ಸಂಭ್ರಮದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ

| Published : Dec 13 2023, 01:00 AM IST

ಸಂಭ್ರಮದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ಉತ್ಸವ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಪಟ್ಟಣದ ಪಶ್ಚಿಮವಾಹಿನಿಯ ಬಳಿಯ ಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ರಾತ್ರಿಯಿಡೀ ಗ್ರಾಮದ ಬೀದಿಗಳಲ್ಲಿ ಉತ್ಸವ, ಮೆರವಣಿಗೆ ಜರುಗಿತು. ಉತ್ಸವ ನಡೆವ ದಾರಿಯುದ್ದಕ್ಕೂ ಭಕ್ತರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಮುಂಜಾನೆ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಉತ್ಸವಕ್ಕೆ ಅರ್ಚಕ ನಾರಾಯಣ ಅಗ್ರ ಪೂಜೆ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ಉತ್ಸವ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಪಟ್ಟಣದ ಪಶ್ಚಿಮವಾಹಿನಿಯ ಬಳಿಯ ಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳ ವಾದ್ಯ ಸಮೇತ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

ರಾತ್ರಿಯಿಡೀ ಗ್ರಾಮದ ಬೀದಿಗಳಲ್ಲಿ ಉತ್ಸವ, ಮೆರವಣಿಗೆ ಜರುಗಿತು. ಉತ್ಸವ ನಡೆವ ದಾರಿಯುದ್ದಕ್ಕೂ ಭಕ್ತರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಮುಂಜಾನೆ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಉತ್ಸವಕ್ಕೆ ಅರ್ಚಕ ನಾರಾಯಣ ಅಗ್ರ ಪೂಜೆ ಸಲ್ಲಿಸಿದರು.

ನಂತರ ದೇಗುಲದ ಮುಂದೆ ಸಿದ್ದಪಡಿಸಿದ್ದ ಬೆಂಕಿ ಕೊಂಡವನ್ನು ದೇವರ ಗುಡ್ಡಪ್ಪ ಸೇರಿದಂತೆ ಹರಕೆ ಹೊತ್ತ ಭಕ್ತರು ಕೊಂಡಹಾಯ್ದರು. ನೆರೆದಿದ್ದ ಭಕ್ತ ಸಮೂಹ ಉಘೇ ಶಂಭುಲಿಂಗಪ್ಪ ಎಂಬ ಘೋಷಣೆ ಕೂಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಪಾಲಹಳ್ಳಿಯಲ್ಲಿ ಸವರ್ಣೀಯರು ಹೆಚ್ಚಾಗಿದ್ದು, ಶ್ರೀ ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತ ಜನಾಂಗದ ವ್ಯಕ್ತಿ ಪ್ರಧಾನ ಅರ್ಚಕರಾಗಿ ಪೂಜೆ ಸಲ್ಲಿಸುವುದು ಈ ಗ್ರಾಮದಲ್ಲಿ ವಿಶೇಷ.