ಅಣ್ಣ ಧೈರ್ಯವಂತ, ಹೋರಾಟದಿಂದ ಹಿಂದೆ ಸರಿಯಲಿಲ್ಲ ಪ್ರಿಯಾಂಕಾ ಗುಣಗಾನ

| Published : Jun 06 2024, 12:30 AM IST

ಅಣ್ಣ ಧೈರ್ಯವಂತ, ಹೋರಾಟದಿಂದ ಹಿಂದೆ ಸರಿಯಲಿಲ್ಲ ಪ್ರಿಯಾಂಕಾ ಗುಣಗಾನ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿಂದಿಗಿಂತ ಉತ್ತಮ ಸಾಧನೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರನ ಶ್ರಮಕ್ಕೆ ಶ್ಲಾಘಿಸಿದ್ದಾರೆ. ‘ಹೋರಾಟದಿಂದ ಹಿಂದೆ ಸರಿಯಲಿಲ್ಲ. ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ’ ಎಂದು ರಾಹುಲ್ ಗುಣಗಾನ ಮಾಡಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿಂದಿಗಿಂತ ಉತ್ತಮ ಸಾಧನೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರನ ಶ್ರಮಕ್ಕೆ ಶ್ಲಾಘಿಸಿದ್ದಾರೆ. ‘ಹೋರಾಟದಿಂದ ಹಿಂದೆ ಸರಿಯಲಿಲ್ಲ. ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ’ ಎಂದು ರಾಹುಲ್ ಗುಣಗಾನ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಸಹೋದರನಿಗೆ ಭಾವುಕ ಸಂದೇಶ ನೀಡಿರುವ ಪ್ರಿಯಾಂಕಾ,‘ ನೀವು ನಿಂತಿದ್ದೀರಿ. ಅವರು ಏನೇ ಹೇಳಿದರೂ, ಏನೇ ಮಾಡಿದರೂ, ನೀವು ವಿರೋಧಾಭಾಸದ ಕಾರಣಕ್ಕೆ ಹಿಂದೆ ಸರಿಯಲಿಲ್ಲ. ಅವರು ನಿಮ್ಮ ನಂಬಿಕೆಗಳನ್ನು ಅನುಮಾನಿಸಿದರೂ ನೀವು ನಂಬುವುದನ್ನು ಬಿಡಲಿಲ್ಲ. ಅವರು ಹರಡಿದ ಅಗಾಧ ಸುಳ್ಳಿನ ಪ್ರಚಾರದ ಹೊರತಾಗಿಯೂ , ಸತ್ಯದ ವಿರುದ್ಧ ಹೋರಾಟ ನಿಲ್ಲಿಸಲಿಲ್ಲ. ದ್ವೇಷ ಮತ್ತು ಕೋಪ ಜಯಿಸಲು ಬಿಡಲಿಲ್ಲ. ಪ್ರೀತಿ, ಸತ್ಯ ಮತ್ತು ದಯೆಯಿಂದ ಹೋರಾಡಿದ್ದೀರಿ. ನಿಮ್ಮನ್ನು ನೋಡಲಾಗದವರೂ ಈಗ ನಿಮ್ಮನ್ನು ನೋಡುತ್ತಾರೆ. ನಮ್ಮಲ್ಲಿ ಕೆಲವರು ನಿಮ್ಮನ್ನು ಎಲ್ಲರಿಗಿಂತ ಧೈರ್ಯಶಾಲಿ ಎನ್ನುವುದು ತಿಳಿದಿದ್ದೇವೆ ಮತ್ತು ನೋಡುತ್ತಿದ್ದೇವೆ’ ಬರೆದುಕೊಂಡಿದ್ದಾರೆ. ಇದೇ ವೇಳೆ ನಾನು ನಿಮ್ಮ ಸಹೋದರಿಯಾಗಿರಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.