ವಿವಿಧ ಅಂಶಗಳನ್ನು ಪರಿಗಣಿಸಿ ನಮ್ಮ ಮೆಟ್ರೋದ 5 ನಿಲ್ದಾಣಕ್ಕೆ ಪ್ಲಾಟಿನಂ ರೇಟಿಂಗ್ ಪ್ರಶಸ್ತಿ

| N/A | Published : Mar 30 2025, 03:03 AM IST / Updated: Mar 30 2025, 04:10 AM IST

ಸಾರಾಂಶ

ಪರಿಸರಸ್ನೇಹಿ ಕಟ್ಟಡ, ಇಂಧನ ದಕ್ಷತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಐದು ನಿಲ್ದಾಣಗಳು ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ಕೊಡ ಮಾಡುವ ‘ಪ್ಲಾಟಿನಂ ರೇಟಿಂಗ್’ ಪ್ರಶಸ್ತಿಗೆ ಭಾಜನವಾಗಿವೆ.

  ಬೆಂಗಳೂರು :  ಪರಿಸರಸ್ನೇಹಿ ಕಟ್ಟಡ, ಇಂಧನ ದಕ್ಷತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಐದು ನಿಲ್ದಾಣಗಳು ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ಕೊಡ ಮಾಡುವ ‘ಪ್ಲಾಟಿನಂ ರೇಟಿಂಗ್’ ಪ್ರಶಸ್ತಿಗೆ ಭಾಜನವಾಗಿವೆ.

ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ರೇಷ್ಮೆಸಂಸ್ಥೆ ನಿಲ್ದಾಣಗಳಿಗೆ ಈ ಪ್ರಶಸ್ತಿ ದೊರೆತಿದೆ. ತ್ವರಿತ ಸಾಮೂಹಿಕ ಸಾರಿಗೆ ವ್ಯವಸ್ಥೆಯಡಿ ( ಎಂಆರ್‌ಟಿಎಸ್‌) ಎತ್ತರಿಸಿದ ಮೆಟ್ರೋ ನಿಲ್ದಾಣಗಳ ವಿಭಾಗದಲ್ಲಿ ಈ ನಿಲ್ದಾಣಗಳಿಗೆ ಪ್ರಶಸ್ತಿ ದೊರೆತಿದೆ. ಪರಿಸರಸ್ನೇಹಿ ಕಟ್ಟಡ ಮತ್ತು ಮೂಲಸೌಕರ್ಯ ಯೋಜನೆ, ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿ ಬಳಕೆ, ನವೀಕರಿಸಬಹುದಾದ ಶಕ್ತಿಯ ಬಳಕೆ ಮತ್ತು ಒಳಾಂಗಣ ಪರಿಸರ ಗುಣಮಟ್ಟ ಹೊಂದಿರುವ ಅಂಶ ಪರಿಗಣಿಸಿ ಈ ಪ್ರಶಸ್ತಿ ದೊರೆತಿದೆ.

ಬಿಎಂಆರ್‌ಸಿಎಲ್‌ ಈ ನಿಲ್ದಾಣಗಳಲ್ಲಿ ಹಲವಾರು ಸುಸ್ಥಿರ ವ್ಯವಸ್ಥೆಗಳನ್ನು ಅಳವಡಿಸಿದೆ. ಇಂಧನ ದಕ್ಷ ಬಳಕೆ ಮತ್ತು ಹವಾನಿಯಂತ್ರಣ (ಎಚ್‌ವಿಎಸಿ) ವ್ಯವಸ್ಥೆಗಳ ಸ್ಥಾಪನೆ, ನಿಲ್ದಾಣ ಕಾರ್ಯಾಚರಣೆಗಳಿಗೆ ಸೌರಶಕ್ತಿಯ ಬಳಕೆ, ಮಳೆನೀರು ಕೊಯ್ಲು ಮತ್ತು ನೀರಿನ ಮರು ಬಳಕೆ ವ್ಯವಸ್ಥೆ ಸೇರಿ ಇತ್ಯಾದಿ ಒಳಗೊಂಡಿದೆ.