ಮೌಲ್ಯಯುತ ನವೋದ್ಯಮಗಳಿಗೆ ಬೆಂಗಳೂರೇ ತವರು

| Published : Dec 01 2023, 12:45 AM IST

ಸಾರಾಂಶ

ಭಾರತದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ನವೋದ್ಯಮಗಳ ಪೈಕಿ ಹೆಚ್ಚಿನವು ಬೆಂಗಳೂರಿನಲ್ಲೇ ಸ್ಥಾಪಿತವಾಗಿದೆ ಎಂದು ಹರೂನ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಐಟಿ ರಾಜಧಾನಿಯಲ್ಲಿ 129 ನವೋದ್ಯಮಗಳ ಸ್ಥಾಪನೆ

ವಹಿವಾಟಿನಲ್ಲಿ ಡಿ-ಮಾರ್ಟ್‌ ರೀಟೈಲ್‌ಗೆ ಮೊದಲ ಸ್ಥಾನಜೆಪ್ಟೊ ಸಂಸ್ಥೆಯ ಕೈವಲ್ಯ ವೋಹ್ರಾ ಅತಿ ಕಿರಿಯ ನವೋದ್ಯಮಿಮುಂಬೈ: ಭಾರತದಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ನವೋದ್ಯಮಗಳ ಪೈಕಿ ಹೆಚ್ಚಿನವು ಬೆಂಗಳೂರಿನಲ್ಲೇ ಸ್ಥಾಪಿತವಾಗಿದೆ ಎಂದು ಹರೂನ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.ವರದಿಯಲ್ಲಿ ಅಗ್ರ 200 ನವೋದ್ಯಮಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಬೆಂಗಳೂರು 129 ನವೋದ್ಯಮಗಳೊಂದಿಗೆ ಅಗ್ರಸ್ಥಾನದಲ್ಲಿದೆ. ರಾಧಾಕೃಷ್ಣನ್‌ ದಮಾನಿ ಅವರ ಅವೆನ್ಯೂ ಸೂಪರ್‌ಮಾರ್ಕೆಟ್‌ (ಡಿ-ಮಾರ್ಟ್‌ ಅಂಗಸಂಸ್ಥೆ) 2.38 ಲಕ್ಷ ಕೋಟಿ ರು. ವಹಿವಾಟಿನೊಂದಿಗೆ ಅಗ್ರಸ್ಥಾನದಲ್ಲಿದೆ. ಫ್ಲಿಪ್‌ಕಾರ್ಟ್‌, ಝೊಮ್ಯಾಟೋ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದರಲ್ಲಿ 20 ಮಹಿಳಾ ನವೋದ್ಯಮಿಗಳೂ ಸೇರಿದ್ದು, ಜೆಪ್ಟೊ ಸಂಸ್ಥೇ ಕೈವಲ್ಯ (21) ಅತಿ ಕಿರಿಯ ನವೋದ್ಯಮಿಯಾಗಿದ್ದಾರೆ.