ಕೋಚಿಮುಲ್ ವಿಭಜನೆ: ಸರ್ಕಾರದ ನಿರ್ಧಾರಕ್ಕೆ ಬದ್ಧ

| Published : Jun 25 2024, 12:36 AM IST / Updated: Jun 25 2024, 04:32 AM IST

ಸಾರಾಂಶ

ಒಂದು ವರ್ಷದ ಹಿಂದೆ ಕೋಚಿಮುಲ್‌ನಿಂದ ಚಿಮುಲ್ ಪ್ರತ್ಯೇಕವಾದ ಬಳಿಕವೇ ಚುನಾವಣೆ ನಡೆಸಿ ಎನ್ನುತ್ತಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಇದೀಗ ಪ್ರತ್ಯೇಕತೆಗೂ ಮುನ್ನ ಚುನಾವಣೆ ನಡೆಸಿ. ಇಲ್ಲವೆ ಆಡಳಿತಾಧಿಕಾರಿಯನ್ನು ನೇಮಿಸಿ ಎಂದು ಆಗ್ರಹಪಡಿಸುತ್ತಿರುವುದೇಕೆ?

 ಚಿಕ್ಕಬಳ್ಳಾಪುರ : ಅಂದು ಕೋಚಿಮುಲ್ ವಿಭಜನೆಗೆ ಒತ್ತಾಯಿಸಿದ್ದ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ರಿಗೆ ಈಗ ವಿಭಜನೆ ಬೇಡ, ಚುನಾವಣೆ ನಡೆಸಿ ಎನ್ನುತ್ತಿರುವ ಮರ್ಮವೇನು ಎಂದು ಕೋಚಿಮುಲ್ ನಿರ್ಧೇಶಕ ಭರಣಿ ವೆಂಕಟೇಶ್ ಪ್ರಶ್ನಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ನಡೆಸದೆ, ಆಡಳಿತ ಮಂಡಳಿಯನ್ನು ಮುಂದುವರಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾಡಿರುವ ಆರೋಪದಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎಂದರು.

ಒಂದು ವರ್ಷದ ಹಿಂದೆ ಕೋಚಿಮುಲ್‌ನಿಂದ ಚಿಮುಲ್ ಪ್ರತ್ಯೇಕವಾದ ಬಳಿಕವೇ ಚುನಾವಣೆ ನಡೆಸಿ ಎನ್ನುತ್ತಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಇದೀಗ ಪ್ರತ್ಯೇಕತೆಗೂ ಮುನ್ನ ಚುನಾವಣೆ ನಡೆಸಿ. ಇಲ್ಲವೆ ಆಡಳಿತಾಧಿಕಾರಿಯನ್ನು ನೇಮಿಸಿ ಎಂದು ಆಗ್ರಹಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು ಇದರ ಹಿಂದೆ ಅಧಿಕಾರದಾಹ ಅಡಗಿದೆಯೇ ವಿನಃ ಒಕ್ಕೂಟದ ಹಿತಾಸಕ್ತಿ ಇಲ್ಲ ಎಂದರು.

ನಾಳೆ ನಡೆಯುವ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ ಸಚಿವರ ಮತ್ತು ಶಾಸಕರುಗಳ ಸಭೆಯಲ್ಲಿ ವಿಭಜನೆ ಮತ್ತು ಚುನಾವಣೆಯ ಬಗ್ಗೆ ಸರ್ಕಾರವೇ ತೀರ್ಮಾನ ತೆಗೆದು ಕೊಳ್ಳುತ್ತದೆ. ಸರ್ಕಾರ ಯಾವುದೇ ತೀರ್ಮಾನ ತೆಗೆದು ಕೊಂಡರೂ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು .ಚಿಂತಾಮಣಿಯ ಕೋಚಿಮುಲ್ ನಿರ್ಧೇಶಕ ಆಶ್ವತ್ತ ನಾರಾಯಣ ಬಾಬು(ಊಲವಾಡಿ ಬಾಬು), ಶಿಡ್ಲಘಟ್ಟದ ಕೋಚಿಮುಲ್ ನಿರ್ಧೇಶಕ ಶ್ರೀನಿವಾಸ್ ರಾಮಯ್ಯ, ಮತ್ತಿತರರು ಇದ್ದರು.

ಸಿಕೆಬಿ-4 ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಮಾತನಾಡಿದರು.