7,33,427 ಲೀಟರ್ ವಿತರಣೆಯಾಗುತ್ತಿದ್ದು, 2019 ರಿಂದ 2024  ಅವಧಿಯಲ್ಲಿ ರೂ 24 ರಿಂದ 39.90 ರೂ.ಗಳಾಗಿದೆ ಇದರಲ್ಲಿ 34.50 ರೂಗಳು ಸಂಘಕ್ಕೆ ಹೋಗಲಿದೆ. ರಾಜ್ಯದಲ್ಲಿ ಮಂಗಳೂರು ಹೊರತು ಪಡಿಸಿದರೆ ಕೋಲಾರ ಜಿಲ್ಲೆಯಲ್ಲಿಯೇ ಅತಿಹೆಚ್ಚು ಧರವನ್ನು ರೈತರಿಗೆ ಪಾವತಿಸುತ್ತಿದೆ.  ಶೇ.8.06 ರಷ್ಟಿದ್ದ ಗುಣಮಟ್ಟ 9.87ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದರು.

ವಿಮಾ ಯೋಜನೆ 40 ರಿಂದ 50 ಸಾವಿರ ರೂ ಇದುದ್ದನ್ನು 70 ಸಾವಿರಕ್ಕೆ ಏರಿಕೆ ಮಾಡಿದೆ. ಹಾಲು ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 3 ಲಕ್ಷ ರೂ ಕೇಂದ್ರ ಸರ್ಕಾರದಿಂದ 5 ಲಕ್ಷ ರೂ ಹಾಗೂ ಪ್ರತಿ ತಾಲ್ಲೂಕಿಗೆ 2.5 ಕೋಟಿ ರೂ ಕ್ಯಾಂಪ್ ಕಟ್ಟಡ ನಿರ್ಮಾಣಕ್ಕೆ ವೆಚ್ಚ ಮಾಡುತ್ತಿದೆ. ಇದರೊಂದಿಗೆ ಅನೇಕ ಪರಿಕರಗಳು, ತರಭೇತಿ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ವಿವರಿಸಿದರು.

ಸರ್ಕಾರದ ಬದಲಾವಣೆಯಿಂದ ಕಾಮಗಾರಿಗಳು ತಡೆಯಾಗಿತ್ತು ಪ್ರಮುಖವಾದ 3 ಯೋಜನೆಗಳು 360 ಕೋಟಿ ರೂಗಳಾಗಿದೆ. ಸಾಲ ಪಡೆಯದೆ ಈ ಯೋಜನೆಗಳು ಅನುಷ್ಠನಕ್ಕೆ ತರಲಿದೆ ಹಾಲಿನ ಉತ್ಪಾದಕರಿಗೆ ತೊಂದರೆಯಾಗದಂತೆ, ಪ್ರತಿ ಲೀಟರ್‌ಗೆ 1 ರೂ ಮೀಸಲಿಟ್ಟು, 260 ಕೋಟಿ ವರ್ಷದಲ್ಲಿ ಶೇಖರಣೆ ಸೋಲರ್ ವಿದ್ಯುತ್‌ನಲ್ಲಿ ಒಂದು ಮುಕ್ಕಾಲು ಕೋಟಿ ರೂ ಉಳಿಕೆಯಾಗಲಿದೆ. 

ಪ್ರತಿ ದಿನ 12 ಲಕ್ಷ ರೂ.ನಂತೆ 3 ವರ್ಷದಲ್ಲಿ ಎಲ್ಲಾ ಸಾಲ ತೀರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.ಹಾಲು ಒಕ್ಕೂಟದಲ್ಲಿ 4 ಮಂದಿ ಹಿರಿಯ ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರು ಇದ್ದು ಅವರ ಮಾರ್ಗದರ್ಶನದಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಿದೆ. ಸರ್ಕಾರವು ನೀಡಿದ ಸಹಕಾರ 2 ಜಿಲ್ಲೆಯಲ್ಲಿ ಹಾಲು ಒಕ್ಕೂಟ ಪ್ರಗತಿ ಸಾಧಿಸಲು ಸಾದ್ಯವಾಗಿದೆ ಎಂದು ತಿಳಿಸಿದರು.

ಒಕ್ಕೂಟದ ವಿಭಜನೆಯು ಅತುರದಿಂದ ಮಾಡಿದ ತೀರ್ಮಾನವಾಗಿತ್ತು ಇದರಿಂದ ಹಾಲು ಉತ್ಪಾದಕರಿಗೆ ಅವಮಾನವಾದಂತಾಗಿತ್ತು. ಸರ್ಕಾರವು ವಿಭಜನೆಗೆ ಒಪ್ಪಿಗೆಕೊಡದಿದ್ದರೆ ಯಾರು ಹೇಳಿದರೂ ಆಗುತ್ತಿರಲಿಲ್ಲ. ನಮ್ಮ ಒಕ್ಕೂಟ ಮಾತ್ರವಲ್ಲ ರಾಜ್ಯದ ಅನೇಕ ಒಕ್ಕೂಟಗಳು ವಿಭಜನೆಗೊಂಡಿದೆ. ಇನ್ನು 6 ತಿಂಗಳ ಒಳಗೆ ಒಕ್ಕೂಟದಲ್ಲಿ ಚುನಾವಣೆಗಳು ನಡೆದು ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರಲಿದೆ. 

ಎಲ್ಲರ ಸಹಕಾರದಿಂದ ಮುಂದೆ ಇನ್ನು ಒಳ್ಳೆಯ ಕೆಲಸಗಳು ಮಾಡಲು ಅವಕಾಶವಿದೆ. ತೋಟಗಾರಿಕೆ ಇಲಾಖೆಯಿಂದ 10 ಎಕರೆ ಜಾಗ ಪಡೆದು ಪ್ಯಾಕಿಂಗ್ ಮಿಷನ್ ಅಳವಡಿಸುವ ಯೋಜನೆ ಇದೆ. ವಿಭಜನೆ ಬೇಸರವಾದರೂ ಅನಿವಾರ್ಯವಾಗಿತ್ತು. ವಿಭಜನೆ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದರು.ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವು ನ್ಯಾಯಾಲಯದಲ್ಲಿ ದಾಖಲು ಮಾಡಿದೆ, ಆದರೆ ನ್ಯಾಯಲಯದಲ್ಲಿ ಆರೋಪವು ಹುಸಿಯಾಗಿ ಆಡಳಿತ ಮಂಡಲಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ ಅವರು, ಶೇ.57 ರಷ್ಟು ಪಾಲು ಕೋಲಾರಕ್ಕೆ ಹಾಗೂ ಶೇ.೪೩ ರಷ್ಟು ಚಿಕ್ಕಬಳ್ಳಾಪುರಕ್ಕೆ ಸಿಗಲಿದೆ. ಮುಂದಿನ ೨ ಎರಡು ವರ್ಷದಲ್ಲಿ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿದೆ. ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟಗಳಲ್ಲಿ ನಿರ್ದೇಶಕರ ಸಂಖ್ಯೆ ತಲಾ 13 ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದರು.ಕೋಚಿಮುಲ್ ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್, ಕಾಂತರಾಜ್, ಹನುಮೇಶ್, ಕಾಂತರಾಜ್, ಡಿ.ವಿ.ಹರೀಶ್, ನೂತನ ನಾಮಕರಣ ಸದಸ್ಯ ಷರೀಫ್, ವ್ಯವಸ್ಥಾಪಕ ನಿರ್ದೇಶಕ ಗೋಪಾಲರೆಡ್ಡಿ ಇದ್ದರು.