ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಕೋಲಾಹಲಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಜು.20ರ ಸೋಮವಾರ ಚಾಲನೆ ಸಿಗಲಿದೆ. ಒಟ್ಟು 25 ದಿನಗಳ ಕಾಲ ಅಂದರೆ ಆ.13ರವರೆಗೆ ನಡೆಯುವ ಅಧಿವೇಶನದಲ್ಲಿ 19 ದಿನಗಳ ಕಾಲ ಕಲಾಪ ನಡೆಯಲಿದೆ.

ನವದೆಹಲಿ: ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಕೋಲಾಹಲಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಜು.20ರ ಸೋಮವಾರ ಚಾಲನೆ ಸಿಗಲಿದೆ. ಒಟ್ಟು 25 ದಿನಗಳ ಕಾಲ ಅಂದರೆ ಆ.13ರವರೆಗೆ ನಡೆಯುವ ಅಧಿವೇಶನದಲ್ಲಿ 19 ದಿನಗಳ ಕಾಲ ಕಲಾಪ ನಡೆಯಲಿದೆ.

ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಐದು ಹೊಸ ಹಾಗೂ 2 ಹಳೆಯ ವಿಧೇಯಕಗಳನ್ನು ಮಂಡಿಸುವ ನಿರೀಕ್ಷೆ ಇದೆ. ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಮಹಿಳಾ ಮೀಸಲಾತಿಯೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರ ಮರುವಿಂಗಡಣೆ ವಿಧೇಯಕವೂ ಮಂಡನೆಯಾಗಲಿದೆ ಎಂದು ಹೇಳಲಿದೆ ಎನ್ನಲಾಗಿದ್ದು, ಈ ವಿಧೇಯಕ ತೀವ್ರ ಪರ-ವಿರೋಧ ಚರ್ಚೆಗೆ ಕಾರಣವಾಗುವ ನಿರೀಕ್ಷೆ ಇದೆ.

ಮೂರು ತಿಂಗಳ ಹಿಂದೆ ನಡೆದ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕಕ್ಕೆ ತೀವ್ರ ಹಿನ್ನಡೆಯಾಗಿ ಸರ್ಕಾರಕ್ಕೆ ಮುಖಭಂಗ ಆಗಿತ್ತು. ಅದಾದ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯೂ ಆಗಿದೆ. ಬಿಜೆಪಿಯು ಲೋಕಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಪರೋಕ್ಷವಾಗಿ 319ಕ್ಕೆ ಹೆಚ್ಚಿಸಿಕೊಂಡಿದೆ. ಒಂದು ವೇಳೆ ಈ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ ಮಂಡನೆಯಾದರೆ ಸರ್ಕಾರ ಅಗತ್ಯ ಬೆಂಬಲ ಗಳಿಸುವಲ್ಲಿ ಸಫಲವಾಗುತ್ತೋ, ವಿಫಲವಾಗುತ್ತೋ ಎಂಬ ಕುತೂಹಲ ಗರಿಗೆದರಿದೆ.

ವಂದೇಮಾತರಂ ನಿಂದನೆ ಶಿಕ್ಷಾರ್ಹ: ಇಂದು ಮಸೂದೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸಲಿದ್ದಾರೆ. ಈ ಮಸೂದೆ, ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಅವಮಾನಿಸುವುದು ಅಥವಾ ಅದನ್ನು ಹಾಡಲು ಅಡ್ಡಿಪಡಿಸುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲಿದೆ.

ಕ್ಷೇತ್ರ ಮರು ವಿಂಗಡಣೆ ಬಿಲ್‌: ಕೇಂದ್ರಕ್ಕೆ ಡಿಎಂಕೆ ಬೆಂಬಲ? 

ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಧೇಯಕಕ್ಕೆ ಡಿಎಂಕೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದೆ ಎನ್ನಲಾಗಿದೆ.ಪ್ರಸ್ತಾವಿತ ಮಸೂದೆಯಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗಬಾರದು, ಮರುವಿಂಗಡನೆ ಬಳಿಕ ಶೇ.50ರಷ್ಟು ಸೀಟು ಹೆಚ್ಚಳ ಆಗಬೇಕು, ಮುಂದಿನ 25 ವರ್ಷಗಳ ಕಾಲ ಇದೇ ಮಿತಿ ಕಾಪಾಡುವುದಾದರೆ ಬೆಂಬಲ ಮಸೂದೆ ಬೆಂಬಲಿಸುವುದಾಗಿ ಡಿಎಂಕೆ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಮತ್ತು ಪ್ರ

ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ಹಿನ್ನೆಲೆ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ, ಕ್ಷೇತ್ರ ಮರುವಿಂಗಡಣೆಯನ್ನು ಡಿಎಂಕೆ ಬೆಂಬಲಿಸಿರುವುದಾಗಿ ಆರ್‌ಎಸ್‌ಪಿ ಸಂಸದ ಎನ್‌.ಕೆ. ಪ್ರೇಮಚಂದ್ರನ್‌ ತಿಳಿಸಿದ್ದಾರೆ. ಶೇ.50ರಷ್ಟು ಸೀಟು ಹೆಚ್ಚಳವಾಗುವುದಾದರೆ ಮಾತ್ರ ಈ ಬೆಂಬಲ ಸಿಗಲಿದೆ ಎನ್ನಲಾಗಿದೆ. ಆದರೆ ಕೇಂದ್ರ ಈ ಕುರಿತು ಸ್ಪಷ್ಟ ಪ್ರಸ್ತಾಪವನ್ನೇ ಇಟ್ಟಿಲ್ಲ ಎಂದು ಡಿಎಂಕೆ ಸಂಸದ ತಿರುಚಿ ಶಿವ ಹೇಳಿದ್ದಾರೆ.ಗಮನಿಸಬೇಕಾದ ಅಂಶವೆಂದರೆ, ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕವನ್ನು ಮಂಡಿಸುವ ಕುರಿತು ಪಟ್ಟಿ ಮಾಡಿಲ್ಲ. ಆದರೆ, ಸರ್ಕಾರ ಮಾತ್ರ ಈ ವಿಧೇಯಕಕ್ಕೆ ಅಗತ್ಯ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಸರ್ಕಾರಕ್ಕೆ ಅಗ್ನಿ ಪರೀಕ್ಷೆಅಯೋಧ್ಯೆ ಹುಂಡಿ ಹಣ ಕಳವು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಮಣಿಪುರ ಹಿಂಸಾಚಾರ ಸಿಜೆಪಿ ಪ್ರತಿಭಟನೆ ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ.

ಯಾವ್ಯಾವ ವಿಧೇಯಕ ಮಂಡನೆ

ವಿಧೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕಆದಾಯ ತೆರಿಗೆ (ತಿದ್ದುಪಡಿ) ವಿಧೇಯಕಸುಪ್ರೀಂ ಕೋರ್ಟ್‌ (ಜಡ್ಜ್‌ಗಳ ಸಂಖ್ಯೆ) ತಿದ್ದುಪಡಿ ವಿಧೇಯಕಜನನ ಮತ್ತು ಮರಣ (ತಿದ್ದುಪಡಿ) ವಿಧೇಯಕರಾಷ್ಟ್ರೀಯ ಗೌರವಕ್ಕೆ ಅವಮಾನ (ತಿದ್ದುಪಡಿ) ವಿಧೇಯಕಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ)ವಿಧೇಯಕ