ಮೈಸೂರು ಪೊಲೀಸರಿಗೆ ಸಿಎಂ ಪುತ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಗಂಭೀರ ಆರೋಪ

| Published : Oct 11 2025, 12:02 AM IST

ಮೈಸೂರು ಪೊಲೀಸರಿಗೆ ಸಿಎಂ ಪುತ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಗಂಭೀರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಹೃದಯ ಕಲ್ಲಾಗಿದೆ. ಯಾವ ಜಾತಿಯವನೂ ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯ ಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ. ಮೈಸೂರು ಪೊಲೀಸರಿಗೆ ಮಿನೀಟ್ ಕಾಟ, ವರ್ಗಾವಣೆ ಕಾಟ, ಜಾತಿ ಕಾಟ ಜಾಸ್ತಿ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ. ಯತೀಂದ್ರ ವರ್ಗಾವಣೆ ಸಚಿವರಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಮಿನೀಟ್ ಕಾಟ ಹೆಚ್ಚಾಗಿದೆ. ಯಾವ ವರ್ಗಾವಣೆ ಆಗ ಬೇಕಾದರೆ ಸಿಎಂ ಪುತ್ರನಿಗೆ ತೆರಿಗೆ ಕಟ್ಟ ಬೇಕು. ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡ್ತಿವೋ ಅಂತಾ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹೃದಯ ಕಲ್ಲಾಗಿದೆ. ಯಾವ ಜಾತಿಯವನೂ ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯ ಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ. ಮೈಸೂರು ಪೊಲೀಸರಿಗೆ ಮಿನೀಟ್ ಕಾಟ, ವರ್ಗಾವಣೆ ಕಾಟ, ಜಾತಿ ಕಾಟ ಜಾಸ್ತಿ ಆಗಿದೆ ಎಂದು ಅವರು ದೂರಿದರು.

ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದರ ಮೇಲೂ ಪೊಲೀಸರ ರೈಡ್ ಮಾಡಲು ಹೆದರುತ್ತಿದ್ದಾರೆ. ಯಾವ ಸಚಿವನ, ಶಾಸಕನ ಫೋನ್ ಬರುತ್ತದೆ ಅಂತಾ ಪೊಲೀಸರಿಗೆ ಭಯ ಆಗಿದೆ. ಮಿನೀಟ್ ಗೆ ದುಡ್ಡು ತೆಗೆದುಕೊಂಡು ಪೊಲೀಸರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ಕುರ್ಚಿ ಖಾಲಿಯಾದರೆ ತನಗೆ ಸಿಗುತ್ತೆ ಅಂತಾ ಗೃಹ ಸಚಿವರು ಇಲಾಖೆಯನ್ನೇ ಮೆರೆತಿದ್ದಾರೆ. ಸಿಎಂ ಅವರೇ ನಿಮ್ಮ ಮಗನಿಗೆ ಹೇಳಿ ವರ್ಗಾವಣೆ ದಂಧೆ ನಿಲ್ಲಿಸಲು. ಶಾಸಕರಿಗೆ ವಸೂಲಿ ನಿಲ್ಲಿಸಲು ಹೇಳಿ. ಇಲ್ಲ ನೀವೇ ವಸೂಲಿ ಮಾಡಲು ಬಿಟ್ಟಿದ್ದೀರಾ ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರೇ ನಿಮಗೆ ಹೆಣ್ಣು ಮಕ್ಕಳು ಇಲ್ಲದೆ ಇರಬಹುದು. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ಬಾಲಕಿ ಅತ್ಯಾಚಾರ ಬಗ್ಗೆ ಮಾತಾಡಿ. ನಿಮ್ಮ ಮಗನಿಗೆ ಬುದ್ದಿ ಹೇಳಿ. ವರ್ಗಾವಣೆ ದಂಧೆ ನಿಲ್ಲಿಸಲು ಹೇಳಿ.

- ಪ್ರತಾಪ್ ಸಿಂಹ, ಮಾಜಿ ಸಂಸದರುಮುಡಾ ಹಗರಣ- 500 ಕೋಟಿ ಮೌಲ್ಯದ ಸೈಟುಗಳನ್ನು ಜಪ್ತಿ ಸ್ವಾಗತಾರ್ಹ: ಟಿ.ಎಸ್. ಶ್ರೀವತ್ಸ

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣದಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧವಾಗಿದೆ. ಅವರ ಹತ್ತಿರ ಇರುವಂತಹ ಸೈಟುಗಳನ್ನು ಜಪ್ತಿ ಮಾಡಿದ್ದಾರೆ. 500 ಕೋಟಿ ಮೌಲ್ಯದ ಸೈಟುಗಳನ್ನು ಇಡಿ ಜಪ್ತಿ ಮಾಡಿರುವುದು ಸ್ವಾಗತಾರ್ಹ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಕ್ರಮ ಹೊರ ಬರುತ್ತದೆ ಎಂಬ ವಿಶ್ವಾಸವಿದೆ. ಇನ್ನು ವಶಪಡಿಸಿಕೊಂಡಿರುವ ಸೈಟುಗಳಿಗೆ ಬೋರ್ಡ್ ಹಾಕಬೇಕು ಎಂದು ಎಂಡಿಎ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮುಡಾ 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿದ್ದ ಸೈಟುಗಳ ತನಿಖೆ ಆಗುತ್ತಿದೆ. 4525 ಸೈಟುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವನ್ನೂ ವಶಪಡಿಸಿಕೊಳ್ಳುವ ವಿಶ್ವಾಸವಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕುಟುಂಬದವರು 14 ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ. ಉಳಿದವರ ಸೈಟುಗಳು ಕೂಡ ಎಂಡಿಎ ವಶಕ್ಕೆ ಬರಬೇಕು ಎಂದರು.