ಜ.22ರಂದು ಸಾರ್ವಜನಿಕರು ಅಯೋಧ್ಯೆಗೆ ಬರದಂತೆ ರಾಮ ಮಂದಿರ ಟ್ರಸ್ಟ್‌ ಮನವಿ

| Published : Dec 17 2023, 01:45 AM IST

ಜ.22ರಂದು ಸಾರ್ವಜನಿಕರು ಅಯೋಧ್ಯೆಗೆ ಬರದಂತೆ ರಾಮ ಮಂದಿರ ಟ್ರಸ್ಟ್‌ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಗೆ ಬರದೆ ಬದಲಾಗಿ ಚಿಕ್ಕ ದೇವಸ್ಥಾನವಾಗಿರಲಿ, ದೊಡ್ಡದಾಗಿರಲಿ ನಿಮಗೆ ಹತ್ತಿರವಿರುವ ಯಾವುದೇ ದೇವರ ದೇವಸ್ಥಾನದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿರಿ’ ಎಂದು ಚಂಪತ್‌ ರಾಯ್‌ ತಿಳಿಸಿದ್ದಾರೆ.

ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ವಿಗ್ರಹ, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಅಯೋಧ್ಯೆಗೆ ಬರಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಮಾರಂಭಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇದರಿಂದ ಏಕಾಏಕಿ ಜನದಟ್ಟಣೆ ಉಂಟಾಗಿ ಸಮಸ್ಯೆಗಳಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಅವರು ‘ಅಂದು ಅಯೋಧ್ಯೆಗೆ ಬರಬೇಡಿ. ಬದಲಾಗಿ ಚಿಕ್ಕ ದೇವಸ್ಥಾನವಾಗಿರಲಿ, ದೊಡ್ಡದಾಗಿರಲಿ ನಿಮಗೆ ಹತ್ತಿರವಿರುವ ಯಾವುದೇ ದೇವರ ದೇವಸ್ಥಾನದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿರಿ’ ಎಂದು ತಿಳಿಸಿದ್ದಾರೆ.