ಸಾರಾಂಶ
ಅಮೆರಿಕ ಅಧ್ಯಕ್ಷ ಬೈಡೆನ್, ‘ಇಸ್ರೇಲ್ ನಾಗರಿಕರ ಪ್ರಾಣ ರಕ್ಷಿಸಲು ಆದ್ಯತೆ ನೀಡುವ ಜೊತೆಗೆ ಹಮಾಸ್ ನಾಯಕರನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲು ಯೋಜನೆ ರೂಪಿಸಬೇಕು’ ಎಂದು ತಿಳಿಸಿದ್ದಾರೆ.
ನಾಗರಿಕರನ್ನು ಕೊಲ್ಲುತ್ತಿರುವುದರ ಕುರಿತು ಆಕ್ಷೇಪ
ಗಾಜಾ಼: ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ಮಾಡುತ್ತಿರುವ ಅನಿಯಂತ್ರಿತ ದಾಳಿಯನ್ನು ನಿಲ್ಲಿಸುವಂತೆ ಅಮೆರಿಕ ಕರೆ ನೀಡಿದೆ.ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವುದರಿಂದ ಅಂತಾರಾಷ್ಟ್ರೀಯ ಸಮುದಾಯದಿಂದ ಇಸ್ರೇಲ್ ತೀವ್ರ ಆಕ್ಷೇಪವನ್ನು ಎದುರಿಸುತ್ತಿದ್ದು, ಇದರಿಂದ ಪಾರಾಗಲು ಯುದ್ಧ ನಿಲ್ಲಿಸುವಂತೆ ಅಮೆರಿಕ ಸೂಚಿಸಿದೆ. ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಯುದ್ಧದಲ್ಲಿ ಇಲ್ಲಿಯವರೆಗೆ 18,400 ಜನರನ್ನು ಕಳೆದುಕೊಂಡಿದೆ. ಹಾಗೆಯೇ ಇಸ್ರೇಲ್ ಕೂಡ 1200 ನಾಗರಿಕರ ಜೊತೆಗೆ 113 ಸೈನಿಕರನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬೈಡೆನ್, ‘ಇಸ್ರೇಲ್ ನಾಗರಿಕರ ಪ್ರಾಣ ರಕ್ಷಿಸಲು ಆದ್ಯತೆ ನೀಡುವ ಜೊತೆಗೆ ಹಮಾಸ್ ನಾಯಕರನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲು ಯೋಜನೆ ರೂಪಿಸಬೇಕು’ ಎಂದು ತಿಳಿಸಿದ್ದಾರೆ.