ದೇಶಾದ್ಯಂತ ಕಾಂಗ್ರೆಸ್‌ ಹಾಗೂ ಇಂಡಿ ಕೂಟದ ಸ್ಥಾನಗಳು ಕಳೆದ ಬಾರಿಗೆ ಹೋಲಿಸಿದರೆ ಭಾರೀ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಿಲ್ಲಿ ನಿವಾಸದ ಮುಂದೆ ಯೂತ್‌ ಕಾಂಗ್ರೆಸ್‌ ಸದಸ್ಯರು ಸಂಭ್ರಮಿಸಿದರು.

ನವದೆಹಲಿ: ದೇಶಾದ್ಯಂತ ಕಾಂಗ್ರೆಸ್‌ ಹಾಗೂ ಇಂಡಿ ಕೂಟದ ಸ್ಥಾನಗಳು ಕಳೆದ ಬಾರಿಗೆ ಹೋಲಿಸಿದರೆ ಭಾರೀ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಿಲ್ಲಿ ನಿವಾಸದ ಮುಂದೆ ಯೂತ್‌ ಕಾಂಗ್ರೆಸ್‌ ಸದಸ್ಯರು ಸಂಭ್ರಮಿಸಿದರು.

ಯೂತ್‌ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್‌ ಮಾತನಾಡಿ, ‘ದೇಶಾದ್ಯಂತ ಇಂಡಿ ಕೂಟದ ಸದಸ್ಯ ಪಕ್ಷಗಳು ಭಾರೀ ಸಂಖ್ಯೆಯಲ್ಲಿ ಗೆಲುವು ಕಂಡಿವೆ. ಎನ್‌ಡಿಎ ಮೈತ್ರಿಕೂಟಕ್ಕೆ ಇನ್ನೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅಧಿಕೃತವಾಗಿ ಬೆಂಬಲ ಸೂಚಿಸಿಲ್ಲ. ಅಲ್ಲದೆ ಜೆಡಿಯು ನಾಯಕ ನಿತೀಶ್‌ಕುಮಾರ್‌ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಜೊತೆಗೇ ವಿಮಾನದಲ್ಲಿ ಬಂದಿದ್ದು ಸಹ ಎಲ್ಲರಿಗೂ ಗೊತ್ತಿದೆ. ಅದರ ಜೊತೆಗೆ ಬಿಜೆಪಿ ಹಲವು ರಾಜ್ಯಗಳಲ್ಲಿ ಸರ್ಕಾರಗಳನ್ನು ತೆಗೆದಿದ್ದು ಸಹ ಎಲ್ಲರಿಗೂ ಗೊತ್ತಿದೆ. ಇದಕ್ಕೆ ಉತ್ತರವೆಂಬಂತೆ ಈ ಬಾರಿ ನಾವು ಕೇಂದ್ರದಲ್ಲಿ ಸರ್ಕಾರ ರಚಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.