ಸಾರಾಂಶ
ಡಾ. ಪ್ರಕಾಶ್ ಟಿಎಂ
ಇಂದಿನ ಶೈಕ್ಷಣಿಕ ಮತ್ತು ಉದ್ಯೋಗ ವಿಭಾಗದಲ್ಲಿ ಭಾರಿ ಸ್ಪರ್ಧೆ ಇದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಪದವಿ ಕೋರ್ಸ್ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ. ಆಸಕ್ತಿಯ ಜೊತೆಗೆ ಉದ್ಯೋಗಾವಕಾಶ, ಉದ್ಯಮ ಟ್ರೆಂಡ್, ವೃತ್ತಿ ಬೆಳವಣಿಗೆಯಂತಹ ಅಂಶಗಳು ಮುಖ್ಯವಾಗಿವೆ. ಈ ಬರಹದಲ್ಲಿ 2025ರ ಟ್ರೆಂಡ್ ಗಳು, ವಿದ್ಯಾರ್ಥಿಗಳ ಆಯ್ಕೆಯ ಒಲವು ಮತ್ತು ಉದ್ಯೋಗಕ್ಕೆ ನೆರವಾಗುವ ಕೋರ್ಸ್‌ಗಳ ಕುರಿತು ತಿಳಿಯೋಣ.
ಜನಪ್ರಿಯ ಪದವಿ ಕೋರ್ಸ್‌ಗಳು
ಈಗ ಹೆಚ್ಚು ಜನಪ್ರಿಯವಾಗುತ್ತಿರುವ ಕೋರ್ಸ್‌ಗಳನ್ನು ಇಲ್ಲಿ ನೋಡೋಣ.•ಕಂಪ್ಯೂಟರ್ ಸೈನ್ಸ್ ಮತ್ತು ಐಟಿಆಟೋಮೇಷನ್, ಡಿಜಿಟಲೀಕರಣದಿಂದ ಕಂಪ್ಯೂಟರ್ ಸೈನ್ಸ್ (ಸಿಎಸ್), ಕೃತಕ ಬುದ್ಧಿಮತ್ತೆ (ಎಐ), ಮತ್ತು ಐಟಿ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. 2026ರ ವೇಳೆಗೆ ಭಾರತಕ್ಕೆ 10 ಲಕ್ಷ ಡೇಟಾ ಸೈನ್ಸ್ ತಜ್ಞರ ಅಗತ್ಯವಿದೆ ಎಂದು ಸಂಶೋಧನಾ ವರದಿಗಳು ಹೇಳುತ್ತವೆ. ಹಾಗಾಗಿ ಎಐ, ಬಿಎಸ್ಸಿ ಸಿಎಸ್ ಮತ್ತು ಬಿಸಿಎ ಕೋರ್ಸ್‌ಗಳು ಜನಪ್ರಿಯವಾಗಿವೆ.
•ಕಾಮರ್ಸ್ ಮತ್ತು ಬಿಸಿನೆಸ್ ಸ್ಟಡೀಸ್ ಬಿಕಾಂ, ಬಿಬಿಎ, ಬಿಬಿಎಂ ಕೋರ್ಸ್‌ಗಳು, ಅದರಲ್ಲೂ ವಿಶೇಷವಾಗಿ ಬಿಸಿನೆಸ್ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಫೈನಾನ್ಸ್ ಕೋರ್ಸುಗಳು ಜನಪ್ರಿಯವಾಗಿವೆ. ಶೇ.21ರಷ್ಟು ದಾಖಲಾತಿಗಳು ವಾಣಿಜ್ಯ ವಿಭಾಗದಲ್ಲಿ ಆಗುತ್ತಿವೆ.•ವಿನ್ಯಾಸ, ಮಾಧ್ಯಮ, ಸಂವಹನಬಹಳಷ್ಟು ವಿದ್ಯಾರ್ಥಿಗಳು ಮಾಧ್ಯಮ ಅಧ್ಯಯನ, ಗ್ರಾಫಿಕ್ ಡಿಸೈನ್, ಮಾಸ್ ಕಮ್ಯುನಿಕೇಷನ್ ವಿಭಾಗದ ಕಡೆ ಒಲವು ತೋರಿಸುತ್ತಿದ್ದಾರೆ. ಕಂಟೆಂಟ್ ಕ್ರಿಯೇಷನ್ ಅನ್ನು ಬಹಳ ಮಂದಿ ವೃತ್ತಿಯಾಗಿ ಸ್ವೀಕರಿಸುವ ಕಡೆಗೆ ಗಮನ ಹರಿಸುತ್ತಿದ್ದಾರೆ.•ಎಐ, ಡೇಟಾ ಸೈನ್ಸ್, ರೋಬೋಟಿಕ್ಸ್ರೋಬೋಟಿಕ್ಸ್, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್ ವಿಭಾಗಕ್ಕೂ ಪ್ರವೇಶ ಹೆಚ್ಚುತ್ತಿದೆ. ಡೇಟಾ ಅನಾಲಿಸ್ಟ್, ಮೆಷಿನ್ ಲರ್ನಿಂಗ್ ಎಂಜಿನಿಯರ್, ರೋಬೋಟಿಕ್ಸ್ ತಂತ್ರಜ್ಞ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ.
