ನಗರದಲ್ಲಿ ಶೇ.76ರಷ್ಟು ಮಾತ್ರ ಎಸ್‌ಸಿ ಸಮೀಕ್ಷೆ : ಸರ್ವೇಗೆ ಮುದ್ರಿಸಿದ್ದ 11 ಲಕ್ಷ ಸ್ಟಿಕರ್‌ಗಳು ವ್ಯರ್ಥ

| N/A | Published : Jul 11 2025, 01:47 AM IST / Updated: Jul 11 2025, 05:55 AM IST

ನಗರದಲ್ಲಿ ಶೇ.76ರಷ್ಟು ಮಾತ್ರ ಎಸ್‌ಸಿ ಸಮೀಕ್ಷೆ : ಸರ್ವೇಗೆ ಮುದ್ರಿಸಿದ್ದ 11 ಲಕ್ಷ ಸ್ಟಿಕರ್‌ಗಳು ವ್ಯರ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಒಳಮೀಸಲಾತಿ ನೀಡಿಕೆ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.76 ರಷ್ಟು ಮಾತ್ರ ಗುರಿ ಸಾಧ್ಯವಾಗಿದ್ದು, ಸಮೀಕ್ಷೆಗಾಗಿ ₹87 ಲಕ್ಷ ವೆಚ್ಚ ಮಾಡಿ ಮುದ್ರಿಸಲಾಗಿದ್ದ ಸ್ಟಿಕರ್‌ಗಳ ಪೈಕಿ ₹25 ಲಕ್ಷ ಬೆಲೆಯ 11 ಲಕ್ಷ ಸ್ಟಿಕರ್‌ಗಳು ವ್ಯರ್ಥವಾಗಿವೆ.

  ಬೆಂಗಳೂರು :  ಒಳಮೀಸಲಾತಿ ನೀಡಿಕೆ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.76 ರಷ್ಟು ಮಾತ್ರ ಗುರಿ ಸಾಧ್ಯವಾಗಿದ್ದು, ಸಮೀಕ್ಷೆಗಾಗಿ ₹87 ಲಕ್ಷ ವೆಚ್ಚ ಮಾಡಿ ಮುದ್ರಿಸಲಾಗಿದ್ದ ಸ್ಟಿಕರ್‌ಗಳ ಪೈಕಿ ₹25 ಲಕ್ಷ ಬೆಲೆಯ 11 ಲಕ್ಷ ಸ್ಟಿಕರ್‌ಗಳು ವ್ಯರ್ಥವಾಗಿವೆ.

ಮೇ 6 ರಂದು ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಆರಂಭಿಸಲಾಯಿತು. ನಂತರ ಎರಡು ಬಾರಿ ವಿಸ್ತರಿಸಿ ಜುಲೈ 6ರವರೆಗೆ ನಡೆಯಿತು. ಆದರೂ ನಗರದಲ್ಲಿ 2011ರ ಜನಗಣತಿ ಅಂಕಿ ಅಂಶಕ್ಕೆ ಹೋಲಿಸಿದರೆ ಶೇ.76 ರಷ್ಟಾಗಿದೆ. ಆದರೆ, 2025ರ ನಿರೀಕ್ಷಿತ ಅಂದಾಜಿನ ಪ್ರಕಾರ ಶೇ.54 ರಷ್ಟು ಗುರಿ ಸಾಧನೆ ಆಗಿದೆ.

ಒಟ್ಟು 32.47 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿಯ 1.95 ಲಕ್ಷ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಪರಿಶಿಷ್ಟ ಜಾತಿ ಕುಟುಂಬದಲ್ಲಿ 7.22 ಲಕ್ಷ ಜನರಿದ್ದಾರೆ. ಬಿಬಿಎಂಪಿಯ 8 ವಲಯದ ಪೈಕಿ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಕುಟುಂಬಗಳಿವೆ ಎಂದು ತಿಳಿದು ಬಂದಿದೆ.

ಅಂಟಿಸದೇ ಉಳಿದ 11 ಲಕ್ಷ ಸ್ಟಿಕ್ಕರ್‌:

ಬಿಬಿಎಂಪಿಯು ಪರಿಶಿಷ್ಟ ಜಾತಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿ ಪಡಿಸಿಕೊಳ್ಳಲು 3.60 ಕೋಟಿ ರು. ವೆಚ್ಚ ಮಾಡಲಾಗಿದೆ. ಈ ಪೈಕಿ ₹87 ಲಕ್ಷ ವೆಚ್ಚ ಮಾಡಿ 35 ಲಕ್ಷ ಸ್ಟಿಕ್ಕರ್‌ ಮುದ್ರಣ ಮಾಡಿಸಿ 24 ಲಕ್ಷ ಸ್ಟಿಕ್ಕರ್‌ಗಳನ್ನು ಮನೆ ಮನೆಗೆ ಅಂಟಿಸಲಾಗಿತ್ತು. ಇನ್ನೂ ಸುಮಾರು ₹25 ಲಕ್ಷ ವೆಚ್ಚದಲ್ಲಿ ಮುದ್ರಣಗೊಂಡ 11 ಲಕ್ಷ ಸ್ಟಿಕ್ಕರ್‌ ಅಂಟಿಸದೇ ಬಾಕಿ ಉಳಿದಿರುವುದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿ ಸಮೀಕ್ಷೆ ವಿವರ

ವಲಯಎಸ್ಸಿಕುಟುಂಬ ಸಂಖ್ಯೆ2011ರ ಪ್ರಕಾರ ಶೇಕಡ2025 ನಿರೀಕ್ಷಿತ ಜನಸಂಖ್ಯೆಯ ಶೇಕಡಾ

ಆರ್‌ಆರ್‌ನಗರ18,8578963

ದಾಸರಹಳ್ಳಿ8,1418157

ಯಲಹಂಕ13,2028157

ದಕ್ಷಿಣ29,7107654

ಪೂರ್ವ54,6467553

ಬೊಮ್ಮನಹಳ್ಳಿ14,6547452

ಪಶ್ಚಿಮ34,3577352

ಮಹದೇವಪುರ22,3227050

ಒಟ್ಟು1,95,8897654

Read more Articles on