ಇವಿಎಂನಲ್ಲಿ ಸೋತವರು ಅಂಚೆ ಮತದಿಂದ ಗೆದ್ದರು.

| Published : Jun 07 2024, 12:36 AM IST / Updated: Jun 07 2024, 05:47 AM IST

evm 2
ಇವಿಎಂನಲ್ಲಿ ಸೋತವರು ಅಂಚೆ ಮತದಿಂದ ಗೆದ್ದರು.
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ನಲ್ಲಿ ಚಲಾವಣೆಯಲ್ಲಿ ಮತಗಳ ಲೆಕ್ಕದ ವೇಳೆ ಸೋತಿದ್ದ ಇಬ್ಬರು, ಬಳಿಕ ನಡೆದ ಅಂಚೆ ಮತದಾನದ ಮತಗಳ ಆಧಾರದಲ್ಲಿ ಗೆದ್ದ ಘಟನೆ ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ನಡೆದಿದೆ.

ನವದೆಹಲಿ: ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ನಲ್ಲಿ ಚಲಾವಣೆಯಲ್ಲಿ ಮತಗಳ ಲೆಕ್ಕದ ವೇಳೆ ಸೋತಿದ್ದ ಇಬ್ಬರು, ಬಳಿಕ ನಡೆದ ಅಂಚೆ ಮತದಾನದ ಮತಗಳ ಆಧಾರದಲ್ಲಿ ಗೆದ್ದ ಘಟನೆ ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ನಡೆದಿದೆ.

ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಮೊದಲಿಗೆ ರವೀಂದ್ರ ವೈಕರ್‌ ಇವಿಎಂ ಮತಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶಿವಸೇನೆ (ಯುಬಿಟಿ) ಪಕ್ಷದ ಗಜಾನನ ಕೀರ್ತಿಕರ್‌ ಅವರಿಗಿಂತ 1 ಮತ ಹಿಂದಿದ್ದರೂ ಅಂಚೆ ಮತ ಎಣಿಕೆಯ ಬಳಿಕ 48 ಮತಗಳ ಮುನ್ನಡೆ ಸಾಧಿಸಿ ಗೆಲುವು ಕಂಡಿದ್ದಾರೆ.

ಅದೇ ರೀತಿಯಲ್ಲಿ ಒಡಿಶಾದ ಜಾಜ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವೀಂದ್ರ ನಾರಾಯಣ ಬೆಹೆರಾ ತಮ್ಮ ಪ್ರತಿಸ್ಪರ್ಧಿ ಬಿಜೆಡಿಯ ಶರ್ಮಿಷ್ಠಾ ಅವರಿಗಿಂತ ಇವಿಎಂ ಮತಎಣಿಕೆಯಲ್ಲಿ 496 ಮತಗಳ ಹಿನ್ನಡೆಯಲ್ಲಿದ್ದರೂ ಅಂಚೆ ಮತಗಳಲ್ಲಿ ಭಾರೀ ಮುನ್ನಡೆ ಸಾಧಿಸಿ 1,587 ಮತಗಳ ಗೆಲುವು ಪಡೆದರು.