ರಾಜ್ಯದಲ್ಲಿರುವುದು ಮನೆ ಹಾಳು ಕಾಂಗ್ರೆಸ್‌ ಸರ್ಕಾರ

| Published : Jun 30 2024, 12:53 AM IST / Updated: Jun 30 2024, 05:30 AM IST

ರಾಜ್ಯದಲ್ಲಿರುವುದು ಮನೆ ಹಾಳು ಕಾಂಗ್ರೆಸ್‌ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಮುದ್ರಾಂಕ ಶುಲ್ಕ ನಮ್ಮ ಅಧಿಕಾರದಲ್ಲಿ ಶೇ10 ಕಡಿಮೆ ಮಾಡಿದ್ದೆ. ಈಗ ಕಾಂಗ್ರೆಸ್ ಜಾಸ್ತಿ ಮಾಡಿದೆ. ಬಡ ಬಗ್ಗರು ಮನೆ ಸೈಟು ಕೊಳ್ಳುದಂತೆ ಮಾಡಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಹಾಕಿಸಲು ಈಗ 3.5 ಲಕ್ಷ ಆಗಿದೆ. ಆದ್ದರಿಂದ ಇದು ಮನೆಹಾಳು ಸರ್ಕಾರವಾಗಿದೆ.

 ಚಿಕ್ಕಬಳ್ಳಾಪುರ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮನೆ ಹಾಳು ಸರ್ಕಾರವಾಗಿದ್ದು, ಜಾತಿ ಜಾತಿಗಳ ನಡುವೆ ಜಗಳ ತಂದಿಟ್ಟು ಜಾತಿಗಳನ್ನು ಒಡೆಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಆರೋಪಿಸಿದರು. ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರಿಂದ ಶನಿವಾರ ಏರ್ಪಡಿಸಿದ್ದ ಡಾ.ಕೆ.ಸುಧಾಕರ್‌ಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸಿದೆ ಎಂದರು.

ಎಣ್ಣೆ ಅಂಗಡಿ ನೋಡಿದ್ರೆ ಕಿಕ್‌

ಸಿದ್ದರಾಮಯ್ಯ ಏಟಿಗೆ ಎಣ್ಣೆ ಅಂಗಡಿ ನೋಡಿದ್ರೆ ಕಿಕ್ ಹೊಡೆಯುತ್ತೆ. ಮುದ್ರಾಂಕ ಶುಲ್ಕ ನಮ್ಮ ಅಧಿಕಾರದಲ್ಲಿ ಶೇ10 ಕಡಿಮೆ ಮಾಡಿದ್ದೆ. ಈಗ ಕಾಂಗ್ರೆಸ್ ಜಾಸ್ತಿ ಮಾಡಿದೆ. ಬಡ ಬಗ್ಗರು ಮನೆ ಸೈಟು ಕೊಳ್ಳುದಂತೆ ಮಾಡಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಹಾಕಿಸಲು ಈಗ 3.5 ಲಕ್ಷ ಆಗಿದೆ. ಆದ್ದರಿಂದ ಇದು ಮನೆಹಾಳು ಸರ್ಕಾರವಾಗಿದೆ. ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್‌ ಕಚ್ಚಾಟ ಹುಟ್ಟು ಹಾಕಿರುವುದು ಒಳ್ಳೆಯದಲ್ಲ ಎಂದರು.

ಜನಶಕ್ತಿ ಗೆದ್ದಿದೆ: ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಶಕ್ತಿ ಜನಶಕ್ತಿ ಪೈಪೋಟಿಯಲ್ಲಿ ಜನಶಕ್ತಿ ಗೆದ್ದಿದೆ.ಇವತ್ತು ಇಲ್ಲಿನ ಶಾಸಕರಿಗೆ ಅದು ಗೊತ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಸ್ಥಿತಿಗೆ ತಂದಿದ್ದು ಜನಶಕ್ತಿಯಾಗಿದೆ. ಇಲ್ಲಿ ಜನಶಕ್ತಿಗೆ ಬಲ ತಂದಿದ್ದು ಡಾ.ಕೆ. ಸುಧಾಕರ್. ಅದಕ್ಕೆ ರಾಜ ಶಕ್ತಿಗಿಂತ ಜನಶಕ್ತಿ ದೊಡ್ಡದು ಎಂದು ಇಲ್ಲಿನ ಜನತೆ ಸುಧಾಕರ್ ಕೈ ಹಿಡಿದಿದ್ದಾರೆ. ಯಾರೂ ಶಾಸಕ ಸ್ಥಾನವನ್ನು ಪಣಕ್ಕಿಟ್ಟು ಅಭಿವೃದ್ದಿ ಕೆಲಸ ಮಾಡಲ್ಲ, ಆದರೆ ಡಾ.ಕೆ.ಸುಧಾಕರ್ ರಾಜಕೀಯ ಜೀವನವನ್ನೇ ಮುಡುಪಾಗಿಟ್ಟು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತಂದರು ಎಂದು ನೆನಪಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಬಡವರಿಗೆ 25 ಸಾವಿರ ನಿವೇಶನ ನೀಡಲು ಡಾ.ಸುಧಾಕರ್‌ ಜಮೀನು ಮಂಜೂರಾತಿಗೆ ನನ್ನ ಬಳಿ ಸದಾ ಬರ್ತಿದ್ರು, ನಾನು ಕಂದಾಯ ಮಂತ್ರಿ ಅಶೋಕ್ ಬಳಿ ಕಳಿಸಿದ್ದೆ. ಅಲ್ಲಿ ಅವರನ್ನು ಒಪ್ಪಿಸುವಲ್ಲಿ ಸುಧಾಕರ್ ಯಶಸ್ವಿಯಾಗಿದ್ದರು. ಇಬ್ರೂ ಗೌಡ್ರು ಒಂದಾದ ಮೇಲೆ ನಮ್ಮದೇನು ಕೆಲಸ ಎಂದು ವೇದಿಕೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಅಶೋಕ್‌ ಆಕ್ಟೀವ್‌ ಆಗಿದ್ದಾರೆ

ಲೋಕಸಭಾ ಚುನಾವಣಾ ನಂತರ ಆರ್.ಅಶೋಕ್ ತುಂಬಾ ಆಕ್ವೀವ್ ಆಗಿದಾರೆ. ವಿರೋಧ ಪಕ್ಷದಲ್ಲಿ ಸರ್ಕಾರದ ವಿರುದ್ದ ಅತ್ಯಂತ ಪ್ರಬಲ ಪೈಪೋಟಿಗಿಳಿದಿದಾರೆ. ಅವರಿಗೆ ಏನೋ ಬೆಳಕು ಕಂಡಂಗಿದೆ. ಅವರಿಗೆ ಕಾಣಿಸಿರುವ ಬೆಳಕಿನಿಂದ ಏನೋ ನಿರೀಕ್ಷೆ ಕಾಣ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಬೀಳಲಿದೆ ಎನ್ನುವ ಸಂಶಯ ವ್ಯಕ್ತಪಡಿಸಿದರು.