ಸಾರಾಂಶ
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಣ್ಣಾಮಲೈ ಅವರ ಫೋಟೋ ಕಟ್ಟಿರುವ ಕುರಿಯೊಂದರ ತಲೆಯನ್ನು ಕಡಿದಿರುವ ವಿಡಿಯೋವೊಂದನ್ನು ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಣ್ಣಾಮಲೈ ಅವರ ಫೋಟೋ ಕಟ್ಟಿರುವ ಕುರಿಯೊಂದರ ತಲೆಯನ್ನು ಕಡಿದಿರುವ ವಿಡಿಯೋವೊಂದನ್ನು ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ವಿಡಿಯೋ ದೃಶ್ಯೀಕರಣ ಮಾಡಿರುವ ಸ್ಥಳ ಇನ್ನೂ ಪತ್ತೆಯಾಗಿಲ್ಲವಾದರೂ ಮೊದಲಿಗೆ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣ ತಿರುಪತಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಅಣ್ಣಾಮಲೈ ಫೋಟೋ ಇರುವ ಕುರಿಯನ್ನು ನಡುರಸ್ತೆಯಲ್ಲಿ ಕಡಿದು ಅಣ್ಣಾಮಲೈ ವಿರುದ್ಧ ಘೋಷಣೆ ಕೂಗಿರುವುದು ಡಿಎಂಕೆ ಕಾರ್ಯಕರ್ತರ ಕೀಳು ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ. ಈ ವಿಡಿಯೋದಲ್ಲಿ ಮಕ್ಕಳನ್ನೂ ಸಹ ಅಣ್ಣಾಮಲೈ ವಿರುದ್ಧ ಘೋಷಣೆ ಕೂಗುವಂತೆ ಪ್ರಚೋದಿಸಿದ ದುರುಳರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಸ್ವತಃ ಅಣ್ಣಾಮಲೈ ಕೂಡ ‘ಡಿಎಂಕೆ ಕಾರ್ಯಕರ್ತರಿಗೆ ಆಕ್ರೋಶವಿದ್ದಲ್ಲಿ ನನ್ನ ಮೇಲೆ ಕೈ ಮಾಡಲಿ. ಅಮಾಯಕ ಕುರಿಯನ್ನು ಬಲಿ ಕೊಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.