ಮಧ್ಯಮ ವರ್ಗದ ಕುಟುಂಬದ ಕಣ್ಮಣಿ ಬ್ಲಾಕ್ + ಡೆಕ್ಕರ್ ಸುಪ್ರೀಂ ಸೀರೀಸ್

| N/A | Published : Oct 03 2025, 02:00 AM IST

ಮಧ್ಯಮ ವರ್ಗದ ಕುಟುಂಬದ ಕಣ್ಮಣಿ ಬ್ಲಾಕ್ + ಡೆಕ್ಕರ್ ಸುಪ್ರೀಂ ಸೀರೀಸ್
Share this Article
  • FB
  • TW
  • Linkdin
  • Email

ಸಾರಾಂಶ

ಬ್ಲಾಕ್ ಡೆಕ್ಕರ್ ಎಂಬ ಅಮೆರಿಕಾ ಮೂಲದ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಅತ್ಯುನ್ನತ ಫೀಚರ್ ಒದಗಿಸುವ ಟಿವಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಂದು ಬ್ಲಾಕ್ ಡೆಕ್ಕರ್ ಸುಪ್ರೀಂ ಸೀರೀಸ್ 55-ಇಂಚಿನ ಕ್ಯೂಎಲ್ಇಡಿ ಟಿವಿ. ₹44,999 ಆರಂಭಿಕ ಬೆಲೆ ಈ ಟಿವಿ ಕುರಿತ ವಿಮರ್ಶಾತ್ಮಕ ವಿವರ ಇಲ್ಲಿದೆ.

 ಜಗತ್ತು ಆಧುನಿಕಗೊಂಡಂತೆ ಎಲ್ಲಾ ಮನೆಗಳೂ ಆಧುನಿಕಗೊಂಡಿವೆ. ಮನೆಯ ಒಳಾಂಗಣ ಹೊಸತಾಗಿವೆ. ಅದಕ್ಕೆ ತಕ್ಕಂತೆ ಹೊಸ ರೀತಿಯ, ಆಕರ್ಷಕ ಟಿವಿಗಳು ಬಂದಿವೆ. ಸೊಗಸಾದ ಫೀಚರ್ ಗಳಿರುವ ಉತ್ತಮ ಟಿವಿಗಳ ಮೇಲೆಯೇ ಎಲ್ಲರೂ ಗಮನ ಹರಿಸುತ್ತಾರಾದರೂ ಬೆಲೆ ನೋಡಿ ಕೊಂಚ ಆಲೋಚಿಸುವಂತಹ ಸ್ಥಿತಿ ಇದೆ. ಆದರೆ ಇದೀಗ ಬ್ಲಾಕ್ + ಡೆಕ್ಕರ್ ಎಂಬ ಅಮೆರಿಕಾ ಮೂಲದ ಕಂಪನಿಯು ಭಾರತದಲ್ಲಿ ಇಂಡ್ಕಲ್ ಟೆಕ್ನಾಲಜೀಸ್ ಪಾಲುದಾರಿಕೆಯಲ್ಲಿ ಕಡಿಮೆ ಬೆಲೆಯಲ್ಲಿ ಅತ್ಯುನ್ನತ ಫೀಚರ್ ಗಳುಳ್ಳ ಟಿವಿಗಳನ್ನು ಒದಗಿಸುತ್ತಿದೆ. ಬ್ಲಾಕ್ + ಡೆಕ್ಕರ್ ಸಂಸ್ಥೆಯ ಅಂಥಾ ಒಂದು ಆಕರ್ಷಕ ಟಿವಿ ಬ್ಲಾಕ್ + ಡೆಕ್ಕರ್ ಸುಪ್ರೀಂ ಸೀರೀಸ್ 55-ಇಂಚಿನ ಕ್ಯೂಎಲ್ಇಡಿ ಟಿವಿ.

