ಸಾರಾಂಶ
ಫೋಟೋ ಬಳಸಿ ಅಪಪ್ರಚಾರ- ಎಸ್ಎಫ್ಐ ದೂರು
ಕನ್ನಡಪ್ರಭ ವಾರ್ತೆ ಮೈಸೂರು
ಸಂಸತ್ ನಲ್ಲಿ ಹೊಗೆ ಬಾಂಬ್ ಸ್ಫೋಟ ಸಂಬಂಧ ತಮ್ಮ ಫೋಟೋವನ್ನು ಆರೋಪಿ ಫೋಟೋ ಎಂದು ಬಳಸಿ ಅಪಪ್ರಚಾರ ಮಾಡುತ್ತಿರುವ ವಿರುದ್ಧ ಎಸ್ಎಫ್ಐ ಜಿಲ್ಲಾಧ್ಯಕ್ಷ ಟಿ.ಎಸ್. ವಿಜಯ್ ಕುಮಾರ್ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.ಆರೋಪಿ ಮನೋರಂಜನ್ ಎಂಬಾತನನ್ನು ಎಸ್ಎಫ್ಐ ಜಿಲ್ಲಾಧ್ಯಕ್ಷ ಆದ ತಮ್ಮ ಹಳೆ ಪೋಟೋ ಬಳಸಿ, ಇವನೇ ಮನೋರಂಜನ್ ಎಂದು ಎಸ್ಎಫ್ಐ ಹಾಗೂ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಜರುಗಿಸುವಂತೆ ಒತ್ತಾಯಿಸಿ ವಿಜಯ್ ಕುಮಾರ್ ದೂರು ನೀಡಿದ್ದಾರೆ. ಈ ವೇಳೆ ಎಸ್ಎಫ್ಐ ಕಾರ್ಯದರ್ಶಿ ಅಭಿ, ವೀರಭದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಜಗದೀಶ್ ಸೂರ್ಯ, ಕೆ. ಬಸವರಾಜ್ ಇದ್ದರು.