ಸಾರಾಂಶ
ಸುತ್ತೂರಿನಲ್ಲಿ ಅರ್ಜುನ ಆನೆಗೆ 11ನೇ ದಿನದ ಪುಣ್ಯಾರಾಧನೆಸುತ್ತೂರುನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಅರ್ಜುನ ಆನೆಯ ಪುಣ್ಯಾರಾಧನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸುತ್ತೂರು
ನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಅರ್ಜುನ ಆನೆಯ ಪುಣ್ಯಾರಾಧನೆ ನೆರವೇರಿಸಿದರು.ವಿಶ್ವ ವಿಖ್ಯಾಸ ದಸರಾ ಕಾರ್ಯಕ್ರಮದಲ್ಲಿ ಹಿಂದಿನ ಕಾಲದ ಮಹಾರಾಜರ ವೈಭವವನ್ನು ಲಕ್ಷಾಂತರ ಜನರ ಮನಸ್ಸು ಸಂತೋಷಪಡಿಸುತ್ತಿದ್ದ. ಅರ್ಜುನ. ಪ್ರಮುಖವಾಗಿ ಚಿನ್ನದ ಅಂಬಾರಿಯನ್ನು ಪ್ರತಿ ವರ್ಷ ಹೊರುತ್ತಿದ್ದ ಎಂದು ಗುಣಗಾನ ಮಾಡಲಾಯಿತು. ಶ್ರೀ ವಾಲ್ಮೀಕಿ ಯುವ ನಾಯಕ ಸಂಘದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನಾಯಕ ಜನಾಂಗದ ಮುಖಂಡರಾದ ರಂಗಸ್ವಾಮಿ ಅವರು, ಪ್ರಸಾದಕ್ಕೆ ಚಾಲನೆ ನೀಡಿದರು. ವಾಲ್ಮೀಕಿ ಸಂಘದ ಯುವಕ ಅಧ್ಯಕ್ಷರು. ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಸಾದ ವಿತರಿಸಿದರು.