ಉತ್ಸಾಹದ ಚಿಲುಮೆಯಾಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರು ಪುದುಚೇರಿಗೆ ಸೈಕ್ಲಿಂಗ್‌ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದಿಂದ ಹೊರಟು 18 ಗಂಟೆ 30 ನಿಮಿಷ ಸೈಕಲ್‌ ತುಳಿದು 330 ಕಿ.ಮೀ. ಕ್ರಮಿಸಿ ಪುದುಚೇರಿ ತಲುಪಿದ್ದಾರೆ.

ಬೆಂಗಳೂರು : ಉತ್ಸಾಹದ ಚಿಲುಮೆಯಾಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರು ಪುದುಚೇರಿಗೆ ಸೈಕ್ಲಿಂಗ್‌ ಪ್ರವಾಸ ಕೈಗೊಂಡಿದ್ದಾರೆ.

18 ಗಂಟೆ 30 ನಿಮಿಷ ಸೈಕಲ್‌ ತುಳಿದು 330 ಕಿ.ಮೀ. ಕ್ರಮಿಸಿದ್ದಾರೆ.

‘ರಾಜಾಜಿನಗರ ಪೆಡಲ್‌ ಪವರ್‌’ ತಂಡದ ಸದಸ್ಯರಾದ ಎಸ್‌.ಸುರೇಶ್‌ ಕುಮಾರ್‌, ದಿವಾಕರ್‌, ಬಾಲಕೃಷ್ಣ ಹಾಗೂ ಡಾ.ಸುಹಾಸ್‌ ಅವರು ಶುಕ್ರವಾರ ಮುಂಜಾನೆ 4 ಗಂಟೆಗೆ ಬೆಂಗಳೂರಿನ ಬಸವೇಶ್ವರನಗರದಿಂದ ಹೊರಟು 18 ಗಂಟೆ 30 ನಿಮಿಷ ಸೈಕಲ್‌ ತುಳಿದು 330 ಕಿ.ಮೀ. ಕ್ರಮಿಸಿ ಪುದುಚೇರಿ ತಲುಪಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ

ಈ ಸೈಕ್ಲಿಂಗ್‌ ಪ್ರವಾಸದ ಬಗ್ಗೆ ಶಾಸಕ ಎಸ್‌.ಸುರೇಶ್‌ ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಸೈಕ್ಲಿಂಗ್‌ ತಂಡ ಮೊದಲ ಬಾರಿಗೆ 2014ರ ಜನವರಿಯಲ್ಲಿ ಪುದುಚೇರಿಗೆ ಸೈಕ್ಲಿಂಗ್‌ ಪ್ರವಾಸ ಕೈಗೊಂಡಿತ್ತು. ಈ ಬಾರಿಯ ವಿಶೇಷವೆಂದರೆ, ಬೆಂಗಳೂರಿನಿಂದ ಪುದುಚೇರಿಯವರೆಗೂ ಕನಿಷ್ಠ ಐದು ಕಡೆ ವಿವಿಧ ಭಾಗಗಳಲ್ಲಿ ಸ್ಥಳೀಯ ನಾಗರಿಕರು ಹಾಗೂ ಪ್ರಮುಖರೊಂದಿಗೆ ಸಂವಾದ ನಡೆಸಲಾಯಿತು. ಈ ಸೈಕ್ಲಿಂಗ್‌ ಪ್ರಯಾಣಕ್ಕೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಎಸ್‌.ಸುರೇಶ್‌ ಕುಮಾರ್‌ ಧನ್ಯವಾದ ತಿಳಿಸಿದ್ದಾರೆ.