ಸಾರಾಂಶ
ಉತ್ತರಪ್ರದೇಶದ ಅಮೇಠಿಯಲ್ಲಿ ಕೇಂದ್ರ ಸಚಿವ ಸ್ಮೃತಿ ಇರಾನಿ ಸೋಲಿಸುವ ಮೂಲಕ ಗಾಂಧಿ ಕುಟುಂಬದಿಂದ ಕಳೆದ ಬಾರಿ ಕೈ ತಪ್ಪಿ ಹೋಗಿದ್ದ ಅಮೇಠಿಯನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ಬರಲು ಕಾರಣವಾದ ಕಿಶೋರಿ ಲಾಲ್ ಶರ್ಮಾ ತಮ್ಮ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಉತ್ತರಪ್ರದೇಶದ ಅಮೇಠಿಯಲ್ಲಿ ಕೇಂದ್ರ ಸಚಿವ ಸ್ಮೃತಿ ಇರಾನಿ ಸೋಲಿಸುವ ಮೂಲಕ ಗಾಂಧಿ ಕುಟುಂಬದಿಂದ ಕಳೆದ ಬಾರಿ ಕೈ ತಪ್ಪಿ ಹೋಗಿದ್ದ ಅಮೇಠಿಯನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ಬರಲು ಕಾರಣವಾದ ಕಿಶೋರಿ ಲಾಲ್ ಶರ್ಮಾ ತಮ್ಮ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.‘ರಾಜಕೀಯದಲ್ಲಿ ಸೇಡು ತೀರಿಸಿಕೊಳ್ಳುವುದಿಲ್ಲ. ಸೋಲು ಗೆಲುವು ಕ್ರೀಡಾ ಮನೋಭಾವನೆಯಿಂದ ಆಗಿರುತ್ತದೆ’ ಎಂದಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಮೃತಿ ಇರಾನಿ ವಿರುದ್ಧದ ಗೆಲುವಿನ ಬಗ್ಗೆ ಪ್ರಸ್ತಾಪಿಸಿದಾಗ ಕಿಶೋರಿ ಲಾಲ್, ‘ಇದು ಅಮೇಠಿ ಮತ್ತು ಗಾಂಧಿ ಕುಟುಂಬದ ಗೆಲುವು. ಅಮೇಠಿ ಗಾಂಧಿ ಕುಟುಂದ ನಂಬಿಕೆಯಾಗಿದ್ದು, ಅವರ ನಂಬಿಕೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳುತ್ತೇನೆ. ರಾಜಕೀಯದಲ್ಲಿ ಸೇಡು ತೀರಿಸಿಕೊಳ್ಳುವುದು ಇರುವುದಿಲ್ಲ. ಒಬ್ಬರು ಗೆದ್ದರೆ, ಮತ್ತೊಬ್ಬರು ಸೋಲಬೇಕು. ನಾನು ಸೇಡಿನ ರೂಪದಲ್ಲಿ ನೋಡುವುದಿಲ್ಲ.’ ಎಂದಿದ್ದಾರೆ.