ಸಾರಾಂಶ
ಕ್ಷಣ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಡೆದ ಜಾಥಾದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜನರಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗಪತ್ತೆ ಕಾನೂನುಬಾಹಿರ. ಇಂತಹ ಚಟುವಟಿಗಳ ನಿಗ್ರಹಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳ ಜಾಥಾಗೆ ಚಾಲನೆ ನೀಡಿದ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾ ರಾಜೇಶ್ ಮಾತನಾಡಿ, ಪ್ರಪಂಚದ ಅತ್ಯಂತ ಶ್ರೇಷ್ಠ ಜೀವಿ ಹೆಣ್ಣು. ಈಕೆಯನ್ನು ಮಡದಿಯಾಗಿ, ಸಹೋದರಿಯಾಗಿ ಸ್ವೀಕರಿಸುವ ಸಮಾಜ ಹೆಣ್ಣು ಮಗಳಾಗಿ ಒಪ್ಪಿಕೊಳ್ಳದಿರುವುದು ಮನುಕುಲಕ್ಕೆ ಅವಮಾನಕರವಾಗಿದೆ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ವಿರುದ್ಧ ಸಮುದಾಯಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಮಾಲಗಾರನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ಹೆಣ್ಣುಭೂಣ ಹತ್ಯೆ ಹಾಗೂ ಲಿಂಗ ಪತ್ತೆ ಪಿಡುಗಿನ ವಿರುದ್ಧ ಮಂಗಳವಾರ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು.ಶಿಕ್ಷಣ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಡೆದ ಜಾಥಾದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜನರಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗಪತ್ತೆ ಕಾನೂನುಬಾಹಿರ. ಇಂತಹ ಚಟುವಟಿಗಳ ನಿಗ್ರಹಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಜಾಥಾಗೆ ಚಾಲನೆ ನೀಡಿದ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾ ರಾಜೇಶ್ ಮಾತನಾಡಿ, ಪ್ರಪಂಚದ ಅತ್ಯಂತ ಶ್ರೇಷ್ಠ ಜೀವಿ ಹೆಣ್ಣು. ಈಕೆಯನ್ನು ಮಡದಿಯಾಗಿ, ಸಹೋದರಿಯಾಗಿ ಸ್ವೀಕರಿಸುವ ಸಮಾಜ ಹೆಣ್ಣು ಮಗಳಾಗಿ ಒಪ್ಪಿಕೊಳ್ಳದಿರುವುದು ಮನುಕುಲಕ್ಕೆ ಅವಮಾನಕರವಾಗಿದೆ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ವಿರುದ್ಧ ಸಮುದಾಯಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.ಗ್ರಾಪಂ ಸದಸ್ಯರಾದ ಚೆನ್ನಪ್ಪ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ. ಉಪಾಧ್ಯಕ್ಷ ಸುರೇಶ ಮುಖ್ಯ ಶಿಕ್ಷಕ ಎಂ ಜೆ ಸೋಮಸುಂದರ ಸಹ ಶಿಕ್ಷಕರಾದ ಕೆ.ಲಲಿತಾ, ಎಚ್.ನಾಗರಾಜು. ವಿ.ಎಂ.ರಾಜೇಂದ್ರ. ಜಯರಾಮು ಗ್ರಾಮದ ಮುಖಂಡರಾದ ದೇವೇಗೌಡ, ಸುರೇಶ ಮತ್ತಿತರು ಭಾಗವಹಿಸಿದ್ದರು.