ಅತಿಗಣ್ಯರಿಗೆ ಭದ್ರತೆ ನೀಡುವಎಸ್‌ಪಿಜಿ ಮುಖ್ಯಸ್ಥರಾಗಿಅಲೋಕ್‌ ಶರ್ಮಾ ನೇಮಕ

| Published : Nov 18 2023, 01:00 AM IST

ಅತಿಗಣ್ಯರಿಗೆ ಭದ್ರತೆ ನೀಡುವಎಸ್‌ಪಿಜಿ ಮುಖ್ಯಸ್ಥರಾಗಿಅಲೋಕ್‌ ಶರ್ಮಾ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಸೇರಿದಂತೆ ಅತಿ ಗಣ್ಯರಿಗೆ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಶರ್ಮಾ ಅವರನ್ನು ನೇಮಿಸಲಾಗಿದೆ.

ನವದೆಹಲಿ: ಪ್ರಧಾನಿ ಸೇರಿದಂತೆ ಅತಿ ಗಣ್ಯರಿಗೆ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಶರ್ಮಾ ಅವರನ್ನು ನೇಮಿಸಲಾಗಿದೆ. ಹಿಂದಿನ ಮುಖ್ಯಸ್ಥ ಅರುಣ್‌ ಕುಮಾರ್‌ ಸಿನ್ಹಾ (61) ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಸೆ.6ರಿಂದ ಖಾಲಿಯಿದ್ದ ಸ್ಥಾನಕ್ಕೆ ಪ್ರಸ್ತುತ ಪ್ರಧಾನಮಂತ್ರಿಗಳ ವಿಶೇಷ ಭದ್ರತಾ ಪಡೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲೋಕ್‌ ಶರ್ಮಾ ಅವರಿಗೆ ಮುಂಬಡ್ತಿ ನೀಡಿ ಸಂಪುಟದ ನೇಮಕಾತಿ ಸಮಿತಿ ಶುಕ್ರವಾರ ಆದೇಶ ಹೊರಡಿಸಿದೆ.