ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಟ್‌

| Published : Nov 21 2023, 12:45 AM IST

ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಾಖಂಡದ ಸಿಲ್‌ಕ್ಯಾರಾ ಎಂಬಲ್ಲಿ ಸಂಭವಿಸಿದ ಸುರಂಗ ಭೂಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) 2 ರೋಬೋಟ್‌ಗಳನ್ನು ಸೋಮವಾರ ಕಳಿಸಿಕೊಟ್ಟಿದೆ.

ಭೂಮಿಗೆ ರಂಧ್ರ ಕೊರೆಯುವಾಗ ರೋಬೋಟ್‌ ಬಳಕೆಮಣ್ಣು, ಸುರಂಗದ ಸ್ಥಿತಿ ಬಗ್ಗೆ ರೋಬೋಟ್‌ ಮುನ್ಸೂಚನೆಕಾರ್ಮಿಕರು ಇರುವ ಸ್ಥಳವನ್ನೂ ರೋಬೋ ಪತ್ತೆ ಮಾಡಬಲ್ಲವುಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಸಿಲ್‌ಕ್ಯಾರಾ ಎಂಬಲ್ಲಿ ಸಂಭವಿಸಿದ ಸುರಂಗ ಭೂಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) 2 ರೋಬೋಟ್‌ಗಳನ್ನು ಸೋಮವಾರ ಕಳಿಸಿಕೊಟ್ಟಿದೆ. ಈ ರೋಬೋಟ್‌ಗಳು ರಕ್ಷಣಾ ತಂಡಗಳಿಗೆ ಸ್ಥಳದ ಪರಿಸ್ಥಿತಿ ಬಗ್ಗೆ ಮುನ್ಸೂಚನೆ ನೀಡಿ ಅವರಿಗೆ ಮಾರ್ಗದರ್ಶನ ಮಾಡಲಿವೆ.20 ಕೇಜಿ ಹಾಗೂ 50 ಕೇಜಿ ತೂಕದ 2 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಇವು ರಂಧ್ರ ಕೊರೆಯುವಾಗ ರಕ್ಷಣಾ ತಂಡಗಳಿಗೆ, ಅಲ್ಲಿನ ಭೂಮಿ ಹಾಗೂ ಸುರಂಗದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತವೆ. ಸ್ಥಳದಲ್ಲಿ ಮಣ್ಣಿನ ಪರಿಸ್ಥಿತಿ ಹಾಗೂ ಸುರಂಗದ ಸ್ಥಿತಿ ಹೇಗಿದೆ? ಮಣ್ಣು ಕುಸಿಯುವ ಸಂಭವ ಇದೆಯೆ ಅಥವಾ ಮಣ್ಣನ್ನು ಸಲೀಸಾಗಿ ಕೊರೆದು ಮುಂದೆ ಸಾಗಬಹುದೆ ಎಂಬ ಮಾಹಿತಿ ನೀಡುತ್ತವೆ. ಅಲ್ಲದೆ, ಯಾವ ಸ್ಥಳದಲ್ಲಿ 41 ಕಾರ್ಮಿಕರು ಸಿಲುಕಿದ್ದಾರೆ ಎಂಬ ಮಾಹಿತಿಯನ್ನೂ ನೀಡುತ್ತವೆ.ಈಗಾಗಲೇ 2 ರೋಬೋಟ್‌ಗಳನ್ನು ಹೊತ್ತ ಡಿಆರ್‌ಡಿಒ ತಜ್ಞರ ತಂಡ ಸೋಮವಾರ ಸಿಲ್‌ಕ್ಯಾರಾದಲ್ಲಿ ಬೀಡುಬಿಟ್ಟಿದೆ.