ಸಾರಾಂಶ
ಮುಂದಿನ 5 ವರ್ಷಗಳಲ್ಲಿ ರೈಲುಗಳ ಸಂಖ್ಯೆಯನ್ನು 3 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೀಗಾಗಿ 2027ರ ಹೊತ್ತಿಗೆ ಬುಕ್ ಮಾಡಿದ ಎಲ್ಲರಿಗೂ ಕನ್ಫರ್ಮ್ ಟಿಕೆಟ್ ದೊರೆಯುತ್ತದೆ ಎನ್ನಲಾಗಿದೆ.
ಮುಂದಿನ 5 ವರ್ಷದಲ್ಲಿ 3 ಸಾವಿರ ರೈಲುಗಳ ಹೆಚ್ಚಳ
ಪ್ರತಿ ವರ್ಷ 5 ಸಾವಿರ ಕಿ.ಮೀ. ಹಳಿ ಅಳವಡಿಕೆಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಹಲವು ಕ್ರಮ
ವಿಸ್ತರಣಾ ಯೋಜನೆಯ ಮಾಹಿತಿ ನೀಡಿದ ವೈಷ್ಣವ್‌ನವದೆಹಲಿ: ರೈಲು ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುಲಲಿತ ಸಂಚಾರವನ್ನು ಒದಗಿಸುವುದಕ್ಕಾಗಿ ರೈಲ್ವೆ ವ್ಯವಸ್ಥೆಯನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ರೈಲುಗಳ ಸಂಖ್ಯೆಯನ್ನು 3 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೀಗಾಗಿ 2027ರ ಹೊತ್ತಿಗೆ ಬುಕ್ ಮಾಡಿದ ಎಲ್ಲರಿಗೂ ಕನ್ಫರ್ಮ್ ಟಿಕೆಟ್ ದೊರೆಯುತ್ತದೆ ಎನ್ನಲಾಗಿದೆ. ಈ ಕುರಿತಾಗಿ ಸುದ್ದಿಗಾರರ ಜೊತೆ ಮಾತನಾಡಿದ ವೈಷ್ಣವ್, ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯವನ್ನು 1 ಸಾವಿರ ಕೋಟಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.ಪ್ರಸ್ತುತ ವಾರ್ಷಿಕ 800 ಕೋಟಿ ಪ್ರಯಾಣಿಕರು ರೈಲು ಸೇವೆ ಪಡೆದುಕೊಳ್ಳುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಾಮರ್ಥ್ಯವನ್ನು 1 ಸಾವಿರ ಕೋಟಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರೈಲು ಹಾಗೂ ಟ್ರಿಪ್‌ಗಳನ್ನು ಹೆಚ್ಚಳ ಮಾಡಲಾಗುತ್ತದೆ. ಅಲ್ಲದೇ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ. ದೂರದ ಪ್ರಯಾಣಗಳಲ್ಲಿ ಕನಿಷ್ಠ 20 ನಿಮಿಷ ಉಳಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಭಾರತದಲ್ಲಿ 69 ಸಾವಿರ ಬೋಗಿಗಳನ್ನು ತಯಾರು ಮಾಡಲಾಗುತ್ತಿದೆ. ಹೊಸ ಯೋಜನೆಯ ಪ್ರಕಾರ ವಂದೇಭಾರತ್ ರೈಲುಗಳನ್ನು ಹೊರತುಪಡಿಸಿ 200ರಿಂದ 250 ಹೆಚ್ಚುವರಿ ರೈಲುಗಳನ್ನು ತಯಾರು ಮಾಡಲಾಗುತ್ತದೆ. ಅಲ್ಲದೇ 400ರಿಂದ 450 ವಂದೇಭಾರತ್ ರೈಲುಗಳನ್ನು ತಯಾರು ಮಾಡಲಾಗುತ್ತದೆ.ಪ್ರಸ್ತುತ ದೇಶದಲ್ಲಿ 10,748 ರೈಲುಗಳು ಪ್ರತಿನಿತ್ಯ ಓಡಾಡುತ್ತಿದ್ದು, ಇದನ್ನು ಪ್ರತಿನಿತ್ಯ 13 ಸಾವಿರಕ್ಕೇರಿಸಲು ರೈಲ್ವೆ ನಿರ್ಧರಿಸಿದೆ. ಇದು ಸಕಾರಗೊಂಡ ಬಳಿಕ ಅಂದರೆ 2027ರ ಬಳಿಕ ಎಲ್ಲರಿಗೂ ಕನ್ಫರ್ಮ್ ಟಿಕೆಟ್ ದೊರೆಯುವಂತಾಗುತ್ತದೆ. ಅಲ್ಲದೇ ಪ್ರತಿ ವರ್ಷ 4ರಿಂದ 5 ಸಾವಿರ ಕಿ.ಮೀ. ಹಳಿ ನಿರ್ಮಾಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.