ಸಾರಾಂಶ
ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಶುಕ್ರವಾರ ಅನುಮೋದನೆ ನೀಡಲಾಯಿತು.
ವಿಧಾನಮಂಡಲ : ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಶುಕ್ರವಾರ ಅನುಮೋದನೆ ನೀಡಲಾಯಿತು.
ಕಲಾಪ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ)ಯ ನಿರ್ಣಯದಂತೆ ಮತ್ತು ರಾಜ್ಯಪಾಲರ ಅನುಮೋದನೆಯೊಂದಿಗೆ ಮುಖ್ಯಮಂತ್ರಿ, ಸಚಿವರ ವೇತನ, ಭತ್ಯೆ ಹೆಚ್ಚಳದ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2025 ಹಾಗೂ ಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ ಹಾಗೂ ಶಾಸಕರ ವೇತನ, ಭತ್ಯೆ ಹೆಚ್ಚಳದ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದಿಸಲಾಯಿತು.
ವಿಧೇಯಕಕ್ಕೆ ತಿದ್ದುಪಡಿಯಿಂದಾಗಿ ಶಾಸಕರ ವೇತನ 40 ಸಾವಿರ ರು.ನಿಂದ 80 ಸಾವಿರಕ್ಕೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರು.ನಿಂದ 1.25 ಲಕ್ಷ ರು, ಮುಖ್ಯಮಂತ್ರಿ ವೇತನ 75 ಸಾವಿರ ರು.ನಿಂದ 1.50 ಲಕ್ಷ ರು, ಸಚಿವರ ವೇತನ 60 ಸಾವಿರ ರು.ನಿಂದ 1.25 ಲಕ್ಷ ರು.ವರೆಗೆ ಹೆಚ್ಚಳವಾಗಲಿದೆ. ಮುಖ್ಯಮಂತ್ರಿ, ಸಚಿವರ ವೇತನ ಹೆಚ್ಚಳದಿಂದ 10 ಕೋಟಿ ರು. ಹಾಗೂ ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ ಹಾಗೂ ಶಾಸಕರ ವೇತನ ಹೆಚ್ಚಳದಿಂದ 52 ಕೋಟಿ ರು. ಸೇರಿ ಒಟ್ಟು 62 ಕೋಟಿ ರು. ಸರ್ಕಾರಕ್ಕೆ 62 ಕೋಟಿ ರು. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.
ವೇತನ, ಭತ್ಯೆ ಹೆಚ್ಚಳದ ವಿವರ: (ಮಾಸಿಕ ವಿವರ) ಪ್ರಸ್ತುತ ಪರಿಷ್ಕೃತ
ಸಭಾಧ್ಯಕ್ಷ,ಸಭಾಪತಿ ವೇತನ- 75 ಸಾವಿರ ರು. 1.25 ಲಕ್ಷ ರು. ಸಭಾಧ್ಯಕ್ಷ, ಸಭಾಪತಿ ಆತಿಥ್ಯ ಭತ್ಯೆ- 4 ಲಕ್ಷ ರು. 5 ಲಕ್ಷ ರು.
ಸಭಾಧ್ಯಕ್ಷ, ಸಭಾಪತಿಯಿಂದ ಮುಖ್ಯ ಸಚೇತರವರೆಗೆ ಮನೆಭತ್ಯೆ 1.60 ಲಕ್ಷ ರು. 2.50 ಲಕ್ಷ ರು. ಉಪಸಭಾಧ್ಯಕ್ಷ, ಉಪಸಭಾಪತಿ ವೇತನ 60 ಸಾವಿರ ರು. 80 ಸಾವಿರ ರು.
ಉಪಸಭಾಧ್ಯಕ್ಷ, ಉಪಸಭಾಪತಿ ಆತಿಥ್ಯ ಭತ್ಯೆ 2.50 ಲಕ್ಷ ರು. 3 ಲಕ್ಷ ರು. ಮುಖ್ಯಮಂತ್ರಿ ವೇತನ 75 ಸಾವಿರ ರು. 1.50 ಲಕ್ಷ ರು.
ಮುಖ್ಯಮಂತ್ರಿ, ಸಚಿವರ ಆತಿಥ್ಯ ಭತ್ಯೆ 4.50 ಲಕ್ಷ ರು. 5 ಲಕ್ಷ ರು. ಸಚಿವರ ವೇತನ 60 ಸಾವಿರ ರು. 1.25 ಲಕ್ಷ ರು.
ಸಚಿವರ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರು. 2.50 ಲಕ್ಷ ರು. ರಾಜ್ಯ ಸಚಿವರ ವೇತನ 50 ಸಾವಿರ ರು. 70 ಸಾವಿರ ರು.
ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ 50 ಸಾವಿರ ರು. 75 ಸಾವಿರ ರು. ವಿಪಕ್ಷ ನಾಯಕ ವೇತನ 60 ಸಾವಿರ ರು. 80 ಸಾವಿರ ರು.
ವಿಪಕ್ಷ ನಾಯಕ ಆತಿಥ್ಯ ಭತ್ಯೆ 2.50 ಲಕ್ಷ ರು. 3 ಲಕ್ಷ ರು. ಮುಖ್ಯಸಚೇತಕರ ವೇತನ 50 ಸಾವಿರ ರು. 70 ಸಾವಿರ ರು.
ಮುಖ್ಯಸಚೇತಕರ ಆತಿಥ್ಯ ಭತ್ಯೆ 2.50 ಲಕ್ಷ ರು. 3 ಲಕ್ಷ ರು. ಶಾಸಕರ ವೇತನ 40 ಸಾವಿರ ರು. 80 ಸಾವಿರ ರು.
ಶಾಸಕರ ಪಿಂಚಣಿ 50 ಸಾವಿರ ರು. 75 ಸಾವಿರ ರು. ಹೆಚ್ಚುವರಿ ಪಿಂಚಣಿ 5 ಸಾವಿರ ರು. 20 ಸಾವಿರ ರು.
ಮಾಜಿ ಶಾಸಕರ ವೈದ್ಯಕೀಯ ಭತ್ಯೆ 5 ಸಾವಿರ ರು. 20 ಸಾವಿರ ರು. ಕ್ಷೇತ್ರ ಪ್ರವಾಸಕ್ಕೆ 60 ಸಾವಿರ ರು. 80 ಸಾವಿರ ರು.
ರೈಲು,ವಿಮಾನ ಟಿಕೆಟ್ (ವಾರ್ಷಿಕ) 2.50 ಲಕ್ಷ ರು. 3.50 ಲಕ್ಷ ರು