ಸಿ.ವಿ.ಷಣ್ಮುಗಂ ಮತ್ತು ಎಸ್‌.ಪಿ.ವೇಲುಮಣಿ ನೇತೃತ್ವದ ಶಾಸಕರ ಬಣ ಇದೀಗ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಅವರ 21 ಬೆಂಬಲಿಗರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದೆ.

 ಚೆನ್ನೈ: ತಮಿಳುನಾಡಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆಯಲ್ಲಿ ಬಣಜಗಳ ತೀವ್ರಗೊಂಡಿದೆ. ಪಕ್ಷದ ಹಿರಿಯ ನಾಯಕರಾದ ಸಿ.ವಿ.ಷಣ್ಮುಗಂ ಮತ್ತು ಎಸ್‌.ಪಿ.ವೇಲುಮಣಿ ನೇತೃತ್ವದ ಶಾಸಕರ ಬಣ ಇದೀಗ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಅವರ 21 ಬೆಂಬಲಿಗರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದೆ.

ಪಕ್ಷದ ವಿಪ್‌ ಉಲ್ಲಂಘಿಸಿ ಟಿವಿಕೆ ವಿರುದ್ಧ ಮತ

ವಿಶ್ವಾಸಮತ ಯಾಚನೆ ವೇಳೆ ಪಕ್ಷದ ವಿಪ್‌ ಉಲ್ಲಂಘಿಸಿ ಟಿವಿಕೆ ವಿರುದ್ಧ ಮತಚಲಾಯಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಶಾಸಕಾಂಗ ಪಕ್ಷದ ಪದಾಧಿಕಾರಿಗಳನ್ನು ಬಹುಮತದ ಆಧಾರದ ಮೇಲೆ ಆರಿಸಲಾಗುತ್ತದೆ. ಷಣ್ಮುಗಂ ಮತ್ತು ವೇಲುಮಣಿ ಬಣವು 25 ಶಾಸಕರ ಬೆಂಬಲ ಹೊಂದಿದ್ದು, ಅದರಂತೆ ಮುಖ್ಯ ವಿಪ್‌ ಆಗಿ ನಾನು ನೇಮಕಗೊಂಡಿದ್ದೇನೆ. ವಿಶ್ವಾಸಮತ ಯಾಚನೆಗೂ ಮೊದಲು ಟಿವಿಕೆ ಪಕ್ಷ ಬೆಂಬಲಿಸುವಂತೆ ಪಕ್ಷದ ಎಲ್ಲಾ ಶಾಸಕರಿಗೆ ಇ-ಮೇಲ್‌, ವಾಟ್ಸಪ್‌ ಮೂಲಕ ವಿಪ್‌ ಜಾರಿಗೊಳಿಸಿದ್ದೆ ಎಂದು ಶಾಸಕ ಸಿ.ವಿಜಯ್‌ ಕುಮಾರ್‌ ಹೇಳಿದ್ದಾರೆ.

25 ಮಂದಿ ಆದೇಶ ಪಾಲಿಸಿದ್ದಾರೆ.

ಆದರೆ, ಪಕ್ಷದ 47 ಶಾಸಕರಲ್ಲಿ 25 ಮಂದಿ ನನ್ನ ಆದೇಶ ಪಾಲಿಸಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಸೇರಿ 22 ಶಾಸಕರು ವಿಪ್‌ ಉಲ್ಲಂಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರನ್ನು ಭೇಟಿಯಾಗಿ ಅವರ ಅನರ್ಹತೆಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ವಿಶ್ವಾಸಮತ ಯಾಚನೆಗೂ ಮೊದಲು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಬಣವು ಸರ್ಕಾರದ ವಿರುದ್ಧ ಮತಚಲಾಯಿಸುವಂತೆ ಶಾಸಕರಿಗೆ ವಿಪ್‌ ಜಾರಿ ಮಾಡಿತ್ತು. ಅದನ್ನು ಷಣ್ಮುಗಂ ಬಣದ 25 ಜನರು ಉಲ್ಲಂಘಿಸಿದ ಕಾರಣ ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಎಡಪ್ಪಾಡಿ ಬಣ ಮನವಿ ಮಾಡಿತ್ತು.