ಬಸವತತ್ವದ ಮೂಲ ದಾಸೋಹ ಪದ್ದತಿ: ತೋಂಟದಾರ್ಯ ಶ್ರೀ

| Published : Oct 10 2023, 01:01 AM IST

ಸಾರಾಂಶ

ಬಸವ ತತ್ವದಲ್ಲಿ ದಾಸೋಹ ಪದ್ಧತಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಗದಗಿನ ಶ್ರೀ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ.ತಪೋ ಕ್ಷೇತ್ರ ಕಗ್ಗೆರೆಯಲ್ಲಿ ದಾಸೋಹ ಕೈಂಕರ್ಯ ಸೇವಾ ಸಂಘ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಸವ ಪರಂಪರೆಯಲ್ಲಿ ದಾಸೋಹ ತತ್ವ ಮತ್ತು ವ್ಯವಸ್ಥೆ ಬಹು ಮುಖ್ಯವಾದ ಆಚರಣೆ ಆಗಿದೆ.
ಕುಣಿಗಲ್:ಬಸವ ತತ್ವದಲ್ಲಿ ದಾಸೋಹ ಪದ್ಧತಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಗದಗಿನ ಶ್ರೀ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ.ತಪೋ ಕ್ಷೇತ್ರ ಕಗ್ಗೆರೆಯಲ್ಲಿ ದಾಸೋಹ ಕೈಂಕರ್ಯ ಸೇವಾ ಸಂಘ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಸವ ಪರಂಪರೆಯಲ್ಲಿ ದಾಸೋಹ ತತ್ವ ಮತ್ತು ವ್ಯವಸ್ಥೆ ಬಹು ಮುಖ್ಯವಾದ ಆಚರಣೆ ಆಗಿದೆ. ಭಕ್ತರಿಂದ ಭಕ್ತರಿಗೋಸ್ಕರ ಭಕ್ತರು ನಡೆಸುತ್ತಿರುವ ವಿಶೇಷ ಪದ್ಧತಿಯು ರಾಜ್ಯದಲ್ಲಿಯೇ ಮೊದಲಾಗಿದೆ ಎಂದರು.ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಭಕ್ತರು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ದಾನಿಗಳಾದ ಪಕೀರಪ್ಪ ಪಟ್ಟಣಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಕಾರ್ಯಾಧ್ಯಕ್ಷ ಸುಭಾಷ್ ಇಂಗಳೇಶ್ವರ. ಉಮಾ ಮಹೇಶ್ವರ್, ಯುಸಿ ಸಿದ್ದಲಿಂಗೇಶ್ವರ, ಅತ್ತಿಗೋಡು ನಾಗರಾಜು, ನಿಟ್ಟೂರ್ ಪ್ರಕಾಶ್ ನಿರಂಜನ್ ಬುಳ್ಳ ಹಾಗೂ ಸಂಘದ ಸದಸ್ಯರಿದ್ದರು. ಫೋಟೋ ಇದೆ: 9ಕೆಜಿಎಲ್‌1 ತಪೋ ಕ್ಷೇತ್ರ ಕಗ್ಗೆರೆಯಲ್ಲಿ ನಡೆದ ದಾಸೋಹ ಕೈಕರಿಯ ಸೇವಾ ಸಂಘದ ಮಹಾಸಭೆ