ಸಾರಾಂಶ
ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮರಗಾಯಿ ದೇವಿ ದೇವಸ್ಥಾನದ ಕಟ್ಟಡವನ್ನು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಸಿದರು.
ಬೆಳಗಾವಿ: ತಾಲೂಕಿನ ಹಂಗರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮರಗಾಯಿ ದೇವಿ ದೇವಸ್ಥಾನದ ಕಟ್ಟಡವನ್ನು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಸಿದರು. ಇದೇ ಸಮಯದಲ್ಲಿ ವಾಸ್ತುಶಾಂತಿ, ಕಳಸಾರೋಹನ, ಪ್ರಾಣ ಪ್ರತಿಷ್ಠಾಪನೆ ಹಾಗೂ ಅಭಿಷೇಕ ಕಾರ್ಯಕ್ರಮದಲ್ಲಿ ಸಹ ಅವರು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಬಾಳು ಪಾಟೀಲ, ವಿಷ್ಣು ಸೋನಾಲ್ಕರ್, ಗೋಪಾಲ್ ಘೋಡ್ಸೆ, ಉಮೇಶ ಸೋನಾಲ್ಕರ್, ದಿಲೀಪ್ ಕಾಂಬಳೆ, ಕೃಷ್ಣ ಹುಂದ್ರೆ, ಸುಭಾಷ್ ತಳವಾರ, ಯಶವಂತ ನಾಯ್ಕ್, ಮಲ್ಲಪ್ಪ ಕಾಂಬಳೆ, ಮೀನಾ ಘೋಡ್ಸೆ, ಸವಿತಾ ನಾಯಕ್, ರಾಮಚಂದ್ರ ಹಲಕರಣಿಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
------15ಬಿಇಎಲ್33