ಯುದ್ಧ ಟ್ಯಾಂಕ್‌ ಸಂವನಕ್ಕೆ ಡಿಜಿಟಲ್‌ ಸ್ವರೂಪ ಕೊಟ್ಟು ಸೈನ್ಯಕ್ಕೆ ನೆರವಾಗುತ್ತಿರುವುದು ‘ಕಾಗ್‌ನಿಟ್‌’

| N/A | Published : Feb 15 2025, 02:16 AM IST / Updated: Feb 15 2025, 04:39 AM IST

ಯುದ್ಧ ಟ್ಯಾಂಕ್‌ ಸಂವನಕ್ಕೆ ಡಿಜಿಟಲ್‌ ಸ್ವರೂಪ ಕೊಟ್ಟು ಸೈನ್ಯಕ್ಕೆ ನೆರವಾಗುತ್ತಿರುವುದು ‘ಕಾಗ್‌ನಿಟ್‌’
Share this Article
  • FB
  • TW
  • Linkdin
  • Email

ಸಾರಾಂಶ

 ನಮ್ಮ ಟ್ಯಾಂಕರ್‌ ಎಲ್ಲಿದೆ  ಯಾವ ದಿಕ್ಕಿನಲ್ಲಿ ಸಾಗಿ ದಾಳಿ ನಡೆಸಬೇಕು ಎಂಬ ಮಾಹಿತಿ ವಿನಿಯಮ ವ್ಯವಸ್ಥೆ ನಮ್ಮಲ್ಲಿನ್ನೂ ಡಿಜಿಟಲೀಕರಣಕ್ಕೆ ಒಳಪಟ್ಟಿಲ್ಲ. ಇದನ್ನೀಗ ಕಾರ್ಯರೂಪಕ್ಕೆ ತಂದು ಸೈನ್ಯಕ್ಕೆ ನೆರವಾಗುತ್ತಿರುವುದು ಬೆಂಗಳೂರು ಮೂಲದ ‘ಕಾಗ್‌ನಿಟ್‌’ ಸಂಸ್ಥೆ.

 ಬೆಂಗಳೂರು : ಯುದ್ಧದ ಸಂದರ್ಭದಲ್ಲಿ ನಮ್ಮ ಟ್ಯಾಂಕರ್‌ ಎಲ್ಲಿದೆ, ಯಾವ ಪರಿಸ್ಥಿತಿಯಲ್ಲಿದೆ ಶತ್ರು ಪಾಳಯ ಎಲ್ಲಿದೆ ಹಾಗೂ ಯಾವ ದಿಕ್ಕಿನಲ್ಲಿ ಸಾಗಿ ದಾಳಿ ನಡೆಸಬೇಕು ಎಂಬ ಮಾಹಿತಿ ವಿನಿಯಮ ವ್ಯವಸ್ಥೆ ನಮ್ಮಲ್ಲಿನ್ನೂ ಡಿಜಿಟಲೀಕರಣಕ್ಕೆ ಒಳಪಟ್ಟಿಲ್ಲ. ಇದನ್ನೀಗ ಕಾರ್ಯರೂಪಕ್ಕೆ ತಂದು ಸೈನ್ಯಕ್ಕೆ ನೆರವಾಗುತ್ತಿರುವುದು ಬೆಂಗಳೂರು ಮೂಲದ ‘ಕಾಗ್‌ನಿಟ್‌’ ಸಂಸ್ಥೆ.

ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಉಲ್ಲಾಸ್ ಸತ್ಯನಾರಾಯಣ, ಭಾರತೀಯ ಸೈನ್ಯದಲ್ಲಿರುವ ಟಿ-19, ಟಿ-17 ಸೇರಿ ಇತರೆ ಟ್ಯಾಂಕರ್‌ಗಳು ಸದ್ಯ ತಮ್ಮ ನಡುವಿನ ಸಂವನಹಕ್ಕಾಗಿ ರೇಡಿಯೋ ಫ್ರಿಕ್ವೆನ್ಸಿ ಆಧಾರಿತ ದೂರವಾಣಿ ವ್ಯವಸ್ಥೆ ಹೊಂದಿವೆ. ಕರೆ ಮಾಡಿಕೊಂಡು ಪರಸ್ಪರರ ಇರುವಿಕೆ ಸ್ಥಳ, ಸಾಗಬೇಕಾದ ಹಾದಿಯನ್ನು ಖಾತ್ರಿಪಡಿಸಿಕೊಂಡು ಮುನ್ನುಗ್ಗಬೇಕಾಗಿದೆ. ಇದರ ಬದಲಾಗಿ ರಿಯಲ್‌ ಟೈಮ್‌ನಲ್ಲಿ ಒಂದು ಯುನಿಟ್‌ನ ಎಲ್ಲ ಟ್ಯಾಂಕರ್‌ಗಳು ತಮ್ಮ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವ ಸಲುವಾಗಿ ಕಾಗ್‌ನಿಟ್‌ ‘ಎಐ ಡ್ರೈವನ್‌ ಐಎಸ್‌ಆರ್‌ ’ ಎಂಬ ಉಪಕರಣ ಶೋಧಿಸಿದೆ ಎಂದರು.

