ಐದು ‘ಗ್ಯಾರಂಟಿ’ ಅನುಷ್ಠಾನದಲ್ಲಿ ಸರ್ಕಾರ ಯಶಸ್ವಿ

| Published : Feb 25 2024, 01:49 AM IST / Updated: Feb 25 2024, 11:48 AM IST

ಸಾರಾಂಶ

ವಿಶ್ವದಲ್ಲೇ ನಮ್ಮ ರಾಜ್ಯದಲ್ಲಿ ನೀಡಿರುವ ಯೋಜನೆಗಳನ್ನು ಯಾರೂ ನೀಡಿಲ್ಲ ಎಂದ ಅವರು ಎಲ್ಲರೂ ಆಯುಷ್ಮನ್ ಭಾರತ್ ಆರೋಗ್ಯ ಕಾರ್ಡು ಮಾಡಿಕೊಳ್ಳಬೇಕು. ಸುಮಾರು ೫ ಲಕ್ಷ ರೂಗಳ ವರೆಗೆ ಉಚಿತ ಅರೋಗ್ಯ ಸೇವೆ ಪಡೆಯಬಹುದಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮುನ್ನ ನೀಡಿದ ೫ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಪ್ರತಿಪಾದಿಸಿದರು.

ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಮಟ್ಟದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಕೃತಿಕ ಕಾರ್ಯವಿಧಾನ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಭರವಸೆ ಈಡೇರಿಸಿದ ಸರ್ಕಾರ:  ೨೦೨೩ ಮೇ ೨ ರಂದು ರಾಜ್ಯದಲ್ಲಿ ಹೊಸಪರ್ವದ ಸೆಕೆ ಪ್ರಾರಂಭವಾಗಿದೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ೧೦ ಕೆ.ಜಿ. ಅಕ್ಕಿ ಅನ್ನಭಾಗ್ಯ, ಗೃಹಶಕ್ತಿ ಯೋಜನೆಯಂತೆ ರಾಜ್ಯಾದಾದ್ಯಂತ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ, ಗೃಹ ಜ್ಯೋತಿ ಯೋಜನೆಯಲ್ಲಿ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್, ಮನೆ ಯಜಮಾನಿಗೆ ೨ ಸಾವಿರ ರೂ., ನಿರುದ್ಯೋಗಿಗಳಿಗೆ ಯುವ ಶಕ್ತಿ ಮೂಲಕ ಪದವೀಧರರಿಗೆ ೩ ಸಾವಿರ ರೂ., ಡಿಪ್ಲೋಮಾ ಪದವಿಧರರಿಗೆ ೧೫೦೦ ಮಾಸಿಕ ಸ್ಟೈಫಂಡ್ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ೫ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಲ್ಲಿ ಕೋಲಾರ ವಿಭಾಗದಿಂದ ಈವರೆಗೆ ೩.೨೪ ಕೋಟಿ ಪ್ರಯಾಣಿಕರು ಪ್ರಯೋಜನ ಪಡೆದಿದ್ದು ಒಟ್ಟು ೮೭,೩೮ ಕೋಟಿ ರೂ ಅದಾಯಗಳಿಸಿದೆ. 

ಗೃಹಲಕ್ಷ್ಮೀ ಯೋಜನೆಯಲ್ಲಿ ಈವರೆಗೆ ೮೧.೧೮೭ ಮಂದಿ ಫಲಾನುಭವಿಗಳಗೆ ಮಾಸಿಕವಾಗಿ ತಲಾ ೨ ಸಾವಿರ ರೂಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು. ಆಯುಷ್ಮನ್ ಭಾರತ್ ಆರೋಗ್ಯ ಕಾರ್ಡ್‌

ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಲ್ಲೇ ನಮ್ಮ ರಾಜ್ಯದಲ್ಲಿ ನೀಡಿರುವ ಯೋಜನೆಗಳನ್ನು ಯಾರೂ ನೀಡಿಲ್ಲ ಎಂದ ಅವರು ಎಲ್ಲರೂ ಆಯುಷ್ಮನ್ ಭಾರತ್ ಆರೋಗ್ಯ ಕಾರ್ಡು ಮಾಡಿಕೊಳ್ಳಬೇಕು. 

ಸುಮಾರು ೫ ಲಕ್ಷ ರೂಗಳ ವರೆಗೆ ಉಚಿತ ಅರೋಗ್ಯ ಸೇವೆ ಪಡೆಯಬಹುದಾಗಿದೆ ಎಂದರು.ವಿಮೆ ಕಾರ್ಡ್‌, ತ್ರಿಚಕ್ರ ವಾಹನ ವಿತರಣೆ

ಇದೇ ಸಂದರ್ಭಧಲ್ಲಿ ನಗರಸಭೆಯಿಂದ ೧೨ ಲಕ್ಷ ರೂ ಪಾವತಿಸಿ ೨೨೯ ಮಂದಿಗೆ ಎಸ್.ಬಿ.ಐ ಆರೋಗ್ಯ ವಿಮೆ ಕಾರ್ಡಗಳನ್ನು ವಿತರಿಸಲಾಯಿತು, ೩೪ ಮಂದಿ ವಿಕಲಚೇತನರಿಗೆ ೪೪ ಲಕ್ಷ ರೂ ಮೌಲ್ಯದ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.

ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ತಹಸೀಲ್ದಾರ್ ಹರ್ಷವರ್ಧನ್, ತಾ.ಪಂ ಇ.ಓ. ಮುನಿಯಪ್ಪ ಬೆಸ್ಕಾಂ ಎ.ಇ.ಇ. ಸ್ವಾಮಿ, ನಗರಸಭೆ ಪೌರಾಯುಕ್ತ ಶಿವಾನಂದ, ಗ್ರಾಪಂ ಅಧ್ಯಕ್ಷರಾದ ಮಂಜುನಾಥ್, ನಾಗವೇಣಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲ್, ನಗರಸಭೆ ಸದಸ್ಯರಾದ ಮಂಜುನಾಥ್, ಅಪ್ಸರ್, ಶಫಿಯುಲ್ಲಾ. ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ ಇದ್ದರು.