₹44,999 ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಬ್ಲಾಕ್ + ಡೆಕ್ಕರ್ ಸುಪ್ರೀಂ ಸೀರೀಸ್ 55-ಇಂಚಿನ ಕ್ಯೂಎಲ್ಇಡಿ ಟಿವಿ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡೇ ವಿನ್ಯಾಸಗೊಂಡಿದೆ. ಕಡಿಮೆ ಬೆಲೆಯಲ್ಲಿ ದೊಡ್ಡ ದೊಡ್ಡ ಬ್ರಾಂಡ್ ಗಳ ಟಿವಿಗಳಲ್ಲಿರುವ ವೈಶಿಷ್ಟ್ಯಗಳು ಇದರಲಿಲ್ಲಿವೆ. ಈ ಕುರಿತು ವಿವರವಾಗಿ ನೋಡೋಣ.ವಿನ್ಯಾಸ ಮತ್ತು ನಿರ್ಮಾಣಈ ಟಿವಿಯು ಫ್ರೇಮ್‌ಲೆಸ್ ಸ್ಲಿಮ್ ಮೆಟಲ್ ಡಿಸೈನ್ ಹೊಂದಿದ್ದು, ತಕ್ಷಣ ಗಮನ ಸೆಳೆಯುವಂತೆ ಮೂಡಿಬಂದಿದೆ. ಮೂರು ಬದಿಗಳ ತೆಳುವಾದ ಬೆಜೆಲ್‌ ಗಳು 55-ಇಂಚಿನ ಡಿಸ್‌ ಪ್ಲೇಯನ್ನು ಇನ್ನಷ್ಟು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಕಪ್ಪು ಫಿನಿಶ್‌ ನ ಡ್ಯುಯಲ್ ಮೆಟಲ್ ಸ್ಟ್ಯಾಂಡ್‌ ಗಳು ಆಧುನಿಕ ಮನೆಗಳ ಸೊಗಸಾದ ಕೊಠಡಿಗಳಿಗೆ ಸೂಕ್ತವಾಗಿ ಹೊಂದುಕೊಳ್ಳುತ್ತವೆ. 11.8 ಕೆಜಿಯ ತೂಕ ಹೊಂದಿರುವ ಈ ಟಿವಿಯನ್ನು ವಾಲ್-ಮೌಂಟ್ ಕೂಡ ಮಾಡಬಹುದು, ಸ್ಟಾಂಡ್ ಮೇಲೆ ಕೂಡ ನಿಲ್ಲಿಸಬಹುದು. 

ಹಿಂಭಾಗದ ಪ್ಯಾನೆಲ್‌ ನಲ್ಲಿ 3 ಎಚ್ ಡಿ ಎಂಐ 2.1 ಪೋರ್ಟ್‌ಗಳು ಲಭ್ಯವಿವೆ. ಜೊತೆಗೆ 2 ಯು ಎಸ್ ಬಿ ಪೋರ್ಟ್, ಈಥರ್‌ ನೆಟ್, ಆಪ್ಟಿಕಲ್ ಔಟ್‌ಪುಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜಾಕ್ ಲಭ್ಯ. ರಿಮೋಟ್ ಸುಂದರವಾಗಿದ್ದು, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಗೂಗಲ್ ಅಸಿಸ್ಟಂಟ್‌ ಗೆ ವಿಶೇಷ ಕೀಗಳನ್ನು ಹೊಂದಿದೆ. ಆದರೆ, ರಿಮೋಟ್‌ ಅನ್ನು ಪ್ಲಾಸ್ಟಿಕ್ ನಲ್ಲಿ ನಿರ್ಮಿಸಿದ್ದಾರೆ.ಸೊಗಸಾದ ಡಿಸ್‌ಪ್ಲೇವಿಷನ್ ಕ್ಯೂಎಲ್ಇಡಿ 4ಕೆ ಯು ಎಸ್ ಡಿ ಡಿಸ್‌ಪ್ಲೇ, ಕ್ವಾಂಟಮ್ ಶಾರ್ಪ್ ವಿಷನ್ ತಂತ್ರಜ್ಞಾನ ಹೊಂದಿರುವ ಈ ಟಿವಿ ಒಂದು ಬಿಲಿಯನ್ ಬಣ್ಣಗಳನ್ನು ಆಕರ್ಷಕವಾಗಿ ಕಾಣಿಸುತ್ತದೆ. ಡಾಲ್ಬಿ ವಿಷನ್ ಮತ್ತು ಎಚ್ ಡಿ ಆರ್10 ಸೌಲಭ್ಯವನ್ನು ಹೊಂದಿದ್ದು, ಬೆಳಕು ಜಾಸ್ತಿ ಇರುವ ಕೊಠಡಿಗಳಲ್ಲಿಯೂ ಸೊಗಸಾದ ದೃಶ್ಯ ವೈಭವ ಕಾಣುವಂತೆ ಮಾಡುತ್ತದೆ. ಎಐ-ಪಿಕ್ಯೂ ಆಗ್ಮೆಂಟೇಶನ್ ಇಂಜಿನ್ 1080ಪಿ ಯೂಟ್ಯೂಬ್ ವಿಡಿಯೋಗಳನ್ನು 4ಕೆ ಕ್ಲಾರಿಟಿಗೆ ಅಪ್‌ ಸ್ಕೇಲ್ ಮಾಡಿ ತೋರಿಸುತ್ತದೆ. ಹೀಗಾಗಿ ಅದ್ಭುತ ಡೀಟೇಲಿಂಗ್ ಇರುವ ವೀಡಿಯೋ ನೋಡಬಹುದು. 

