ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಲು ಮನವಿ

| Published : Feb 09 2024, 01:48 AM IST / Updated: Feb 09 2024, 08:32 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಯ ಹರಿಕಾರ ಹಾಗೂ ಬಯಲು ಸೀಮೆಯ ಬರಡು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿದ ಆಧುನಿಕ ಭಗೀರಥ ಡಾ.ಕೆ.ಸುಧಾಕರ್. ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಸ್ಥಳಾಂತಗೊಂಡಾಗ ಪಟ್ಟುಹಿಡಿದು ಜಿಲ್ಲೆಗೆ ತಂದಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಜಿ ಸಚಿವ ಡಾ.ಕೆ.ಸುಧಾಕರ್ ರವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದು ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಕೋಚಿಮುಲ್ ಮಾಜಿ ಅಧ್ಯಕ್ಷ ಹಾಗೂ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ. ವಿ. ನಾಗರಾಜ್ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಗೆಲುವು ಪಡೆದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇದರ ಪರಿಣಾಮವಾಗಿ ಕ್ಷೇತ್ರದ ಲೋಕಸಭಾ ಸ್ಥಾನ ಬಿಜೆಪಿ ಗೆಲ್ಲಲು ಸಾಧ್ಯವಾಯಿತು ಎಂದರು.

ಟಿಕೆಟ್‌ ನೀಡದರೆ ಗೆಲುವು ಖಚಿತ: ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮಾತಾಡಿ ಅಭಿವೃದ್ಧಿಗೆ, ರೈತರಿಗೆ ಒತ್ತು ಕೊಡುವ ಸುಧಾಕರ್‌ ರವರು ದೂರ ದೃಷ್ಟಿ ಇಟ್ಟು ಕೆಲಸ ಮಾಡುವರು ಇವರಿಗೆ ಟಿಕೆಟ್ ನೀಡಿದ್ದೆ ಆದಲ್ಲಿ ಗೆಲುವು ನಿಶ್ಚಿತ ಎಂದರು. 

ನಗರಸಭೆ ಮಾಜಿ ಅಧ್ಯಕ್ಷ ಆನಂದ್ ಬಾಬುರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಯ ಹರಿಕಾರ ಹಾಗೂ ಬಯಲು ಸೀಮೆಯ ಬರಡು ಜಿಲ್ಲೆಯ ಕೆರಗಳಿಗೆ ನೀರು ಹರಿಸಿದ ಆಧುನಿಕ ಭಗೀರಥ ಡಾ.ಕೆ.ಸುಧಾಕರ್. ಚಿಕ್ಕಬಳ್ಳಾಪುರದ ಜನರಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಚನ್ನಪಟ್ಟಣಕ್ಕೆ ಹೋಗಿದ್ದಾಗ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೆಡಿಕಲ್ ಕಾಲೇಜನ್ನು ಮರಳಿತಂದರು ಎಂದು ತಿಳಿಸಿದರು. 

ಸುದ್ದಿಗೋಷ್ಟಿಯಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಾಮಸ್ವಾಮಿ, ಮಂಚನಬಲೆ ಮಾಜಿ ಮಂಡಲ ಪ್ರಧಾನ ವೆಂಕಟನಾರಾಯಣಪ್ಪ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಳೆಗೌಡ, ಮಾಜಿ ಅಧ್ಯಕ್ಷ ನಾಗೇಶ್, ಪೆರೆಸಂದ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚೆನ್ನಕೃಷ್ಣಾರೆಡ್ಡಿ, ಮುಖಂಡರಾದ ಪ್ರಸಾದ್, ಗಿಡ್ನಹಳ್ಳಿ ನಾರಾಯಣಸ್ವಾಮಿ, ನಗರಸಭೆ ಸದಸ್ಯೆ ಭಾರತಿದೇವಿ, ಮಂಚನಬಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ್, ಬಿಜೆಪಿ ಮುಖಂಡ ಎ. ವಿ. ಬೈರೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್,ಮತ್ತಿತರರು ಇದ್ದರು.