ಅಯೋಧ್ಯೆ ಜನರ ವಿರುದ್ಧ ಲಕ್ಷ್ಮಣ ಪಾತ್ರಧಾರಿ ಕಿಡಿ

| Published : Jun 06 2024, 12:30 AM IST

ಸಾರಾಂಶ

ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಹೆಸರುವಾಸಿಯಾಗಿರುವ ಸುನಿಲ್ ಲಾಹ್ರಿ ಅವರು ಬಿಜೆಪಿಗೆ ಮತ ಹಾಕದೇ ಸೋಲಿಸಿ ಸಮಾಜವಾದಿ ಪಾರ್ಟಿ ಗೆಲ್ಲಿಸಿದ ಅಯೋಧ್ಯೆಯ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆ: ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಹೆಸರುವಾಸಿಯಾಗಿರುವ ಸುನಿಲ್ ಲಾಹ್ರಿ ಅವರು ಬಿಜೆಪಿಗೆ ಮತ ಹಾಕದೇ ಸೋಲಿಸಿ ಸಮಾಜವಾದಿ ಪಾರ್ಟಿ ಗೆಲ್ಲಿಸಿದ ಅಯೋಧ್ಯೆಯ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಲಾಹ್ರಿ, ಪವಿತ್ರ ನಗರದ ಜನರು "ತಮ್ಮ ರಾಜನಿಗೆ ದ್ರೋಹ ಮಾಡುತ್ತಿದ್ದಾರೆ " ಎಂದು ಆರೋಪಿಸಿದರು ಮತ್ತು ಅವರನ್ನು "ಸ್ವಾರ್ಥಿಗಳು " ಎಂದು ಕರೆದರು.ಪಕ್ಷದ ನಾಯಕತ್ವದಲ್ಲಿ ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಯಿತು. ಆದಾಗ್ಯೂ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ, ಬಿಜೆಪಿಯ ಲಲ್ಲು ಸಿಂಗ್ ಅವರು ದೇವಸ್ಥಾನವಿರುವ ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ವಿರುದ್ಧ ಸೋತರು.

ಮೋದಿಗೆ ಅಲ್ಪ ಬಹುಮತ ಆರ್ಥಿಕ ಅಭಿವೃದ್ಧಿಗೆ ಕಷ್ಟ: ರೇಟಿಂಗ್‌ ಏಜೆನ್ಸಿಗಳುನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಲ್ಪಮತಕ್ಕೆ ಕುಸಿದಿರುವುದು ಆರ್ಥಿಕ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ ಎಂದು ರೇಟಿಂಗ್‌ ಏಜೆನ್ಸಿಗಳು ಹೇಳಿವೆ. ಅಲ್ಪಮತಗಳಿಂದಾಗಿ ಬಿಜೆಪಿಗೆ ತನ್ನ ಮೈತ್ರಿಪಕ್ಷಗಳ ಮೇಲೆ ಹೆಚ್ಚು ಅವಲಂಬನೆಯಾಗಬೇಕಾಗುತ್ತದೆ. ಹೀಗಾಗಿ ತನ್ನ ಸ್ವಂತ ನಿರ್ಧಾರಗಳನ್ನು ಬದಿಗೊತ್ತಿ, ಮಿತ್ರಪಕ್ಷಗಳ ಒಳಿತಿಗೆ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಹಿಂದಿನ ಅವಧಿಯ ಆರ್ಥಿಕ ಸುಧಾರಣ ನೀತಿಗಳ ಅನುಷ್ಠಾನ ಮುಳ್ಳಿನ ಹಾದಿಗೆ ಬರಲಿದೆ ಎಂದು ಮೂಡೀಸ್‌ ರೇಟಿಂಗ್‌ ಹಾಗೂ ಫಿಟ್ಚ್‌ ರೇಟಿಂಗ್‌ ಸಂಸ್ಥೆಗಳು ಹೇಳಿವೆ.ಈ ಸರ್ಕಾರದ ಅವಧಿಯಲ್ಲಿಯೂ ಜಿಡಿಪಿ ಸೇರಿದಂತೆ ವಿವಿಧ ಆರ್ಥಿಕ ಬೆಳವಣಿಗೆಗಳ ನಿರೀಕ್ಷೆಗಳು ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಅವು ಹೇಳಿವೆ.