'ಶಾಸಕ ಮುನಿರತ್ನ ಸಂಭಾಷಣೆ ಧ್ವನಿ ಪರೀಕ್ಷೆಗೆ ರವಾನೆ : ತಪ್ಪು ಮಾಡಿದ್ದರೆ ಕಾನೂನು ಕ್ರಮ'

| Published : Sep 17 2024, 12:47 AM IST / Updated: Sep 17 2024, 04:28 AM IST

ಸಾರಾಂಶ

ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುಟುಂಬ, ಸಮಾಜ ಒತ್ತು ನೀಡ ಬೇಕು ಹಾಗೆ ಮಾಡಿದಲ್ಲಿ ನ್ಮ ಸಮಾಜದಲ್ಲಿನ ಮೌಢ್ಯವೂ ದೂರ ಸರಿಯುತ್ತದೆ. ಈಗ ಪ್ರತಿ ಮುಸ್ಲಿಂ ಕುಟುಂಬದವರೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಆಲೋಚನೆ ಮಾಡಬೇಕು ಮತ್ತು ಗುಣಮಟ್ಟದ ಶಿಕ್ಷಣ ಕೊಡಿಸಬೇಕ

  ಚಿಕ್ಕಬಳ್ಳಾಪುರ : ಶಾಸಕ ಮುನಿರತ್ನ ನಿಂದಿಸಿ ಮಾತನಾಡಿರುವುದು ಎನ್ನಲಾದ  ಸಂಭಾಷಣೆಯನ್ನು ಧ್ವನಿ ಪರೀಕ್ಷೆಗೆ ಎಫ್ ಎಸ್ ಎಲ್ ಗೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ತಪ್ಪು ಮಾಡಿರುವುದು ತನಿಖೆಯಲ್ಲಿ ಸಾಭೀತಾದರೆ ರಾಜ್ಯದ ಕಾನೂನು ಕ್ರಮ ತೆಗೆದು ಕೊಳ್ಳುತ್ತದೆ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದೂ ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ತಿಳಿಸಿದರು.

ನಗರ ಹೊರವಲಯದ ಕೆ ವಿ.ಕ್ಯಾಂಪಸ್ ಬಳಿ ಸೋಮವಾರ ಹಿಲಾಲ್ ಎಜುಕೇಷನ್ ಸೊಸೈಟಿ ವತಿಯಿಂದ ಮೊಹಮದೀಯ ಪ್ರೌಢಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ

ಇದಕ್ಕೂ ಮುನ್ನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮಹಿಳೆಯರ ವಿಚಾರದಲ್ಲಿ ಸಾಕಷ್ಟು ಮೌಢ್ಯಇತ್ತು. ಶಿಕ್ಷಣದಿಂದ ಅದು ದೂರವಾಗುತ್ತಿದೆ. ಅದರಲ್ಲೂ ನಮ್ಮ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುಟುಂಬ, ಸಮಾಜ ಒತ್ತು ನೀಡ ಬೇಕು ಹಾಗೆ ಮಾಡಿದಲ್ಲಿ ನ್ಮ ಸಮಾಜದಲ್ಲಿನ ಮೌಢ್ಯವೂ ದೂರ ಸರಿಯುತ್ತದೆ. ಈಗ ಪ್ರತಿ ಮುಸ್ಲಿಂ ಕುಟುಂಬದವರೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಆಲೋಚನೆ ಮಾಡಬೇಕು’ ಎಂದು ಸಲಹೆನೀಡಿದರು.ಕೆವಿ ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆ ತೆರದಂತೆ ಎಂಬ ನಾಣ್ಣುಡಿಯಂತೆ ಮೊದಲು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದರಲ್ಲದೇ ಮಹಮದೀಯ ಶಾಲೆಗೆ ಒಂದು ವರ್ಷ ಶಿಕ್ಷಕರನ್ನು ಉಚಿತವಾಗಿ ತಾವು ಕಳುಹಿಸಿ ಕೊಡುವುದರ ಜೊತೆಗೆ ಶಾಲಾ ಮಕ್ಕಳಿಗೆ ಬಸ್ ಸೌಕರ್ಯ ಒದಗಿಸಿ ಕೊಡುವುದಾಗಿ ತಿಳಿಸಿದರು.

ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ

ಸರ್ಕಾರದ ಕಾರ್ಮಿಕ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ಮೊಹಮದ್ ಮೊಹಸಿನ್ ಮಾತನಾಡಿ, ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡದಿರುವುದರಿಂದ ಮಹಿಳೆಯರ ಸಬಲೀಕರಣ ಸಾಧ್ಯ­ವಾಗಿಲ್ಲ ಎಂದರು.

ಸಮಾರಂಭದಲ್ಲಿ ವಿದಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಂ, ಜಂಟಿ ಕೃಷಿ ನಿರ್ಧೇಶಕಿ ಜಾವೀದಾ ನಸೀಮಾ ಖಾನಂ,ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರಾಜಾ ಇಮಾಂ ಖಾಸೀಂ,ಫಾಲ್ಕನ್ ಗ್ರೂಪ್ ಎಂಡಿ ಡಾ. ಅಬ್ದುಲ್ ಸುಭಾನ್, ಮುಖಂಡರಾದ ಎಂ.ಆಂಜಿನಪ್ಪ, ಬಿ.ಎಸ್.ರಫೀಉಲ್ಲಾ,ಹನೀಫ್ ಸೇಠ್,ನಜೀರ್ ಅಹಮದ್ ಫಕ್ವಿ,ಅಲ್ತಾಜ್ ಸೈಯದ್ ಅಸ್ಲಾಂ,ಮನ್ಸೂರ್ ಆಲಿಖಾನ್,ಡಾ.ಮನ್ಜೂರ್ ಹುಸೈನ್, ಸೈಯದ್ ಮುಭಾರಕ್,ಎ.ಅಲ್ಲಾಬಕಾಷ್, ಜಿಲಾನಿ, ಮತ್ತಿತರರು ಇದ್ದರು.