ಸಾರಾಂಶ
ಕೋಲಾರ : ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಒಪಿಎಸ್ ಜಾರಿ ಭರವಸೆ ನೀಡಿದೆ, ಜತೆಗೆ ವೇತನ ಆಯೋಗದ ವರದಿ ಜಾರಿಗೂ ಸಿದ್ದವಿದ್ದು, ನೀತಿಸಂಹಿತೆ ಮುಗಿದ ಕೂಡಲೇ ಇವೆರಡೂ ಆದೇಶಗಳು ಹೊರಬರಲಿದ್ದು, ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ರನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕರೆ ನೀಡಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚಿಸಿ ಮಾತನಾಡಿ, ಅದೇ ರೀತಿ ಬೆಂಗಳೂರಿನಲ್ಲಿ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮೋಜಿಗೌಡರಿಗೆ ಮತ ನೀಡಲು ನಿಮ್ಮ ಸ್ನೇಹಿತರು, ಸಂಬಂಧಿಕರಿದ್ದರೆ ಮನವಿ ಮಾಡುವಂತೆ ಕೋರಿದರು.
ಹೊಸ ಪಿಂಚಣಿ ನೀತಿಯಿಂದ ಕಷ್ಟ
ನೂತನ ಪಿಂಚಣಿ ನೀತಿ ತಂದು ಶಿಕ್ಷಕರು ಕಷ್ಟಕ್ಕೆ ಒಳಗಾಗುವಂತೆ ಮಾಡಿದ್ದೇ ಹಿಂದಿನ ಯಡಿಯೂರಪ್ಪ, ಕುಮಾರಸ್ವಾಮಿ ಸರ್ಕಾರ, ಇದರಿಂದ ನೌಕರರು, ಶಿಕ್ಷಕರು ಸಂಕಷ್ಟ ಅನುಭವಿಸುವಂತಾಗಿದೆ. ಕರ್ನಾಟಕ ವಿಧಾನಪರಿಷತ್ ಅತ್ಯಂತ ಉತ್ತಮ ಪರಂಪರೆ ಹೊಂದಿದೆ ಅಂತಹ ಪರಿಷತ್‌ನ ಮಹತ್ವ ಹೆಚ್ಚಿಸಲು ಕರ್ನಾಟಕದ ಆಡಳಿತ, ಅಭಿವೃದ್ದಿಯ ಹಿತ ದೃಷ್ಟಿಯಿಂದ ಡಿ.ಟಿ.ಶ್ರೀನಿವಾಸ್‌ರಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡಿ ಎಂದು ಮನವಿ ಮಾಡಿದರು.
ಡಿ.ಟಿ.ಶ್ರೀನಿವಾಸ್ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಅವರಿಗೆ ಶಿಕ್ಷಕರ ಸಮಸ್ಯೆಯ ಅರಿವಿದೆ, ಜತೆಗೆ ಅವರು ಕೋಲಾರದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದು, ಜಿಲ್ಲೆಯ ಒಡನಾಟ ಹೊಂದಿದ್ದಾರೆ, ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕರ ಸಮಸ್ಯೆಗೆ ಸ್ಪಂದನೆಅವರು ವಿಧಾನಪರಿಷತ್‌ಗೆ ಆಯ್ಕೆಯಾಗಿ ಬಂದರೆ, ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳನ್ನು ಪರಿಹಾರ ಸಾಧ್ಯ ಎಂದು ತಿಳಿಸಿ, ಐದು ಜಿಲ್ಲೆಗಳ ೩೩ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು ೨೪ ಸಾವಿರದಷ್ಟು ಶಿಕ್ಷಕರು ಇದ್ದು ಸರಕಾರ ಇದ್ದ ಪಕ್ಷಕ್ಕೆ ಬೆಂಬಲಿಸಿದರೆ ನಿಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತದೆ ಎಂದರು.ಅದೇ ರೀತಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಮೋಜಿಗೌಡ ಅಭಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿಯವರು, ಕೋಲಾರ ತಾಲ್ಲೂಕಿನ ಜನ್ನಘಟ್ಟ ವೆಂಕಟಮುನಿಯಪ್ಪ ಅವರ ಅಳಿಯ ಆಗಿದ್ದು, ಅವರಿಗೆ ಮತ ಹಾಕಲು ನಿಮ್ಮ ಸ್ನೇಹಿತರಿಗೆ ಮನವಿ ಮಾಡಿ ಎಂದರು.ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಲೀಲಾ, ಸುಗುಣಾ, ಫರೀದಾ, ಚಂದ್ರಶೇಖರ್ ಇದ್ದರು.