ದಸರಾ ಸ್ಥಬ್ದಚಿತ್ರ ಪ್ರದರ್ಶನ: ದಕ್ಷಿಣಕಾಶಿ ''''''''''''''''ಶಿವಗಂಗೆ'''''''''''''''' ಆಯ್ಕೆ

| Published : Oct 18 2023, 01:00 AM IST

ದಸರಾ ಸ್ಥಬ್ದಚಿತ್ರ ಪ್ರದರ್ಶನ: ದಕ್ಷಿಣಕಾಶಿ ''''''''''''''''ಶಿವಗಂಗೆ'''''''''''''''' ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಸ್ಥಬ್ಧ ಚಿತ್ರವು ಮೈಸೂರು ದಸರಾ ಉತ್ಸವದಲ್ಲಿ ಅನಾವರಣಗೊಳ್ಳಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಶಿವಗಂಗೆ ಬೆಟ್ಟದ ಸ್ಥಬ್ದಚಿತ್ರವನ್ನು ದಸರಾ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲು ಈಗಾಗಲೇ ಸಿದ್ಧತೆ ನಡೆಸಿದೆ.
ಶಿವಗಂಗೆ ಬೆಟ್ಟದ ಸ್ಥಬ್ದಚಿತ್ರವು ಮೈಸೂರು ದಸರಾ ಉತ್ಸವದಲ್ಲಿ ಅನಾವರಣ ರುದ್ರೇಶ್ ಹೊನ್ನೇನಹಳ್ಳಿ ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಸ್ಥಬ್ಧ ಚಿತ್ರವು ಮೈಸೂರು ದಸರಾ ಉತ್ಸವದಲ್ಲಿ ಅನಾವರಣಗೊಳ್ಳಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಶಿವಗಂಗೆ ಬೆಟ್ಟದ ಸ್ಥಬ್ದಚಿತ್ರವನ್ನು ದಸರಾ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲು ಈಗಾಗಲೇ ಸಿದ್ಧತೆ ನಡೆಸಿದೆ. ಕಳೆದ ವರ್ಷ ಬೆಂ.ಗ್ರಾ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಸ್ಥಬ್ದಚಿತ್ರವಾಗಿ ಗಂಗರಸರ ರಾಜಧಾನಿ ಮಣ್ಣಿ (ಮಾನ್ಯಖೇಟ) ವಿಶೇಷವಾಗಿ ಗಮನ ಸೆಳೆದಿತ್ತು. ಈ ಬಾರಿ ದಕ್ಷಿಣ ಕಾಶಿಯೆಂದೇ ಸುಪ್ರಸಿದ್ಧವಾಗಿರುವ ನೆಲಮಂಗಲದ ಶಿವಗಂಗೆ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಸಿದ್ದಗೊಳ್ಳುತ್ತಿದೆ. ಮರುಸೃಷ್ಟಿ: ಸ್ಥಬ್ದಚಿತ್ರದಲ್ಲಿ ಮೊದಲಿಗೆ ನಂದಿ ಎದುರು ಅಸೀನವಾಗಿರುವುದು, ಶಿವ ಪಾರ್ವತಿಯರ ದರ್ಶನ, ನಂತರದಲ್ಲಿ ಶ್ರೀ ಹೊನ್ನಮ್ಮದೇವಿ, ಗಂಗಾಧರೇಶ್ವರ ಸ್ವಾಮಿ ದೇಗುಲ, ಬೆಟ್ಟದ ಮಧ್ಯೆ ಸಿಗುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೆಲೆ ಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರಣ, ಸುತ್ತಮುತ್ತಲ ಬೆಟ್ಟದ ವಿಹಂಗಮ ಚಿತ್ರಣ, ಕಡೆಯಲ್ಲಿ ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರಣದ ನೀಲನಕ್ಷೆಯಂತೆ ಸ್ಥಬ್ದಚಿತ್ರ ತಯಾರಾಗಲಿದ್ದು, ಮರುಸೃಷ್ಟಿ ಕಾಣಲಿದೆ. ಎರಡನೇ ಗರಿ: ದಸರಾ ಉತ್ಸವ ಸಮಿತಿ ನಿಯಮಗಳಂತೆ, ಜಿ.