ಈ ಉಪಕರಣ ಮೂರು ಮುಖ್ಯ ಭಾಗ ಹೊಂದಿದೆ. ಟ್ಯಾಂಕರ್‌ನ ಒಳಗಿರುವ ಟ್ಯಾಬ್‌ನಲ್ಲಿ ಇತರೆ ಟ್ಯಾಂಕರ್‌ಗಳು ಎಲ್ಲಿರುತ್ತವೆ ಎಂಬುದು ಕಾಣಲಿವೆ. ಸಾಫ್ಟ್‌ವೇರ್‌ ಡಿಫೈನ್‌ ರೇಡಿಯೋ ಹಾಗೂ ಐಎನ್‌ಎಸ್‌ (ಇನಿಶಿಯಲ್‌ ನ್ಯಾವಿಗೇಶನ್‌ ಸಿಸ್ಟಂ) ಇವು ಟ್ಯಾಂಕರ್‌ನ ಒಳಗಡೆ ಅಳವಡಿಕೆ ಆಗಲಿವೆ. ಈ ಉಪಕರಣಗಳು ಜಿಪಿಎಸ್‌ ಹೊರತುಪಿಡಿಸಿ ನೆಟ್‌ವರ್ಕ್‌ ರೂಪಿಸಿಕೊಡುತ್ತವೆ. ಇದರಿಂದ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಐಎನ್‌ಎಸ್‌ 10ಮೀ ನಿಖರತೆಯ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಇರುವ ಸ್ಥಳವನ್ನು ತಿಳಿಸುತ್ತದೆ. ಟ್ಯಾಂಕರ್‌ ಚಾಲಕರು ಈ ನಕ್ಷೆ ಬಳಸಿ ತಾವು ಸಾಗಬೇಕಾದ ದಾರಿಯನ್ನು ರೂಪಿಸಿಕೊಂಡು ಇತರೆ ಟ್ಯಾಂಕರ್‌ಗಳಿಗೆ ಮಾಹಿತಿ ರವಾನಿಸಬಹುದು ಎಂದು ತಿಳಿಸಿದರು.

50 ಕಿ.ಮೀ ವ್ಯಾಪ್ತಿಯಲ್ಲಿ ಇದು ಸಂವಹನ ಸಾಧ್ಯವಾಗಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಅಹ್ಮದ್‌ನಗರದಲ್ಲಿ ಇದರ ಪ್ರಾಯೋಗಿಕ ತಪಾಸಣೆ ನಡೆದಿದ್ದು, ಫೆಬ್ರವರಿ ವೇಳೆಗೆ ಇದು ಪೂರ್ಣಗೊಳ್ಳಲಿದ್ದು, ಕಂಪನಿ ಸೇನೆಯಿಂದ ಈ ಉಪಕರಣದ ಬೇಡಿಕೆಯನ್ನು ಪೂರೈಸಲಿದೆ. ಭವಿಷ್ಯದಲ್ಲಿ ಡ್ರೋನ್‌, ಸ್ಯಾಟಲೈಟ್‌, ಆರ್ಟಿಲ್ಲರಿಗಳ ನಡುವೆಯೂ ಇದನ್ನು ಅಳವಡಿಸಿ ಪರಸ್ಪರ ನಡುವೆ ಸಂವಹನ ಸಾದ್ಯವಾಗುವಂತೆ ಮಾಡಲಿದ್ದೇವೆ ಎಂದು ಉಲ್ಲಾಸ್‌ ತಿಳಿಸಿದರು.

2009ರಲ್ಲಿ ಕಂಪನಿ ಆರಂಭವಾಗಿದ್ದು, 2017ರಿಂದ ರಕ್ಷಣಾ ಕ್ಷೇತ್ರದ ಉಪಕರಣಗಳನ್ನು ತಯಾರಿಸಿದ್ದೇವೆ. ಮುಖ್ಯವಾಗಿ ನಾವು ಗಡಿಯಲ್ಲಿ ಚೀನಾದ ಭಾಷೆ ತರ್ಜುಮೆ ಅನುಕೂಲವಾಗುವ ‘ಮ್ಯಾಂಡರಿಂಗ್‌ ಸಿಸ್ಟಂ’ ರೂಪಿಸಿದ್ದು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಲು ಸಾಧ್ಯವಾಗುವಂತೆ ಮಾಡಿದ್ದೇವೆ ಎಂದರು.