ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 306 ಕೋಚ್‌ ನಿರ್ಮಾಣಕ್ಕೆ ₹ 2135 ಕೋಟಿ ಒದಗಿಸಲು ನಿರ್ಧಾರ

| Published : Nov 29 2024, 01:02 AM IST / Updated: Nov 29 2024, 06:58 AM IST

Train

ಸಾರಾಂಶ

ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 306 ರೈಲ್ವೆ ಕೋಚ್ ನಿರ್ಮಾಣ ಮಾಡಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಸಂಸ್ಥೆಗೆ 2,135 ಕೋಟಿ ರು. ಒದಗಿಸಲು ಸಚಿವ ಸಂಪುಟ ನಿರ್ಧಾರ ಮಾಡಿದೆ.

 ಬೆಂಗಳೂರು : ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 306 ರೈಲ್ವೆ ಕೋಚ್ ನಿರ್ಮಾಣ ಮಾಡಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಸಂಸ್ಥೆಗೆ 2,135 ಕೋಟಿ ರು. ಒದಗಿಸಲು ಸಚಿವ ಸಂಪುಟ ನಿರ್ಧಾರ ಮಾಡಿದೆ.

ಉಪ ನಗರ ರೈಲು ಯೋಜನೆಯ ಎರಡನೇ ಕಾರಿಡಾರ್‌ ಅನ್ನು 2026ರ ಡಿಸೆಂಬರ್‌ ಹಾಗೂ 4ನೇ ಕಾರಿಡಾರ್‌ಅನ್ನು 2027ರ ಡಿಸೆಂಬರ್‌ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ರೈಲ್ವೆ ಕೋಚ್‌ಗಳ ನಿರ್ಮಾಣಕ್ಕೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಕಂಪೆನಿಗಳು ಭಾಗವಹಿಸಿಲ್ಲ. ಹೀಗಾಗಿ 4,300 ಕೋಟಿ ರು. ವೆಚ್ಚದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ.50 ರಷ್ಟು ಅನುಪಾತದಲ್ಲಿ ಅನುದಾನ ಭರಿಸಿ ಕೆ-ರೈಡ್‌ ಮೂಲಕವೇ ಕೋಚ್‌ಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರಡಿ ಮುಂದಿನ ಐದು ವರ್ಷಗಳಲ್ಲಿ 406 ಕೋಚ್‌ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 2,135 ಕೋಟಿ ರು.ಗಳನ್ನು ರೈಲು ಮೂಲಸೌಕರ್ಯ ಅಭಿವೃದ್ದಿ ನಿಗಮಕ್ಕೆ ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.