ಸಾರಾಂಶ
ಇಲ್ಲಿನ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ದೇವಾಲಯವಿತ್ತು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ನಡೆಸಿದ್ದ ಸಮೀಕ್ಷೆ ವರದಿ ಸಲ್ಲಿಸಲು ಮತ್ತೆ 10 ದಿನಗಳ ಕಾಲ ಅವಕಾಶ ನೀಡಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ವಾರಾಣಸಿ: ಇಲ್ಲಿನ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ದೇವಾಲಯವಿತ್ತು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ನಡೆಸಿದ್ದ ಸಮೀಕ್ಷೆ ವರದಿ ಸಲ್ಲಿಸಲು ಮತ್ತೆ 10 ದಿನಗಳ ಕಾಲ ಅವಕಾಶ ನೀಡಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾ। ಎ.ಕೆ.ವಿಶ್ವೇಶ್, ‘ಸಂಸ್ಥೆಯು ಸಮೀಕ್ಷೆ ಪೂರ್ಣಗೊಳಿಸಲು ಮತ್ತೆ 3 ವಾರಗಳ ಅವಕಾಶ ಕೇಳಿದ್ದು, ನಾವು 10 ದಿನಗಳ ಕಾಲ ಅವಕಾಶ ಕೊಡುತ್ತಿದ್ದೇವೆ. ಮುಂದಿನ ವಿಚಾರಣೆಯು ಡಿ.11ರಂದು ನಡೆಯಲಿದ್ದು, ಆ ದಿನದೊಳಗೆ ನ್ಯಾಯಾಲಯಕ್ಕೆ ಸಮೀಕ್ಷೆಯ ವರದಿ ಸಲ್ಲಿಸಬೇಕು’ ಎಂದು ಸೂಚಿಸಿ ಪ್ರಕರಣವನ್ನು ಮುಂದೂಡಿತು.