ಸಾರಾಂಶ
ಫಕೀರ ಪಾರಸ್‌ರ ಎರಡೂ ಕೆನ್ನೆ ಮತ್ತು ಮುಖದ ಮಧ್ಯಭಾಗಕ್ಕೊಮ್ಮೆ ಜೋರಾಗಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸೋಕೆ ರಾಜಕಾರಣಿಗಳು ಏನನ್ನಾದರೂ ಮಾಡುತ್ತಾರೆ, ಯಾರ ಕಾಲು ಹಿಡಿಯಲು ಬೇಕಾದರೂ ಸಿದ್ಧ. ಇದಕ್ಕೆ ಹೊಸ ಉದಾಹರಣೆ ಮಧ್ಯಪ್ರದೇಶದ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪಾರಸ್ ಸಕ್ಲೇಚಾ. ಪಾರಸ್, ಸ್ಥಳೀಯ ‘ಫಕೀರ ಬಾಬಾ’ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ವೇಳೆ ಆ ಫಕೀರ ಪಾರಸ್‌ರ ಎರಡೂ ಕೆನ್ನೆ ಮತ್ತು ಮುಖದ ಮಧ್ಯಭಾಗಕ್ಕೊಮ್ಮೆ ಜೋರಾಗಿ ಚಪ್ಪಲಿಯಿಂದ ಹೊಡೆದಿದ್ದಾರೆ. ಅಂದ ಹಾಗೇ ಈ ಫಕೀರ ಆಶಿರ್ವಾದ ಮಾಡುವ ವಿಧಾನವೇ ಹೀಗಂತೆ.