ಇದರ ಎಐ ಸಾಮರ್ಥ್ಯ ದೃಶ್ಯವನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ನೆರವಾಗುತ್ತದೆ.ಅಪೂರ್ವ ಆಡಿಯೋ ವ್ಯವಸ್ಥೆ80ಡಬ್ಲ್ಯೂ ಡಾಲ್ಬಿ ಅಟ್ಮಾಸ್ ಆಡಿಯೋ, ಟ್ವಿನ್ ಆಂಪ್ಲಿಫೈಯರ್‌ ಗಳು, ಡ್ಯುಯಲ್ ವೂಫರ್‌ ಗಳು ಮತ್ತು ಟ್ವೀಟರ್‌ ಗಳು ಇದಕ್ಕೆ ಅದ್ಭುತ ಆಡಿಯೋ ವ್ಯವಸ್ಥೆ ಒದಗಿಸುತ್ತಿದ್ದು, ವೀಕ್ಷಕರಿಗೆ ಸಿನಿಮ್ಯಾಟಿಕ್ ಅನುಭವ ನೀಡುತ್ತದೆ. ನೀವು ಟಾಮ್ ಕ್ರೂಸ್ ಅವರ ಟಾಪ್ ಗನ್: ಮಾವೆರಿಕ್‌ ಸಿನಿಮಾ ನೋಡುತ್ತಿದ್ದರೆ ಅದರಲ್ಲಿ ಜೆಟ್ ಗಳು ಹಾರಾಡುವ ದೃಶ್ಯದ ಆಡಿಯೋ ಕೇಳುವುದೇ ಅದ್ಭುತವಾಗಿರುತ್ತದೆ. ಮಧ್ಯಮ ಗಾತ್ರದ ಕೊಠಡಿಯಲ್ಲಿ 80% ವಾಲ್ಯೂಮ್‌ ಇಟ್ಟರೆ ಧ್ವನಿ ಸೌಂಡ್‌ ಬಾರ್‌ ನ ಅಗತ್ಯವೇ ಇರುವುದಿಲ್ಲ. ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಫೀಚರ್ ಗಳುಎಐ-ಚಾಲಿತ ಟ್ವಿನ್ ಪ್ರೊಸೆಸರ್ (ಎ75 + ಎ55), 2ಜಿಬಿ ರ್‍ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಲಭ್ಯವಿದ್ದು, ಗೂಗಲ್ ಟಿವಿ ಆಂಡ್ರಾಯ್ಡ್ 14ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂದರೆ ನೆಟ್‌ಫ್ಲಿಕ್ಸ್, ಜಿಯೋ ಹಾಟ್ ಸ್ಟಾರ್ ಆಪ್‌ ಗಳು 2 ಸೆಕೆಂಡ್‌ನಲ್ಲಿ ತೆರೆದುಕೊಳ್ಳುತ್ತವೆ. 