ಪಂನಿಂದ ಜಿಲ್ಲೆಯ ಇತಿಹಾಸ ತಜ್ಞರು, ಕಲಾವಿದರು, ಸಾಹಿತಿಗಳಿಂದ ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಸಲಹೆ ಸೂಚನೆ ಆಹ್ವಾನಿಸಲಾಗಿತ್ತು. ಅದರಂತೆ ನೆಲಮಂಗಲದ ಶಿವಗಂಗೆ ಆಯ್ಕೆಯಾಗಿದೆ. ಬಿಂದಾಜಿಪುರದ ವೀಣೆ ತಯಾರಿಕೆ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಮಣ್ಣಿ ಗ್ರಾಮವನ್ನು ಆಯ್ಕೆ ಮಾಡಿ ದಸರಾ ಉತ್ಸವ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಇವುಗಳನ್ನು ಪರಿಶೀಲನೆ ನಡೆಸಿದ ಸಮಿತಿಯಿಂದ ಅಂತಿಮವಾಗಿ ಮಣ್ಣಿ ಗ್ರಾಮದ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಬಾರಿ ಶಿವಗಂಗೆಗೆ ಅವಕಾಶ ದೊರೆತಿರುವುದು, ನೆಲಮಂಗಲ ತಾಲೂಕಿಗೆ ಎರಡನೇ ಗರಿ, ಈ ಹಿಂದೆ ಶಿವಗಂಗೆ ಇತಿಹಾಸ ದೆಹಲಿಯ ಗಣರಾಜ್ಯೋತ್ಸವದಲ್ಲಿ ಕಂಡಿದ್ದೇವು, ಇದೀಗ ದಸರಾದಲ್ಲಿ ಕಾಣುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ಶಿವಗಂಗೆ ದೇವಾಲಯದ ಪ್ರಧಾನ ಅರ್ಚಕ ರಾಜು ದೀಕ್ಷಿತ್ ಸಂತಸ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಆಕಾರ: ಶಿವಗಂಗೆ ಬೆಟ್ಟ ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಕಾಣಿಸುತ್ತೆ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುವುದೆ ಈ ಕ್ಷೇತ್ರದ ವಿಶೇಷವಾಗಿದೆ ---- ಕೋಟ್ 1 ದಸರಾ ಜಂಬೂ ಸವಾರಿ ಉತ್ಸವದಲ್ಲಿ ಜಿಲ್ಲೆಯಿಂದ ವಿಶೇಷ ಎನಿಸುವ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಶಿವಗಂಗೆ ಆಯ್ಕೆಯಾಗಿದ್ದು, ಮೈಸೂರಿನಲ್ಲಿ ಸ್ಥಬ್ದಚಿತ್ರ ತಯಾರಿ ನಡೆದಿದೆ. ಶಿವಗಂಗೆ ಪರಿಚಯ, ಪ್ರಾಕೃತಿಕ ಸೌಂದರ್ಯ, ಭೌಗೋಳಿಕ ರೂಪದ ಜೊತೆಗೆ ಗತಕಾಲದ ಇತಿಹಾಸ ಅನಾವರಣಗೊಳಿಸುವ ಅವಕಾಶ ಲಭಿಸಿದೆ. ಮಹಮದ್ ರಫೀಕ್ ಉಪನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ --- ಕೋಟ್ 2 ನಾಡಹಬ್ಬದಲ್ಲಿ ಶಿವಗಂಗೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸುತ್ತದೆ, ಮಣ್ಣೆ ನಂತರ ಶಿವಗಂಗೆ, ನನ್ನ ಕ್ಷೇತ್ರದಲ್ಲಿ ಹಲವಾರು ಇತಿಹಾಸ ಪ್ರವರ್ಧಮಾನಕ್ಕೆ ಬರುತ್ತಿರುವುದು, ಇತಿಹಾಸ ತಜ್ಞರ ಪರಿಶ್ರಮಕ್ಕೆ ಸಂದ ಗೌರವ ಎನಿಸುತ್ತಿದೆ ಎನ್.ಶ್ರೀನಿವಾಸ್, ಶಾಸಕ ನೆಲಮಂಗಲ