ಕಾಂಗ್ರೆಸ್ ಸೇರಿದ ನಟಿವಿಜಯಶಾಂತಿಗೆ ಪಕ್ಷದಸಮನ್ವಯಾಧಿಕಾರಿ ಹುದ್ದೆ

| Published : Nov 19 2023, 01:30 AM IST

ಕಾಂಗ್ರೆಸ್ ಸೇರಿದ ನಟಿವಿಜಯಶಾಂತಿಗೆ ಪಕ್ಷದಸಮನ್ವಯಾಧಿಕಾರಿ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಲಂಗಾಣದ ಚುನಾವಣೆಯ ಪ್ರಚಾರ ಮತ್ತು ಯೋಜನಾ ಸಮಿತಿಯ ಮುಖ್ಯ ಸಮನ್ವಾಯಾಧಿಕಾರಿಯಾಗಿ ನಟಿ ಹಾಗೂ ರಾಜಕಾರಣಿ ವಿಯಜಶಾಂತಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ನೇಮಿಸಿದ್ದಾರೆ.

ನವದೆಹಲಿ: ತೆಲಂಗಾಣದ ಚುನಾವಣೆಯ ಪ್ರಚಾರ ಮತ್ತು ಯೋಜನಾ ಸಮಿತಿಯ ಮುಖ್ಯ ಸಮನ್ವಾಯಾಧಿಕಾರಿಯಾಗಿ ನಟಿ ಹಾಗೂ ರಾಜಕಾರಣಿ ವಿಯಜಶಾಂತಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ನೇಮಿಸಿದ್ದಾರೆ.

ನಟಿ ಕಾಂಗ್ರೆಸ್‌ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ‘ತಕ್ಷಣಕ್ಕೆ ಜಾರಿಗೆ ಬರುವಂತೆ ತೆಲಂಗಾಣ ವಿಧಾನಸಭೆಗೆ ಮುಖ್ಯ ಯೋಜನಾ ಸಮನ್ವಯಾಧಿಕಾರಿಯಾಗಿ ವಿಜಯಶಾಂತಿ ಅವರ ನೇಮಕ ಪ್ರಸ್ತಾವಕ್ಕೆ ಖರ್ಗೆ ಅವರು ಅನುಮೋದನೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅಧಿಕೃತ ಹೇಳಿಕೆ ನೀಡಿದ್ದಾರೆ.