ಸಾರಾಂಶ
ಸುವರ್ಣ ಸೌಧದೊಳಗೆ ಅಕ್ರಮವಾಗಿ ಗೂಂಡಾಗಳನ್ನು ಕರೆಸಿ, ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದಲ್ಲದೆ ಸುಳ್ಳು ಆರೋಪ ಹೊರೆಸಿ ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿದೆ ಎಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅಕ್ರೋಶ ವ್ಯಕ್ತಪಡಿಸಿದರು.
ಕೋಲಾರ : ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಕೊಲೆಗಡುಕ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಸಿದಾಗ ಸಿ.ಟಿ. ರವಿ ಬಳಸಿದ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ಸದನಕ್ಕೆ ತಪ್ಪು ಮಾಹಿತಿ ನೀಡಿ ನಿಂದಿಸಿದ್ದಾರೆ. ಸುವರ್ಣ ಸೌಧದೊಳಗೆ ಅಕ್ರಮವಾಗಿ ಗೂಂಡಾಗಳನ್ನು ಕರೆಸಿ, ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದಲ್ಲದೆ ಸುಳ್ಳು ಆರೋಪ ಹೊರೆಸಿ ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿದೆ ಎಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಅವರನ್ನು ಬಂಧಿಸಿದ ಘಟನೆಯನ್ನು ಖಂಡಿಸಿ ನಗರದ ಕೆ.ಎಸ್.ಆರ್.ಟಿ.ಸಿ. ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ನಡೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಸಿ.ಟಿ.ರವಿ ಮೇಲೆ ದೌರ್ಜನ್ಯ
ನಂತರ ಮಾಧ್ಯಮದವರೊಂದಿಗೆ ವೇಣುಗೋಪಾಲ್ ಮಾತನಾಡಿ, ಒಂದೇ ರಾತ್ರಿಯಲ್ಲಿ ರವಿ ಅವರನ್ನು 4 - 5 ಪೊಲೀಸ್ ಠಾಣೆಗಳನ್ನು ಸುತ್ತಾಡಿಸಿ ಭಯೋತ್ಪಾದಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಮಾದರಿ ವರ್ತನೆಯುವ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಅವರು ಸಹ ಹಲ್ಲೆ ಮಾಡಿ ಗೂಂಡಾ ವರ್ತನೆ ರಾಜ್ಯದಲ್ಲಿನ ಕಾಂಗ್ರೆಸ್ ಮುಂದುವರೆಸಿದ್ದಾರೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ಕೆ.ಯು.ಡಿ.ಎ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಬಿಜೆಪಿ ವಕೀಲರ ಸಂಘದ ಅಧ್ಯಕ್ಷ ಮಂಜುನಾಥ್, ಅಬ್ಬಣಿ ಎ.ಸಿ.ವೆಂಕಟೇಶ್, ಕೆಂಬೋಡಿ ನಾರಾಯಣಸ್ವಾಮಿ, ಮಹೇಶ್, ಓಹಿಲೇಶ್, ನಾಮಾಲ್ ಮಂಜು, ಸಾ.ಮಾ.ಅನಿಲ್ ಬಾಬು, ಕೀಲುಕೋಟೆ ರವಿ, ತಿಮ್ಮರಾಯಪ್ಪ, ಮಮತಮ್ಮ, ಶ್ರೀನಾಥ್, ಹರೀಶ್, ತೇಜೇಸ್, ಜನಾರ್ದನ್ ಇದ್ದರು..