ಸಾರಾಂಶ
ಲೋಕಸಭೆ ಫಲಿತಾಂಶದ ಬಳಿಕ ಮೈತ್ರಿಕೂಟಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎನ್‌ಡಿಎ ಕೂಟದ ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಇಂಡಿಯಾ ಕೂಟದ ನಾಯಕ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಒಟ್ಟಿಗೆ ಕುಳಿತು ಪ್ರಯಾಣಿಸಿದ್ದು ಗಮನ ಸೆಳೆದಿದೆ.
ನವದೆಹಲಿ: ಲೋಕಸಭೆ ಫಲಿತಾಂಶದ ಬಳಿಕ ಮೈತ್ರಿಕೂಟಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎನ್‌ಡಿಎ ಕೂಟದ ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಇಂಡಿಯಾ ಕೂಟದ ನಾಯಕ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಒಟ್ಟಿಗೆ ಕುಳಿತು ಪ್ರಯಾಣಿಸಿದ್ದು ಗಮನ ಸೆಳೆದಿದೆ.
ಎರಡೂ ಮೈತ್ರಿ ಕೂಟಗಳು ಬುಧವಾರ ತಮ್ಮ ಮಿತ್ರ ಪಕ್ಷದ ನಾಯಕರುಗಳಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಹೀಗಾಗಿ ನಿತೀಶ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ಪಟನಾದಿಂದ ದಿಲ್ಲಿಗೆ ವಿಸ್ತಾರ ವಿಮಾನದಲ್ಲಿ ಒಟ್ಟಿಗೇ ಪ್ರಯಾಣ ಬೆಳೆಸಿದರು. ಆರಂಭದಲ್ಲಿ ಇಬ್ಬರು ಹಿಂದೆ ಮುಂದೆ ಕುಳಿತಿದಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಅಕ್ಕಪಕ್ಕ ಕುಳಿತರು. ಈ ಫೋಟೋ ವೈರಲ್ ಆಗಿದೆ. ಮೂಲಗಳ ಪ್ರಕಾರ ತೇಜಸ್ವಿ ,ನಿತೀಶ್ ಯೋಗಕ್ಷೇಮ ವಿಚಾರಿಸಲು ಪಕ್ಕದಲ್ಲಿ ಕುಳಿತಿದ್ದರು. ಬಳಿಕ ತಾವಿದ್ದ ಜಾಗಕ್ಕೆ ಮರಳಿದ್ದಾರೆ.