ಸಾರಾಂಶ
ತನ್ನ ಫೇಸ್ಬುಕ್ ಗೆಳೆಯನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ಹೋಗಿದ್ದ 5 ತಿಂಗಳ ಬಳಿಕ ತನ್ನ ಮಕ್ಕಳನ್ನು ನೋಡಲು ಭಾರತಕ್ಕೆ ಮರಳಿರುವ ಅಂಜು ಅಲಿಯಾಸ್ ಫಾತಿಮಾ, ತನ್ನ ಪತಿ ಅರವಿಂದ್‌ಗೆ ವಿಚ್ಛೇದನ ನೀಡಿ 2 ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಬಂದಿದ್ದಾಗಿ ತಿಳಿಸಿದ್ದಾಳೆ
ನವದೆಹಲಿ: ತನ್ನ ಫೇಸ್ಬುಕ್ ಗೆಳೆಯನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ಹೋಗಿದ್ದ 5 ತಿಂಗಳ ಬಳಿಕ ತನ್ನ ಮಕ್ಕಳನ್ನು ನೋಡಲು ಭಾರತಕ್ಕೆ ಮರಳಿರುವ ಅಂಜು ಅಲಿಯಾಸ್ ಫಾತಿಮಾ, ತನ್ನ ಪತಿ ಅರವಿಂದ್‌ಗೆ ವಿಚ್ಛೇದನ ನೀಡಿ 2 ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಬಂದಿದ್ದಾಗಿ ತಿಳಿಸಿದ್ದಾಳೆ. ಬುಧವಾರ ಪಂಜಾಬ್ ಗುಪ್ತಚರ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದಾಗ ತನ್ನ ಮಕ್ಕಳನ್ನೂ ತನ್ನೊಂದಿಗೇ ಕರೆದೊಯ್ಯಲು ಬಂದಿದ್ದಾಗಿ ಅಂಜು ಬಾಯಿಬಿಟ್ಟಿದ್ದಾಳೆ. ಅಲ್ಲದೇ ಪಾಕ್ ಸೇನೆಯೊಂದಿಗೆ ತನಗೆ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಆನ್‌ಲೈನ್‌ನಲ್ಲಿ ಪರಿಚಿತನಾಗಿದ್ದ ತನ್ನ ಪಾಕಿಸ್ತಾನಿ ಗೆಳಯ ನಸ್ರುಲ್ಲಾ(29)ಗಾಗಿ, ಪತಿ, ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ 34 ವರ್ಷದ ರಾಜಸ್ಥಾನ ಮೂಲದ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾನನ್ನು ಮದುವೆಯಾಗಿದ್ದಳು.