ಗೂಗಲ್ ಕಾಸ್ಟ್ ಮತ್ತು ಪ್ಲೇ ಸ್ಟೋರ್ ನಲ್ಲಿ ಸಾವಿರಾರು ಆಪ್‌ಗಳು ದೊರೆಯುತ್ತದೆ ಆದರೆ ರ್‍ಯಾಮ್ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದಿತ್ತು.ಆಕರ್ಷಕ ಗೇಮಿಂಗ್120 ಹರ್ಟ್ಜ್ ವೇರಿಯಬಲ್ ರಿಫ್ರೆಶ್ ರೇಟ್ (ವಿ ಆರ್ ಆರ್), ಆಟೋ ಲೋ ಲೇಟೆನ್ಸಿ ಮೋಡ್ (ಎಎಲ್ಎಲ್ಎಂ) ಹೊಂದಿರುವ ಈ ಟಿವಿ ಗೇಮಿಂಗ್ ಗೆ ಸೂಕ್ತವಾಗಿದೆ. ಬಹಳ ವೇಗವಾಗಿ ಕಾರ್ಯ ನಿರ್ವಹಿಸಬಹುದಾಗಿದ್ದು, ಗೇಮಿಂಗ್ ನ ಸ್ಪೀಡ್ ಗೆ ಈ ಟಿವಿ ತನ್ನಿಂತಾನೇ ಹೊಂದಿಕೊಳ್ಳುತ್ತದೆ. ಹಾಗಾಗಿ ಗೇಮಿಂಗ್ ಆಸಕ್ತರು ಕೂಡ ಈ ಟಿವಿಯನ್ನು ಒಂದು ಕೈ ನೋಡಬಹುದು.ಪ್ಲಸ್ ಪಾಯಿಂಟ್ ಗಳುಅತ್ಯುತ್ತಮ ದೃಶ್ಯ ವೈಭವ ಮತ್ತು ಆಡಿಯೋ ವ್ಯವಸ್ಥೆಯನ್ನು ಒಳಗೊಂಡಿರುವ ಈ ಟಿವಿ ಕೇವಲ ₹44,999 ಆರಂಭಿಕ ಬೆಲೆಯಲ್ಲಿ ದೊರೆಯುತ್ತದೆ ಅನ್ನುವುದೇ ವಿಶೇಷ. ಯಾಕೆಂದರೆ ಇದೇ ಗಾತ್ರದ ಬೇರೆ ಕಂಪನಿಯ ಟಿವಿಗಳಿಗೆ ಜಾಸ್ತಿ ಬೆಲೆ ಇದೆ. ಇದು ಕಡಿಮೆ ಬೆಲೆಯಲ್ಲಿ ಕ್ಯೂಎಲ್ಇಡಿ ಡಿಸ್‌ಪ್ಲೇ, ಡಾಲ್ಬಿ ಅಟ್ಮಾಸ್ ಮತ್ತು ಗೇಮಿಂಗ್ ಫೀಚರ್ ಗಳನ್ನು ನೀಡುತ್ತದೆ. ಗೇಮರ್ ಸ್ನೇಹಿ ಆಗಿದೆ ಮತ್ತು ಗೂಗಲ್ ಟಿವಿ ಸೌಲಭ್ಯ ಇದರಲ್ಲಿ ಲಭ್ಯವಿದೆ.ಕೊನೆಯ ಮಾತುರ್‍ಯಾಮ್ ಸ್ವಲ್ಪ ಕಡಿಮೆಯಾಯಿತು ಅನ್ನುವುದರ ಹೊರತಾಗಿ ಇದರಲ್ಲಿ ಎಲ್ಲವೂ ಒಳ್ಳೆಯದೇ ಇದೆ. ಅಲ್ಲದೇ ಬ್ಲಾಕ್ + ಡೆಕ್ಕರ್ ಸುಪ್ರೀಂ ಸೀರೀಸ್ ಟಿವಿಗಳು ಕಡಿಮೆ ಬಜೆಟ್‌ ನಲ್ಲಿ ಪ್ರೀಮಿಯಂ ಗುಣಮಟ್ಟದ ಮನರಂಜನೆ ಒದಗಿಸುತ್ತದೆ. ಹಾಗಾಗಿ ಈಗಲೇ ನಿಮ್ಮ ಹತ್ತಿರದ ಮಳಿಗೆಗೆ ಭೇಟಿ ನೀಡಿ ಈ ಟಿವಿ ಕುರಿತು ವಿಚಾರಿಸಬಹುದು.

Read more Articles on