2025ರ ಶೈಕ್ಷಣಿಕ ಬದಲಾವಣೆಗಳು
2025ರಲ್ಲಿ ಪದವಿ ತರಗತಿ ಪ್ರವೇಶಾತಿಯಲ್ಲಿ ಹಲವಾರು ಗಮನಾರ್ಹ ಬದಲಾವಣೆಗಳು ಉಂಟಾಗಿವೆ. ಅವುಗಳನ್ನು ಈ ಕೆಳಗೆ ನೋಡೋಣ:• ಅಂತರ್ಶಿಸ್ತೀಯ ಕೋರ್ಸುಗಳಿಗೆ ಆದ್ಯತೆರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಬಿಸಿನೆಸ್- ಮನೋವಿಜ್ಞಾನ, ಡೇಟಾ ಸೈನ್ಸ್-ಅರ್ಥಶಾಸ್ತ್ರದಂತಹ ಅಂರ್ ಶಿಸ್ತೀಯ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ.• ಉದ್ಯಮ-ಸಂಯೋಜಿತ ಶಿಕ್ಷಣಪ್ರಾಯೋಗಿಕ ಅನುಭವ, ಇಂಟರ್ನ್‌ಶಿಪ್, ಕೌಶಲ್ಯ-ಕೇಂದ್ರಿತ ಕೋರ್ಸ್‌ಗಳಿಗೆ ಒಲವು ಹೆಚ್ಚಿದೆ.
ಉದ್ಯಮ ಸಂಪರ್ಕವಿರುವ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಹೆಚ್ಚಾಗಿದೆ.• ತಂತ್ರಜ್ಞಾನ ಆಧರಿತ ಕೋರ್ಸ್‌ಗಳುಬಿಎಸ್ಸಿ ಎಐ & ಎಂಎಲ್, ಬಿಟೆಕ್ ಸೈಬರ್ ಸೆಕ್ಯುರಿಟಿಯಂತಹ ತಂತ್ರಜ್ಞಾನ ಡಿಗ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.• ಆನ್‌ಲೈನ್, ಹೈಬ್ರಿಡ್ ಕಲಿಕೆಶೇ.45ರಷ್ಟು ವಿದ್ಯಾರ್ಥಿಗಳು ಖಾಸಗಿ ಮತ್ತು ಆನ್‌ಲೈನ್ ಕಲಿಕೆಯನ್ನು ಸಂಯೋಜಿಸುವ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಾರೆ.• ಜಾಗತಿಕ ದೃಷ್ಟಿಕೋನಅಂತರರಾಷ್ಟ್ರೀಯ ಸಂಪರ್ಕ, ವಿನಿಮಯ ಕಾರ್ಯಕ್ರಮಗಳು, ಡ್ಯುಯಲ್ ಡಿಗ್ರಿಗಳಿರುವ ವಿಶ್ವವಿದ್ಯಾಲಯಗಳ ಕಡೆಗೆ ವಿದ್ಯಾರ್ಥಿಗಳು ಒಲವು ತೋರಿಸುತ್ತಿದ್ದಾರೆ.
ಒಟ್ಟಾರೆಯಾಗಿ ಜಾಗತೀಕರಣ, ತಂತ್ರಜ್ಞಾನ, ವಿದ್ಯಾರ್ಥಿಗಳ ಗುರಿಗಳು ಪದವಿ ಶಿಕ್ಷಣ ಉದ್ಯಮವನ್ನು ಬದಲಾಯಿಸುತ್ತಿವೆ. ಡೇಟಾ ಸೈನ್ಸ್, ಸಾರ್ವಜನಿಕ ಆರೋಗ್ಯ, ವಿನ್ಯಾಸದಂತಹ ಕ್ಷೇತ್ರಗಳು ಬೆಳೆಯುತ್ತಿವೆ. ಬಿಸಿನೆಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಿಗೆ ಇನ್ನೂ ಜಾಸ್ತಿ ಬೇಡಿಕೆ ಇದೆ. ವಿದ್ಯಾರ್ಥಿಗಳು ಟ್ರೆಂಡ್ ಗಳನ್ನು ಅಧ್ಯಯನ ಮಾಡಿ, ಅಪಾಯಗಳನ್ನು ಮೌಲ್ಯಮಾಪನ ಮಾಡಿ ತಮ್ಮ ಗುರಿಗಳಿಗೆ ಪೂರಕವಾದ ಶೈಕ್ಷಣಿಕ ಮಾರ್ಗವನ್ನು ಆರಿಸುತ್ತಿದ್ದಾರೆ. ಉತ್ಸಾಹ, ಕೌಶಲ್ಯ, ಪ್ರಾಯೋಗಿಕ ಅನುಭವದಿಂದ ಉದ್ಯೋಗಕ್ಕೆ ಮತ್ತು ಭವಿಷ್ಯಕ್ಕೆ ಸಿದ್ಧರಾಗಬಹುದು ಎಂಬುದನ್ನು ಅರಿತಿದ್ದಾರೆ.