ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯ ಮತಗಟ್ಟೆಯಲ್ಲಿ ಇವಿಎಂ ಒಡೆದು ಹಾಕಿದ್ದ ವೈಎಸ್‌ಆರ್‌ ಕಾಂಗ್ರೆಸ್ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರಿಗೆ ಜೂನ್ 4 ರಂದು ಮಚರ್ಲಾ ಮತಎಣಿಕೆ ಕೇಂದ್ರಕ್ಕೆ ಹೋಗದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.

ನವದೆಹಲಿ: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯ ಮತಗಟ್ಟೆಯಲ್ಲಿ ಇವಿಎಂ ಒಡೆದು ಹಾಕಿದ್ದ ವೈಎಸ್‌ಆರ್‌ ಕಾಂಗ್ರೆಸ್ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರಿಗೆ ಜೂನ್ 4 ರಂದು ಮಚರ್ಲಾ ಮತಎಣಿಕೆ ಕೇಂದ್ರಕ್ಕೆ ಹೋಗದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.

ಮಚರ್ಲಾ ವಿಧಾನಸಭಾ ಕ್ಷೇತ್ರದ ವೈಎಸ್‌ಆರ್‌ಪಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರೆಡ್ಡಿ, ತನ್ನ ಬೆಂಬಲಿಗರ ಜೊತೆಗೆ ಬಂದು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಒಡೆದು ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಮೇ 28ರಂದು ಹೈಕೋರ್ಟು ರೆಡ್ಡಿಗೆ ಬಂಧನದಿಂಧ ರಕ್ಷಣೆ ನೀಡಿತ್ತು.

ಇದನ್ನು ಪ್ರಶ್ನಿಸಿ ತೆಲುಗು ದೇಶಂ (ಟಿಡಿಪಿ) ಪಕ್ಷದ ಏಜೆಂಟ್‌ ಶೇಷಗಿರಿ ರಾವ್ ಸುಪ್ರೀಂ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿತು, ‘ಬಂಧನದಿಂದ ರಕ್ಷಣೆ ನಿಡಿದ್ದು ಎಷ್ಟು ಸರಿ? ಇಲ್ಲಿ ನ್ಯಾಯಾಂಗದ ಅಣಕ ಮಾಡಲಾಗಿದೆ’ ಎಂದು ಕಿಡಿಕಾರಿ, ಜೂನ್‌ 4ಕ್ಕೆ ಮತ ಎಣಿಕೆ ಕೇಂದ್ರಕ್ಕೆ ಹೋಗಬಾರದೆಂದು ಆದೇಶಿಸಿತು.