ಸಾರಾಂಶ
ಯುಗಾದಿಗೆ ಕವಿಗೀತೆ - ಪಯಣ ಮೊದಲಾಗುತಿದೆ ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಪಯಣ ಮೊದಲಾಗುತಿದೆ
ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದಕೊಳೆಯ ಬೆಳೆ;- ರಂಗಮಂದಿರವು!ಈ ಯುಗಾದಿಯ ಮಾತು ಕೇಳುತಿದೆ ಮರಮರಳಿಮೊದಲಾಗುತ್ತಿದೆ ಯುಗವು, ನರನ ಜಗವು;ವರುಷವರುಷವು ನಮ್ಮ ಪಯಣ ಮೊದಲಾಗುತಿದೆ;ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!
-ಗೋಪಾಲಕೃಷ್ಣ ಅಡಿಗ
ಹೆಜ್ಜೆಗೊಂದು ಹೊಸ ಯುಗಾದಿ
ಮಾವು ನಾವು ಬೇವು ನಾವುನೋವು ನಲಿವು ನಮ್ಮದುಹೂವು ನಾವು ಹಸಿರು ನಾವುಬೇವು ಬೆಲ್ಲ ನಮ್ಮದುಹೊಸತು ವರುಷ ಹೊಸತು ಹರುಷಹೊಸತು ಬಯಕೆ ನಮ್ಮವುತಳಿರ ತುಂಬಿದಾಸೆಯೆಲ್ಲಹರಕೆಯೆಲ್ಲ ನಮ್ಮವುಹೆಜ್ಜೆಗೊಂದು ಹೊಸ ಯುಗಾದಿಚೆಲುವು ನಮ್ಮ ಜೀವನನಮ್ಮ ಹಾದಿಯೋ ಅನಾದಿಪಯಣವೆಲ್ಲ ಪಾವನ
-ಕೆ ಎಸ್ ನರಸಿಂಹ ಸ್ವಾಮಿ
ಮೊದಲ ಚಂದ್ರ ವೀಕ್ಷಣೆ
ವರ್ಷಾದಿಯ ತಿಳಿನಗೆಯ ಮೊಗವೆಶುಭ ಯುಗಾದಿ ಕರೆವ ಸೊಗವೆಋತುಗಳ ಗಣನಾಯಕ ಶರಣೆನ್ನುವೆ ಶುಭದಾಯಕ.ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆಅಸುರ ವಧೆಯ ವೀರಗಾಥೆಕನ್ನಡಿಗರ ಗೆಲವ ಗೀತೆ.ಎರಡು ದಿನದ ಹಬ್ಬದಂದುಬೆಳಕಿನಲ್ಲಿ ಬಾಳು ಮಿಂದುಮೊದಲ ಚಂದ್ರ ವೀಕ್ಷಣೆಜನಕೆ ತರಲಿ ರಕ್ಷಣೆ.
- ಕೆ ಎಸ್ ನಿಸಾರ್ ಅಹಮದ್
ಯುಗಾದಿ ಹಾದಿ
ಬಂದ ಚೈತ್ರದ ಹಾದಿ ತೆರೆದಿದೆಬಣ್ಣ-ಬೆಡಗಿನ ಮೋಡಿಗೆಹೊಸತು ವರ್ಷದ ಹೊಸತು ಹರ್ಷದಬೇವು-ಬೆಲ್ಲದ ಬೀಡಿಗೆ.ಕೊಂಬೆ ಕೊಂಬೆಯ ತುಂಬ ಪುಟಿದಿದೆಅಂತರಂಗದ ನಂಬಿಕೆಚಿಗುರು ಹೂವಿನ ಬಣ್ಣದಾರತಿಯಾವುದೋ ಆನಂದಕೆ !
-ಜಿ ಎಸ್ ಶಿವರುದ್ರಪ್ಪ
ಹೊಸತು ಜನ್ಮ
ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವಜಾತಕೆ!ಒಂದೆ ಒಂದು ಜನ್ಮದಲ್ಲಿಒಂದೆ ಬಾಲ್ಯ ಒಂದೆ ಹರಯನಮಗದಷ್ಟೆ ಏತಕೆ?
-ಅಂಬಿಕಾತನಯದತ್ತ
ನವ ಸಂವತ್ಸರ!
ತೊಲಗಲಿ ದುಃಖ, ತೊಲಗಲಿ ಮತ್ಸರ,ಪ್ರೇಮಕೆ ಮೀಸಲು ನವ ಸಂವತ್ಸರ!ನಮ್ಮೆದೆಯಲ್ಲಿದೆ ಸುಖನಿಧಿ ಎಂದುಹೊಸ ಹೂಣಿಕೆಯನು ತೊಡಗಿಂದು!ಮಾವಿನ ಬೇವಿನ ತೋರಣ ಕಟ್ಟು,ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!ಜೀವನವೆಲ್ಲಾ ಬೇವೂಬೆಲ್ಲ;ಎರಡೂ ಸವಿವನೆ ಕಲಿ ಮಲ್ಲ!
-ಕುವೆಂಪು