ದಸರಾ ಸಂಗೀತ ಸಂಜೆ: ರಾಜೇಶ್ ಕೃಷ್ಣನ್ ಹಾಡಿನ‌ ಮೋಡಿ

| Published : Oct 21 2023, 12:30 AM IST

ಸಾರಾಂಶ

ಪ್ರೇಕ್ಷಕರನ್ನು ಹಿಡಿದಿಡಲು ಚಾಮರಾಜನಗರ ಜಿಲ್ಲಾ ದಸರಾದ ಕೊನೆಯ ದಿನ ರಾಜೇಶ್ ಕೃಷ್ಣನ್ ಸಂಗೀತ ಯಶಸ್ವಿಯಾಯಿತು. ಆರಂಭದ ಮೂರು ದಿನ ಪ್ರೇಕ್ಷಕರ ಕೊರತೆ ಎದುರಿಸಿದ್ದ ಕಾರ್ಯಕ್ರಮಗಳಿಗೆ ರಾಜೇಶ್ ಕೃಷ್ಣನ್ ಕಾರ್ಯಕ್ರಮ ಮೆರುಗು ನೀಡಿತು. ರಥದ ಬೀದಿ, ದೇವಾಲಯ ಮುಂಭಾಗ, ಚಾಮರಾಜೇಶ್ವರ ಉದ್ಯಾನವನದವರೆಗೂ ಜನರು ನಿಂತು ರಾಜೇಶ್ ಕೃಷ್ಣನ್ ಅವರ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಪ್ರೇಕ್ಷಕರನ್ನು ಹಿಡಿದಿಡಲು ಚಾಮರಾಜನಗರ ಜಿಲ್ಲಾ ದಸರಾದ ಕೊನೆಯ ದಿನ ರಾಜೇಶ್ ಕೃಷ್ಣನ್ ಸಂಗೀತ ಯಶಸ್ವಿಯಾಯಿತು. ಆರಂಭದ ಮೂರು ದಿನ ಪ್ರೇಕ್ಷಕರ ಕೊರತೆ ಎದುರಿಸಿದ್ದ ಕಾರ್ಯಕ್ರಮಗಳಿಗೆ ರಾಜೇಶ್ ಕೃಷ್ಣನ್ ಕಾರ್ಯಕ್ರಮ ಮೆರುಗು ನೀಡಿತು. ರಥದ ಬೀದಿ, ದೇವಾಲಯ ಮುಂಭಾಗ, ಚಾಮರಾಜೇಶ್ವರ ಉದ್ಯಾನವನದವರೆಗೂ ಜನರು ನಿಂತು ರಾಜೇಶ್ ಕೃಷ್ಣನ್ ಅವರ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದರು. ‘ಯಾರೋ ಕಣ್ಣಲ್ಲಿ ಕಣ್ಣನಿಟ್ಟು’ ಎಂಬ ಹಾಡಿನ ಮೂಲಕ ಸಂಗೀತ ರಸಸಂಜೆ ಆರಂಭಿಸಿದ ರಾಜೇಶ್ ಕೃಷ್ಣನ್ ‘ಓ..ಗೆಳೆಯ-ಜೀವದ ಗೆಳೆಯ’, ‘ಉಸಿರೇ-ಉಸಿರೇ’ ಹಾಡಿನ ಮೂಲಕ ಸಂಗೀತ ರಸದೌತಣ ಬಡಿಸಿದರು‌. ‘ರುಕ್ಕಮ್ಮ’ ಚಿತ್ರಗೀತೆಗಂತೂ ಜನರು ಹುಚ್ಚೆದ್ದು ಕುಣಿದರು ಶಾಸಕ ಎ.ಆರ್‌. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮತ್ತು ಎಡಿಸಿ ಗೀತಾ ಹುಡೇದ ಅವರು ಭಾಗವಹಿಸಿ ಹಾಡು ಕೇಳಿ ಸಂಭ್ರಮಿಸಿದರು. ದಸರಾ ಮಹೋತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ವತಿಯಿಂದ ಗಾಯಕ ರಾಜೇಶ್‌ ಕೃಷ್ಣನ್‌ ಅವರನ್ನು ಸನ್ಮಾನಿಸಲಾಯಿತು. ದೀಪೋತ್ಸವ ಸಂಭ್ರಮ: ಇದೇ ಮೊದಲ ಬಾರಿಗೆ ಗಡಿಜಿಲ್ಲೆ ಚಾಮರಾಜನಗರದ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ನವರಾತ್ರಿ ದೀಪೋತ್ಸವ ನಡೆಯಿತು.ದೇವಾಲಯದ ಆವರಣದಲ್ಲಿ ನವರಾತ್ರಿ ದೀಪಗಳನ್ನು ಶುಕ್ರವಾರ ಸಂಜೆ ಬೆಳಗಿಸಿ ಮಹಿಳೆಯರು, ಯುವತಿಯರು ನವರಾತ್ರಿ ಸಂಭ್ರಮ ಹೆಚ್ಚಿಸಿದರು.ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಡಿಸಿ ಗೀತಾ ಹುಡೇದ ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.ದೇವಾಲಯದ ಸಾಲುಗುಡಿ, ನಂದಿ, ಪ್ರಾಂಗಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ ನವರಾತ್ರಿ ದಿನದಂದು ಇಷ್ಟಾರ್ಥಗಳನ್ನು ಬೇಡಿದರು ತಹಸೀಲ್ದಾರ್‌ ಬಸವರಾಜು, ಗ್ರಾಮಆಡಳಿತಾಧಿಕಾರಿ ಮಹೇಶ್‌ ಇತರರು ಭಾಗವಹಿಸಿದ್ದರು. --- ಚಿತ್ರಗಳನ್ನು ಕಳುಹಿಸಲಾಗಿದೆ--------